Fact Check: ಕೊರೋನಾ ವೇಳೆ ಬಾತುಕೋಳಿಗಳ ಜೊತೆ ಮೋದಿ ಫೋಟೋಶೂಟ್?
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಬಾತುಕೋಳಿಗಳ ಫೋಟೋ ತೆಗೆಯುತ್ತಿರುವ ಮತ್ತು ಪುಸ್ತಕ, ದಿನಪತ್ರಿಕೆ, ಲ್ಯಾಪ್‌ಟಾಪನ್ನು ಒಟ್ಟಿಗೇ ಇಟ್ಟುಕೊಂಡು ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಿಜನಾ ಈ ಸುದ್ದಿ?
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಬಾತುಕೋಳಿಗಳ ಫೋಟೋ ತೆಗೆಯುತ್ತಿರುವ ಮತ್ತು ಪುಸ್ತಕ, ದಿನಪತ್ರಿಕೆ, ಲ್ಯಾಪ್‌ಟಾಪನ್ನು ಒಟ್ಟಿಗೇ ಇಟ್ಟುಕೊಂಡು ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕೊರೋನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನಲ್ಲೂ ದೇಶದ ಪ್ರಧಾನಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಅಧಿಕೃತ ಟ್ವೀಟರ್ ಇದನ್ನು ಪೋಸ್ಟ್ ಮಾಡಿ, ಕೊರೋನಾ ಬಿಕ್ಕಟ್ಟು ಮತ್ತು ಆರ್ಥಿಕ ಕುಸಿತದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ನೆರವು ನೀಡುವುದನ್ನು ಬಿಟ್ಟು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆಂದು ದೂರಿದೆ. ಇದೀಗ ವೈರಲ್ ಆಗುತ್ತಿದೆ.
Fact Check | ಕುಸಿದು ಬಿದ್ದ ಬೆಂಗಳೂರು ಫ್ಲೈ ಓವರ್!
ಆದರೆ ನಿಜಕ್ಕೂ ಪ್ರಧಾನಿ ಮೋದಿ ಅವರ ವೈರಲ್ ಫೋಟೋಗಳು ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಿಸಿರುವ ಈ ಸಂದರ್ಭದಲ್ಲಿ ತೆಗೆದಿದ್ದೇ ಎಂದು ಪರಿಶೀಲಿಸಿದಾಗ ಹಳೆಯ ಫೋಟೋಗಳನ್ನು ಈಗ ಪೋಸ್ಟ್ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ.
ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2012ರಲ್ಲಿ ಅಂದರೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಂಡೇ ಗಾರ್ಡಿಯನ್‌ನಲ್ಲಿ ಪ್ರಕಟಸಿದ್ದ ಸಂದರ್ಶನದಲ್ಲಿ ಇದೇ ರೀತಿಯ ಫೋಟೋಗಳು ಪತ್ತೆಯಾಗಿವೆ. ಮೋದಿ ದಿನಪತ್ರಿಕೆ ಓದುತ್ತಿರುವ ಫೋಟೋವೂ 2012ರದ್ದೇ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮೋದಿ ಫೋಟೋಶೂಟ್ ಮಾಡಿಸಿದ್ದಾರೆ ಎಂಬುದು ಸುಳ್ಳುಸುದ್ದಿ.
- ವೈರಲ್ ಚೆಕ್