Asianet Suvarna News Asianet Suvarna News
55 results for "

Brisbane

"
Brisbane Test Play Abandoned Due to Wet Outfield kvnBrisbane Test Play Abandoned Due to Wet Outfield kvn

ಬ್ರಿಸ್ಬೇನ್ ಟೆಸ್ಟ್: ಮಳೆಗೆ ಆಹುತಿಯಾದ ಎರಡನೇ ದಿನದಾಟ

ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಆಸ್ಟ್ರೇಲಿಯಾ ತಂಡ 369 ರನ್‌ ಬಾರಿಸಿ ಸರ್ವಪತನ ಕಂಡಿತು. ಇನ್ನು ಎರಡನೇ ಸೆಷನ್‌ನಲ್ಲಿ 26 ಓವರ್ ಬೌಲಿಂಗ್‌ ಎದುರಿಸಿದ ಟೀಂ ಇಂಡಿಯಾ ಆರಂಭಿಕ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಕೇವಲ 62 ರನ್‌ ಗಳಿಸಿದೆ.

Cricket Jan 16, 2021, 2:35 PM IST

Brisbane Test Rain Delays Start Of Play After Tea break kvnBrisbane Test Rain Delays Start Of Play After Tea break kvn

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ವರುಣನ ಕಾಟ

ಚಹಾ ವಿರಾಮದ ವೇಳೆಗೆ ಭಾರತ ತಂಡ 2 ವಿಕೆಟ್‌ ಕಳೆದುಕೊಂಡು 62 ರನ್‌ ಬಾರಿಸಿದ್ದು, ಇನ್ನೂ ಮೊದಲ ಇನಿಂಗ್ಸ್‌ನಲ್ಲಿ 307 ರನ್‌ಗಳ ಹಿನ್ನಡೆಯಲ್ಲಿದೆ. ಚಹಾ ವಿರಾಮದ ಬಳಿಕ ಏಕಾಏಕಿ ಸುರಿದ ಮಳೆಗೆ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

Cricket Jan 16, 2021, 12:04 PM IST

Brisbane Test Nathan Lyon gets the big wicket of Rohit Sharma kvnBrisbane Test Nathan Lyon gets the big wicket of Rohit Sharma kvn

ಬ್ರಿಸ್ಬೇನ್ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ

ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 369 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಅಜಿಂಕ್ಯ ರಹಾನೆ ಪಡೆ ಯಶಸ್ವಿಯಾಗಿದೆ.

Cricket Jan 16, 2021, 10:25 AM IST

Brisbane Test Australia All out at 369 runs Gabba test Match kvnBrisbane Test Australia All out at 369 runs Gabba test Match kvn

ಬ್ರಿಸ್ಬೇನ್‌ ಟೆಸ್ಟ್‌: ಆಸ್ಟ್ರೇಲಿಯಾ ಆಲೌಟ್‌ @369

ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 274 ರನ್‌ ಬಾರಿಸಿದ್ದ ಆಸ್ಟ್ರೇಲಿಯಾ ತಂಡ, ಎರಡನೇ ದಿನವೂ ಎಚ್ಚರಿಕೆಯ ಆಟಕ್ಕೆ ಮೊರೆ ಹೋಯಿತು. ನಾಯಕ ಟಿಮ್‌ ಪೈನ್‌ 104 ಎಸೆತಗಳನ್ನು ಎದುರಿ ಭರ್ತಿ 50 ರನ್ ಬಾರಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಆಲ್ರೌಂಡರ್‌ ಕ್ಯಾಮರೋನ್ ಗ್ರೀನ್‌ 47 ರನ್ ಬಾರಿಸಿ ಕೇವಲ 3 ರನ್‌ಗಳಿಂದ ಅರ್ಧಶತಕ ವಂಚಿತರಾದರು.

Cricket Jan 16, 2021, 8:12 AM IST

Brisbane Test T Natarajan creates unique record debut match against Australia kvnBrisbane Test T Natarajan creates unique record debut match against Australia kvn

ಪಾದಾರ್ಪಣೆ ಪಂದ್ಯದಲ್ಲೇ ಅಪರೂಪದ ದಾಖಲೆ ಬರೆದ ಟಿ ನಟರಾಜನ್‌

ಗಾಬಾ ಮೈದಾನದಲ್ಲಿ ಆರಂಭವಾದ 4ನೇ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಬುಶೇನ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 274 ರನ್‌ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುವ ಮುನ್ಸೂಚನೆ ನೀಡಿದೆ.

Cricket Jan 15, 2021, 5:50 PM IST

Brisbane Test Marnus Labuschagne rescues Australia after Loss early wickets kvnBrisbane Test Marnus Labuschagne rescues Australia after Loss early wickets kvn

ಲಬುಶೇನ್‌ ಆಕರ್ಷಕ ಶತಕ, ಆಸೀಸ್‌ಗೆ ಮೊದಲ ದಿನದ ಗೌರವ

ಗಾಬಾ ಮೈದಾನದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇನ್‌ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್‌ ಮಾಡಲಿಳಿದ ಡೇವಿಡ್‌ ವಾರ್ನರ್ ಹಾಗೂ ಮಾರ್ಕಸ್‌ ಹ್ಯಾರಿಸ್‌ ಅವರನ್ನು ಒಂದಂಕಿ ಮೊತ್ತಕ್ಕೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾದರು.

