French Open

(Search results - 94)

Novak Djokovic fan

OTHER SPORTSJun 15, 2021, 9:08 AM IST

ಫ್ರೆಂಚ್ ಓಪನ್: ಅಭಿಮಾನಿ ಬಾಲಕನಿಗೆ ಅಮೂಲ್ಯ ಗಿಫ್ಟ್ ಕೊಟ್ಟ ಜೋಕೋವಿಚ್

ಪಂದ್ಯ ಮುಗಿಯುತ್ತಿದ್ದಂತೆ ಗ್ಯಾಲರಿ ಬಳಿ ತೆರಳಿದ ಜೋಕೋವಿಚ್‌, ಬಾಲಕನಿಗೆ ರ‍್ಯಾಕೆಟ್‌ ನೀಡುತ್ತಿದ್ದಂತೆ ಆತ ಪುಳಕಗೊಂಡ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 2019ರಲ್ಲೂ ಪಂದ್ಯವೊಂದರ ಬಳಿಕ ಅಭಿಮಾನಿ ಬಾಲಕನೊಬ್ಬನಿಗೆ ಜೋಕೋವಿಚ್‌ ತಮ್ಮ ರ‍್ಯಾಕೆಟ್‌ ನೀಡಿದ್ದರು.

Novak Djokovic

OTHER SPORTSJun 14, 2021, 9:58 AM IST

ನೊವಾಕ್ ಜೋಕೋವಿಚ್‌ಗೆ ಒಲಿದ ಫ್ರೆಂಚ್ ಓಪನ್ ಕಿರೀಟ

ಗ್ರೀಸ್‌ನ 22 ವರ್ಷದ ಯುವ ಟೆನಿಸಿಗ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಜೋಕೋವಿಚ್ 6-7(6-8), 2-6, 6-3, 6-2, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಒಟ್ಟಾರೆ ಇದು ಅವರ 19ನೇ ಗ್ರ್ಯಾನ್ ಸ್ಲಾಂ ಗೆಲುವು.

Barbora Krejcikova

OTHER SPORTSJun 14, 2021, 8:41 AM IST

ಫ್ರೆಂಚ್‌ ಓಪನ್‌ 2021: 2 ದಿನದಲ್ಲಿ 2 ಗ್ರ್ಯಾನ್‌ಸ್ಲಾಂ ಜಯಿಸಿದ ಕ್ರೆಜಿಕೋವಾ

ಚೆಕ್‌ ಗಣರಾಜ್ಯದವರೇ ಆದ ಕ್ಯಾಥರೀನಾ ಸಿನಿಯಾಕೋವಾ ಜೊತೆ ಕಳೆದ ವರ್ಷದ ಸಿಂಗಲ್ಸ್‌ ಚಾಂಪಿಯನ್‌ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಹಾಗೂ ಅಮೆರಿಕದ ಬೆಥಾನಿ ಮಟೆಕ್‌-ಸ್ಯಾಂಡ್ಸ್‌ ಜೋಡಿ ವಿರುದ್ಧ 6-4, 6-2 ಸೆಟ್‌ಗಳಲ್ಲಿ ಜಯಗಳಿಸಿದರು.

Nadal Novak

OTHER SPORTSJun 12, 2021, 8:42 AM IST

ಫ್ರೆಂಚ್ ಓಪನ್ ಸಾಮ್ರಾಟ ನಡಾಲ್‌ ಮಣಿಸಿ ಫೈನಲ್‌ಗೇರಿದ ಜೋಕೋವಿಚ್..!

ಕಳೆದ 16 ವರ್ಷಗಳಲ್ಲಿ 108 ಫ್ರೆಂಚ್ ಓಪನ್‌ ಟೆನಿಸ್‌ ಪಂದ್ಯವನ್ನಾಡಿರುವ ಸ್ಪೇನ್‌ನ ರಾಫೆಲ್‌ ನಡಾಲ್ ಕೇವಲ ಮೂರನೇ ಬಾರಿಗೆ ಸೋಲಿನ ಆಘಾತ ಅನುಭವಿಸಿದ್ದಾರೆ. ಬರೋಬ್ಬರಿ 4 ಗಂಟೆ 11 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆಲುವು ಸರ್ಬಿಯಾ ಆಟಗಾರನ ಪಾಲಾಗಿದೆ.

Nadal Novak

OTHER SPORTSJun 11, 2021, 9:16 AM IST

ಫೆಂಚ್‌ ಓಪನ್‌ ಸೆಮೀಸ್‌: ಪಂದ್ಯದಲ್ಲಿ ನಡಾಲ್‌-ಜೋಕೋ​ವಿ​ಕ್‌ ಸೆಣಸು

ಇಬ್ಬರೂ ಫ್ರೆಂಚ್‌ ಓಪನ್‌ ಸೆಮಿ​ಫೈ​ನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 8ನೇ ಬಾರಿ ಆಗಿ​ದೆ. ಜೋಕೊ​ವಿಚ್‌ ಇಟ​ಲಿಯ ಮ್ಯಾಥ್ಯೂ ಬೆರೆಟಿನ ವಿರುದ್ಧ 6-3,6-2,6-7(5), 7-5ರಿಂದ ಗೆದ್ದರೆ, ನಡಾಲ್‌ ಅರ್ಜೆಂಟೀ​ನಾದ ಡೀಗೋ ಸ್ವಾಜ್‌ರ್‍ಮ್ಯಾನ್‌ ವಿರುದ್ಧ 6-3,4-6,6-4,6-0 ರಿಂದ ಗೆದ್ದರು.

