ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ವರುಣನ ಕಾಟ
ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ರಿಸ್ಬೇನ್(ಜ.16): ಭಾರತ-ಆಸ್ಟ್ರೇಲಿಯಾ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ವರುಣರಾಯ ಅಡ್ಡಿಪಡಿಸಿದ್ದು, ಚಹ ವಿರಾಮದ ಬಳಿಕ ದೀಢಿರ್ ಎನ್ನುವಂತೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಚಹಾ ವಿರಾಮದ ವೇಳೆಗೆ ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಬಾರಿಸಿದ್ದು, ಇನ್ನೂ ಮೊದಲ ಇನಿಂಗ್ಸ್‌ನಲ್ಲಿ 307 ರನ್‌ಗಳ ಹಿನ್ನಡೆಯಲ್ಲಿದೆ. ಚಹಾ ವಿರಾಮದ ಬಳಿಕ ಏಕಾಏಕಿ ಸುರಿದ ಮಳೆಗೆ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ(02) ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 8 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಬ್ರಿಸ್ಬೇನ್ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ
ಅಂಪೈರ್‌ಗಳು ಎರಡೆರಡು ಬಾರಿ ಮೈದಾನ ಪ್ರವೇಶಿಸಿ ವಾತಾವರಣ ಪರೀಕ್ಷಿಸಿದ್ದಾರೆ. ಔಟ್ ಫೀಲ್ಡ್ ಒದ್ದೆಯಾಗಿರುವುದರಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮಾರ್ನಸ್ ಲಬುಶೇನ್ ಆಕರ್ಷಕ ಶತಕ ಹಾಗೂ ನಾಯಕ ಟಿಮ್ ಪೈನ್ ಸಮಯೋಚಿತ ಅರ್ಧಶತಕದ ನೆರವಿನಿಂದ 369 ರನ್ ಬಾರಿಸಿ ಆಲೌಟ್ ಆಗಿದೆ. ಭಾರತ ಪರ ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಮತ್ತು ಟಿ. ನಟರಾಜನ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್"
ಆಸ್ಟ್ರೇಲಿಯಾ: 369/10
ಮಾರ್ನಸ್ ಲಬುಶೇನ್: 108
ಟಿ. ನಟರಾಜನ್: 78/3
ಭಾರತ: 62/2
ರೋಹಿತ್ ಶರ್ಮಾ: 44
ನೇಥನ್ ಲಯನ್: 10/1
(* ಎರಡನೇ ದಿನದಾಟದ ಚಹಾ ವಿರಾಮದ ಅಂತ್ಯದ ವೇಳೆಗೆ)