Cricket Jan 15, 2021, 1:23 PM IST

Brisbane Test Marnus Labuschagne Matthew Wade Rebuild After Steve Smith Departure kvnBrisbane Test Marnus Labuschagne Matthew Wade Rebuild After Steve Smith Departure kvn

ಲಬುಶೇನ್‌ ಫಿಫ್ಟಿ; ಭಾರತಕ್ಕೆ ಆಸೀಸ್‌ ತಿರುಗೇಟು..!

ಆರಂಭದಲ್ಲೇ ಕೇವಲ 17 ರನ್‌ಗಳಾಗುವಷ್ಟರಲ್ಲಿ ಆಸ್ಟ್ರೇಲಿಯಾ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಹ್ಯಾರಿಸ್‌ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳು ತಂಡಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟಿದ್ದರು.

Cricket Jan 15, 2021, 10:30 AM IST

Brisbane Test Team India gets early breakthrough against Australia kvnBrisbane Test Team India gets early breakthrough against Australia kvn

ಬ್ರಿಸ್ಬೇನ್ ಟೆಸ್ಟ್‌: ಟೀಂ ಇಂಡಿಯಾದಿಂದ ಉತ್ತಮ ಆರಂಭ

ಎಡಗೈ ಯಾರ್ಕರ್ ಸ್ಪೆಷಲಿಸ್ಟ್‌ ಟಿ. ನಟರಾಜನ್ ಹಾಗೂ ಆಫ್‌ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಬುಮ್ರಾ ಬದಲಿಗೆ ನಟರಾಜನ್ ಹಾಗೂ ಜಡೇಜಾ ಬದಲಿಗೆ ಸುಂದರ್‌ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Cricket Jan 15, 2021, 8:46 AM IST

BCCI intervenes after Indian Cricket Team denied basic facilities in Brisbane hotel kvnBCCI intervenes after Indian Cricket Team denied basic facilities in Brisbane hotel kvn

ಹೋಟೆಲಲ್ಲಿ ಟೀಂ ಇಂಡಿಯಾಗೆ ಈಜುಕೊಳ, ಜಿಮ್‌ ಬಳಕೆಗೆ ಸಮ್ಮತಿ

ಮಂಗಳವಾರು ಟೀಂ ಇಂಡಿಯಾ ಹೋಟೆಲ್‌ಗೆ ಪ್ರವೇಶಿಸಿದ ವೇಳೆ ಕೆಲ ಷರತ್ತುಗಳನ್ನು ಸ್ಥಳೀಯ ಆಡಳಿತ ವಿಧಿಸಿತ್ತು. ಬಳಿಕ ಈ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಜತೆ ಬಿಸಿಸಿಐ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.

Cricket Jan 14, 2021, 11:46 AM IST

Will Pucovski ruled out of Brisbane Test Marcus Harris recalled against India final Test kvnWill Pucovski ruled out of Brisbane Test Marcus Harris recalled against India final Test kvn

ಭಾರತ ಎದುರಿನ ಬ್ರಿಸ್ಬೇನ್ ಟೆಸ್ಟ್‌ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ; ಒಂದು ಬದಲಾವಣೆ..!

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್ ವಿಲ್‌ ಪುಕೂವ್ಸ್ಕಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಮಾರ್ಕಸ್‌ ಹ್ಯಾರಿಸ್‌ಗೆ ಅವಕಾಶ ಕಲ್ಪಿಸಲಾಗಿದೆ.

Cricket Jan 14, 2021, 9:49 AM IST

Count down Start for India Vs Australia Final Test at Gabba Test kvnCount down Start for India Vs Australia Final Test at Gabba Test kvn

ಭಾರತಕ್ಕೀಗ ಆಸೀಸ್‌ ಎದುರು ಫೈನಲ್‌ ಟೆಸ್ಟ್‌..!

ಸದ್ಯದ ಪರಿಸ್ಥಿತಿಯಲ್ಲಿ ಅಂತಿಮ 11ರ ಪಟ್ಟಿಯನ್ನು ಸಿದ್ಧಪಡಿಸುವುದು ನಾಯಕ ರಹಾನೆ ಹಾಗೂ ಕೋಚ್‌ ರವಿಶಾಸ್ತ್ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿ 1-1ರಲ್ಲಿ ಸಮಗೊಂಡಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಆಸೀಸ್‌ ಎದುರು ನೋಡುತ್ತಿದೆ. ಆದರೆ ಈ ಮಟ್ಟದ ಹೋರಾಟ ಪ್ರದರ್ಶಿಸಿ ಟ್ರೋಫಿ ಇಲ್ಲದೆ ಹಿಂದಿರುಗಲು ಭಾರತ ತಂಡ ಸಿದ್ಧವಿಲ್ಲ. ಹೀಗಾಗಿ, ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

Cricket Jan 14, 2021, 8:21 AM IST

Team India faces Massive injury hit ahead of Brisbane Test kvnTeam India faces Massive injury hit ahead of Brisbane Test kvn

4ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಗಾಯಾಘಾತ..!

