Asianet Suvarna News Asianet Suvarna News

ಲಬುಶೇನ್‌ ಫಿಫ್ಟಿ; ಭಾರತಕ್ಕೆ ಆಸೀಸ್‌ ತಿರುಗೇಟು..!

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಎರಡನೇ ಸೆಷನ್‌ನಲ್ಲಿ ಭಾರತಕ್ಕೆ ತಿರುಗೇಟು ನೀಡುವತ್ತ ಆಸ್ಟ್ರೇಲಿಯಾ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Brisbane Test Marnus Labuschagne Matthew Wade Rebuild After Steve Smith Departure kvn
Author
Brisbane QLD, First Published Jan 15, 2021, 10:30 AM IST

ಬ್ರಿಸ್ಬೇನ್‌(ಜ.15): ಆಸ್ಟ್ರೇಲಿಯಾದ ನಂಬಿಕಸ್ಥ ಬ್ಯಾಟ್ಸ್‌ಮನ್ ಮಾರ್ನಸ್‌ ಲಬುಶೇನ್‌ ಮತ್ತೊಮ್ಮೆ ಕಾಂಗರೂ ಪಡೆಗೆ ನೆರವಾಗಿದ್ದಾರೆ. ಲಬುಶೇನ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಅಸ್ಟ್ರೇಲಿಯಾ ತಂಡ ಚಹಾ ವಿರಾಮದ ವೇಳೆಗೆ  ವಿಕೆಟ್‌ ಕಳೆದುಕೊಂಡು ರನ್‌ ಬಾರಿಸಿದ್ದು, ಭಾರತಕ್ಕೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. 

ಹೌದು, ಆರಂಭದಲ್ಲೇ ಕೇವಲ 17 ರನ್‌ಗಳಾಗುವಷ್ಟರಲ್ಲಿ ಆಸ್ಟ್ರೇಲಿಯಾ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಹ್ಯಾರಿಸ್‌ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳು ತಂಡಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟಿದ್ದರು. ಆದರೆ ಎರಡನೇ ಸೆಷನ್‌ನಲ್ಲಿ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಮಾತ್ರ ಕಳೆದುಕೊಂಡಿದ್ದು, ಲಬುಶೇನ್ ಹಾಗೂ ವೇಡ್‌ ಭಾರತೀಯ ಬೌಲರ್‌ಗಳನ್ನು ಕಾಡಲಾರಂಭಿಸಿದ್ದಾರೆ.

ಬ್ರಿಸ್ಬೇನ್ ಟೆಸ್ಟ್‌: ಟೀಂ ಇಂಡಿಯಾದಿಂದ ಉತ್ತಮ ಆರಂಭ

ಲಬುಶೇನ್‌ ಸಿಕ್ಕ ಜೀವದಾನದ ಪ್ರಯೋಜನ ಪಡೆದುಕೊಂಡು 167 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 73 ರನ್‌ ಬಾರಿಸಿದರೆ, ಮ್ಯಾಥ್ಯೂ ವೇಡ್ 57 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 27 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ವಿಕೆಟ್ ಖಾತೆ ತೆರೆದ ವಾಷಿಂಗ್ಟನ್‌ ಸುಂದರ್: ಟೀಂ ಇಂಡಿಯಾ ಅನುಭವಿ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಅಶ್ವಿನ್‌ ಅನುಪಸ್ಥಿತಿಯಲ್ಲಿ ಮತ್ತೊಂದು ಶತಕದ ನಿರೀಕ್ಷೆಯಲ್ಲಿದ್ದ ಸ್ಮಿತ್‌ಗೆ, ಪಾದಾರ್ಪಣೆ ಪಂದ್ಯವನ್ನಾಡುತ್ತಿರುವ ವಾಷಿಂಗ್ಟನ್ ಸುಂದರ್ ಶಾಕ್‌ ನೀಡಿದರು. 36 ರನ್‌ ಬಾರಿಸಿದ್ದ ಸ್ಮಿತ್‌ ಆರ್‌ಸಿಬಿ ಸ್ಪಿನ್ನರ್‌ ಸುಂದರ್‌ಗೆ ಟೆಸ್ಟ್ ಕ್ರಿಕೆಟ್‌ನ ಮೊದಲ ಬಲಿ ಆದರು.

ಸಂಕ್ಷಿಪ್ತ ಸ್ಕೋರ್:

ಮಾರ್ನಸ್ ಲಬುಶೇನ್‌: 73
ಮೊಹಮ್ಮದ್ ಸಿರಾಜ್: 25/1
(*ಚಹಾ ವಿರಾಮದ ವೇಳೆಗೆ) 

Follow Us:
Download App:
  • android
  • ios