Asianet Suvarna News Asianet Suvarna News

80 ಕೋಟಿ ವೆಚ್ಚದ 'ಹಲಗಲಿ' ಚಿತ್ರದಿಂದ ಹೊರ ನಡೆದ ಡಾರ್ಲಿಂಗ್ ಕೃಷ್ಣ: ಕಾರಣವೇನು?

ಹಲಗಲಿ ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧವನ್ನ ಮಾಡಿದ್ದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತ ಕಥೆ. ಕಳೆದ ಫೆಬ್ರವರಿಯಲ್ಲಿ ಮುಹೂರ್ತ ಭಾಗ್ಯ ಕಂಡ ಈ ಚಿತ್ರ ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿನ ದುಬಾರಿ ಸಿನಿಮಾ ಅನ್ನುವ ಹೆಗ್ಗಳಿಕೆ ಪಡೆದಿತ್ತು. 
 

ಸಿನಿಮಾ ಕೆಲವರ ಪಾಲಿಗೆ ಕೇವಲ ಸಿನಿಮಾ ಅಲ್ಲ ಬದಲಿಗೆ ಅದೊಂದು ದಿವ್ಯ ತಪಸ್ಸು. ಈ ಕಾರಣಕ್ಕೆ ತಮ್ಮ ಕನಸಿನ ಚಿತ್ರಕ್ಕೆ, ಪಾತ್ರಕ್ಕೆ, ಅನೇಕರು ಇಲ್ಲಿ ವರ್ಷಾನುಗಟ್ಟಲೆ ತಮ್ಮ ಬದುಕನ್ನ ಮುಡಿಪಾಗಿಡ್ತಾರೆ. ಬೆವರು ಸುರಿಸುತ್ತಾರೆ. ಆದ್ರೆ ಎಲ್ಲರಿಂದ ಇದು ಸಾಧ್ಯ ಇಲ್ಲ. ಅವಕಾಶಗಳ ಮಹಾಪೂರ ಹರಿದು ಬರುವಾಗ ಕೇವಲ ಒಂದು ಚಿತ್ರಕ್ಕೆ ಸಮಯ ವ್ಯರ್ಥ ಮಾಡಲು ಬಹುತೇಕ ನಟರು ಮನಸ್ಸು ಮಾಡಲ್ಲ. ಹೀಗಾಗಿ ಕೆಲ ಸಿನಿಮಾಗಳು ಅಂತಹ ಹೀರೋಗಳಿಂದ ಕೈ ತಪ್ಪುತ್ತವೆ. ಈಗ ನಟ ಡಾರ್ಲಿಂಗ್ ಕೃಷ್ಣ ವಿಷದಲ್ಲೂ ಇದೆ ಆಗಿದೆ. ಹಲಗಲಿ ಅನ್ನೋ ಪೀರ್ಯಾಡಿಕ್ ಸಿನಿಮಾದಲ್ಲಿ ನಟಿಸಬೇಕಿದ್ದ ಕೃಷ್ಣ ಈಗ ಆ ಸಿನಿಮಾದಿಂದ ಹೊರ ಬಂದಿದ್ದಾರೆ. 