ಎಡಗೈ ಹೆಬ್ಬೆರಳು ಮುರಿದಿರುವ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಲ್ರೌಂಡರ್‌ ರವೀಂದ್ರ ಜಡೇಜಾ, ಸ್ನಾಯು ಸೆಳೆತಕ್ಕೆ ಗುರಿಯಾಗಿರುವ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಸಹ ಬ್ರಿಸ್ಬೇನ್ ಟೆಸ್ಟ್‌ಗೆ ಲಭ್ಯರಿರುವುದಿಲ್ಲ. ಇನ್ನು ಸೊಂಟದ ನೋವಿನಿಂದ ಬಳಲುತ್ತಿರುವ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌, ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಕೈಗೆ ಬಲವಾದ ಪೆಟ್ಟು ತಿಂದ ಮಯಾಂಕ್‌ ಅಗರ್‌ವಾಲ್‌ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.

Cricket Jan 13, 2021, 12:46 PM IST

A five star prison A member of Indian team feeling the heat of bio-bubble life in Brisbane kvnA five star prison A member of Indian team feeling the heat of bio-bubble life in Brisbane kvn

ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾಗೆ ‘ಫೈವ್‌ ಸ್ಟಾರ್‌ ಜೈಲು’ ವಾಸ!

ಕ್ರೀಡಾಂಗಣದಿಂದ 4 ಕಿ.ಮೀ. ದೂರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಭಾರತ ತಂಡ, ‘ಫೈವ್‌ಸ್ಟಾರ್‌ ಜೈಲು ವಾಸ ಅನುಭವಿಸುತ್ತಿದೆ’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

Cricket Jan 13, 2021, 9:18 AM IST

Team India Cricketer Jasprit Bumrah Ruled Out Of Brisbane Test Due To Abdominal Strain Says Report kvnTeam India Cricketer Jasprit Bumrah Ruled Out Of Brisbane Test Due To Abdominal Strain Says Report kvn

ಜಡ್ಡು, ವಿಹಾರಿ ಬಳಿಕ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಬ್ರಿಸ್ಬೇನ್‌ ಟೆಸ್ಟ್‌ನಿಂದ ಔಟ್‌..!

ಸಿಡ್ನಿ: ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಘಟ್ಟ ಪ್ರವೇಶಿಸಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆ ಟೀಂ ಇಂಡಿಯಾವನ್ನು ಬಿಟ್ಟೂ ಬಿಡದಂತೆ ಕಾಡಲಾರಂಭಿಸಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೆಲವು ಆಟಗಾರರು ಗಾಯಕ್ಕೆ ತುತ್ತಾದರೆ, ಮತ್ತೆ ಕೆಲವು ಆಟಗಾರರು ಸರಣಿ ಆರಂಭವಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಬಳಿಕ ಇದೀಗ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ತಂಡದಿಂದ ಹೊರಬಿದ್ದಿದ್ದಾರೆ. 

Cricket Jan 12, 2021, 1:37 PM IST

Brisbane will Host India vs Australia 4th Test Confirms Cricket Australia kvnBrisbane will Host India vs Australia 4th Test Confirms Cricket Australia kvn

ಬ್ರಿಸ್ಬೇನ್‌ನಲ್ಲೇ ನಡೆಯಲಿದೆ 4ನೇ ಟೆಸ್ಟ್‌ ಪಂದ್ಯ: ಕ್ರಿಕೆಟ್‌ ಆಸ್ಪ್ರೇಲಿಯಾ

ಭಾರತ ತಂಡ ಬ್ರಿಸ್ಬೇನ್‌ನಲ್ಲಿ ಕ್ವಾರಂಟೈನ್‌ನಲ್ಲಿರಲು ಒಪ್ಪುತ್ತಿಲ್ಲ ಎಂದು ಆಸ್ಪ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಸ್ಪಷ್ಟಪಡಿಸಿರುವ ಹಾಕ್ಲೆ, ‘ಬಿಸಿಸಿಐನೊಂದಿಗೆ ನಾವು ಪ್ರತಿ ನಿತ್ಯ ಮಾತುಕತೆ ನಡೆಸುತ್ತಿದ್ದೇವೆ. ನಿಗದಿತ ವೇಳಾಪಟ್ಟಿಯಂತೆ ಪಂದ್ಯಗಳನ್ನಾಡಲು ಎರಡೂ ತಂಡಗಳು ಒಪ್ಪಿವೆ’ ಎಂದು ಹಾಕ್ಲೆ ಹೇಳಿದ್ದಾರೆ.
 

Cricket Jan 5, 2021, 5:33 PM IST