ಬ್ರಿಸ್ಬೇನ್‌(ಜ.14): 'ಫೈವ್ ಸ್ಟಾರ್‌ ಜೈಲು' ವಾಸದಿಂದ ಭಾರತ ತಂಡಕ್ಕೆ ಬಿಡುಗಡೆ ಸಿಕ್ಕಿದೆ. ಇಲ್ಲಿ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಆಟಗಾರರಿಗೆ ಜಿಮ್, ಈಜುಕೊಳ. ಲಿಫ್ಟ್ ಬಳಕೆಗೆ ಅನುಮತಿ ಸಿಕ್ಕಿದೆ.

ಮಂಗಳವಾರು ಟೀಂ ಇಂಡಿಯಾ ಹೋಟೆಲ್‌ಗೆ ಪ್ರವೇಶಿಸಿದ ವೇಳೆ ಕೆಲ ಷರತ್ತುಗಳನ್ನು ಸ್ಥಳೀಯ ಆಡಳಿತ ವಿಧಿಸಿತ್ತು. ಬಳಿಕ ಈ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಜತೆ ಬಿಸಿಸಿಐ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.

ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾಗೆ ‘ಫೈವ್‌ ಸ್ಟಾರ್‌ ಜೈಲು’ ವಾಸ!

ಖಾಸಗಿತನಕ್ಕೆ ಅಡ್ಡಿ ಬೇಡ: ಅಭಿಮಾನಿಗಳಿಗೆ ಕೊಹ್ಲಿ ಮನವಿ

ಮುಂಬೈ: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಖಾಸಗಿತನಕ್ಕೆ ಅಡ್ಡಿಪಡಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಪುತ್ರಿ ಎನ್ನುವ ಹೆಸರಿನಲ್ಲಿ ನಕಲಿ ಫೋಟೋಗಳು ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಹ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಖಾಸಗಿ ಆಸ್ಪತ್ರೆ ಬಳಿ ಬಿಗಿ ಭದ್ರತೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.