ಹಲಗಲಿ ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧವನ್ನ ಮಾಡಿದ್ದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತ ಕಥೆ. ಕಳೆದ ಫೆಬ್ರವರಿಯಲ್ಲಿ ಮುಹೂರ್ತ ಭಾಗ್ಯ ಕಂಡ ಈ ಚಿತ್ರ ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿನ ದುಬಾರಿ ಸಿನಿಮಾ ಅನ್ನುವ ಹೆಗ್ಗಳಿಕೆ ಪಡೆದಿತ್ತು. ಈ ಚಿತ್ರಕ್ಕಾಗಿ ನಟ ಕೃಷ್ಣ ಸ್ಟ್ರಿಕ್ಟ್​​ ಡಯೆಟ್ ಮಾಡಿ ಸಣ್ಣಗಾಗಿಗಿದ್ರು. ಕೆಲವ್ರು ಕಷ್ಣ ಯಾಕ್​​ ಹೀಗೆ ಆಗಿದ್ದಾರೆ ಅಂತಲೂ ಕೇಳಿದ್ರು. ಆದ್ರೆ ಈಗ ಈ ಸಿನಿಮಾದಿಂದಲೇ ಕೃಷ್ಣ ಹೊರ ಬಂದಿದ್ದಾರೆ. ಹಲಗಲಿ 1857ರ ಕಾಲಘಟ್ಟದ ಸಿನಿಮಾ. ಈ ಕಾರಣಕ್ಕೆ ಚಿತ್ರದ ನಿರ್ದೇಶಕ ಸುಕೇಶ್ ನಾಯಕ್ ಮತ್ತು ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ನಾಯಕ ಡಾರ್ಲಿಂಗ್ ಕೃಷ್ಣಗೆ ಎರಡು ವರ್ಷ ಕಾಲ್​ ಶೀಟ್​ ಕೇಳಿದ್ರು. 

ಹಲಗಲಿ ಹೊರತು ಪಡಿಸಿ ಬೇರೆ ಚಿತ್ರದ ಬಗ್ಗೆ ಆಲೋಚನೆ ಮಾಡಬೇಡಿ ಅಂದಿದ್ರಂತೆ. ಆದ್ರೆ ಸಿನಿಮಾ ಮಹೂರ್ಥ ಆಗಿ ಕೆಲವೇ ದಿನದಲ್ಲಿ ಡಾರ್ಲಿಂಗ್ ಕೃಷ್ಣ ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು ಫಾದರ್ ಸಿನಿಮಾದಲ್ಲಿ ಕಾಣಿಸಿಕೊಂಡ್ರು. ಏಕಕಾಲಕ್ಕೆ ಆ ಎರಡೂ ಸಿನಿಮಾವನ್ನ ನಿಭಾಯಿಸುತ್ತೇನೆ ಅಂತ ಕೃಷ್ಣ ಕೇಳಿಕೊಂಡ್ರು ಇದಕ್ಕೆ ಹಲಗಲಿ ಚಿತ್ರದ ನಿರ್ದೇಶಕ ಸುಕೇಶ್ ನಾಯಕ್ ಮತ್ತು ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಒಪ್ಪಲಿಲ್ಲವಂತೆ. ‘ಹಲಗಲಿ’ ಸಿನಿಮಾಗಾಗಿ ಕಳೆದ 6 ತಿಂಗಳಿಂದ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ ಕೃಷ್ಣ. ಇತ್ತೀಚೆಗೆ ಫಾದರ್ ಸಿನಿಮಾದ ಆಫರ್ ಸಿಕ್ಕಿದೆ. 

ಇದಾದ ನಂತರ ಮತ್ತೆ ನಿರ್ದೇಶಕ ಶಶಾಂಕ್ ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಕೃಷ್ಣ ತಿಳಿಸಿದ್ರು. ಆದ್ರೆ ‘ಹಲಗಲಿ’ ಚಿತ್ರತಂಡ 3 ವರ್ಷದ ಕಮೀಟ್ಮೆಂಟ್ ಕೇಳಿದ್ರಿಂದ ಚಿತ್ರ ಕೈ ಬೀಡಬೇಕಾಯ್ತು ಹೊರತು ಬೇರೆ ಏನು ವೈಯಕ್ತಿಕ ಕಾರಣ ಇಲ್ಲ ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ. ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗ ಕೃಷ್ಣ ಹೊರ ಹೋಗಿದ್ದರಿಂದ ಈ ಸಿನಿಮಾಗೆ ನಾಯಕ ಯಾರಾಗ್ತಾರೆ ಅನ್ನೋ ಕುತೂಹಲ ಮೂಡಿದೆ. 

Video Top Stories