Iga Swiatek

OTHER SPORTSJun 10, 2021, 8:36 AM IST

ಫ್ರೆಂಚ್‌ ಓಪನ್‌: ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಔಟ್‌

ಗ್ರೀಸ್‌ನ ಸಕಾರಿ, ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ, ಸ್ಲೋವೇನಿಯಾದ ತಮಾರ ಜಿಡಾನ್ಸೆಕ್‌, ರಷ್ಯಾದ ಅನಸ್ತಾಸಿಯಾ ಪಾವ್ಲು್ಯಚೆಂಕೋವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ನಾಲ್ವರೂ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟೂರ್ನಿಯ ಸೆಮೀಸ್‌ಗೇರಿರುವುದು ವಿಶೇಷ.

Nadal Novak

OTHER SPORTSJun 9, 2021, 9:36 AM IST

ಫ್ರೆಂಚ್‌ ಓಪನ್‌: ಜೋಕೋವಿಚ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಒಂದು ಕಡೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್‌ ದಾಖಲೆಯ 15ನೇ ಬಾರಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ 4ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೊರೆನ್ಜೊ ಮುಸೆಟ್ಟಿ ವಿರುದ್ಧ 2 ಸೆಟ್‌ ಹಿನ್ನಡೆ ಅನುಭವಿಸಿದರೂ, ನೋವಾಕ್‌ ಜೋಕೋವಿಚ್‌ ಗೆಲುವು ಸಾಧಿಸಿ ಅಂತಿಮ 8ರ ಸುತ್ತಿಗೆ ಪ್ರವೇಶ ಪಡೆದರು.

Rafael Nadal

OTHER SPORTSJun 8, 2021, 1:02 PM IST

ಫ್ರೆಂಚ್ ಓಪನ್‌ ಟೆನಿಸ್ 2021: 15ನೇ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ನಡಾಲ್

ಇಟಲಿಯ ಯುವ ಆಟಗಾರ ಜೆನಿಕ್ ಸಿನ್ನರ್ 7-5, 6-3, 6-0 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯಲ್ಲಿ 15ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

Serena Williams

CricketJun 8, 2021, 10:03 AM IST

ಫ್ರೆಂಚ್‌ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಹೋರಾಟ ಅಂತ್ಯ!

ಕಜಕಸ್ತಾನದ 21 ಆಟಗಾರ್ತಿ ಮೊದಲ ಬಾರಿಗೆ ಮಹತ್ವದ ಪಂದ್ಯದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಪಂದ್ಯವನ್ನು ಜಯಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ, ಇದೊಂದು ಅದ್ಭುತ ಅನುಭವ ಎಂದು ಎಲೆನಾ ರೈಬಾಕಿನಾ ಹೇಳಿದ್ದಾರೆ.

Rohan Bopanna

OTHER SPORTSJun 7, 2021, 9:50 AM IST

ಫ್ರೆಂಚ್‌ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

ಭಾರತದ ರೋಹನ್‌ ಬೋಪಣ್ಣ ಹಾಗೂ ಕ್ರೊವೇಷಿಯಾದ ಫ್ರಾಂಕೊ ಸ್ಕುಗೊರ್‌ ಇದೀಗ ಸೆಮಿಫೈನಲ್ ಪ್ರವೇಶಿಸಲು ಪಾಬ್ಲೋ ಅಂಜುರ್ ಹಾಗೂ ಪೆಡ್ರೊ ಮಾರ್ಟಿನೆಜ್ ಅವರನ್ನು ಎದುರಿಸಲಿದ್ದಾರೆ.

Roger Federer

OTHER SPORTSJun 6, 2021, 9:30 PM IST

ಫ್ರೆಂಚ್ ಓಪನ್‌ನಿಂದ ದಿಢೀರ್ ಹಿಂದೆ ಸರಿದ ರೋಜರ್ ಫೆಡರರ್!

• ಫ್ರೆಂಚ್ ಓಪನ್ ಸಿರೀಸ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿರುವ ಫೆಡರರ್
• ಅಚ್ಚರಿ ತಂದ 20ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತ ಫೆಡರರ್ ನಿರ್ಧಾರ
• ನಡೆಯುತ್ತಿರುವ ಸಿರೀಸ್‌ನಿಂದ ಹಿಂದೆ ಸರಿಯಲು ಕಾರಣವೇನು?

Roland Garros

OTHER SPORTSJun 5, 2021, 8:26 AM IST

ಫ್ರೆಂಚ್ ಓಪನ್‌ನಲ್ಲಿ ಮ್ಯಾಚ್ ಫಿಕ್ಸಿಂಗ್: ರಷ್ಯಾ ಆಟಗಾರ್ತಿ ಬಂಧನ

2020ರ ಸೆಪ್ಟೆಂಬರ್‌ನಲ್ಲಿ ನಡೆದ ಫ್ರೆಂಚ್‌ ಓಪನ್‌ ಡಬಲ್ಸ್‌ ಪಂದ್ಯವೊಂದರ ಮಾಹಿತಿ ನೀಡಿ ಬೆಟ್ಟಿಂಗ್‌ಗೆ ನೆರವಾದ ಆರೋಪದಡಿ ಡಬಲ್ಸ್‌ನಲ್ಲಿ 101ನೇ ಹಾಗೂ ಸಿಂಗಲ್ಸ್‌ನಲ್ಲಿ 765 ಶ್ರೇಯಾಂಕಿತೆ ಯಾನಾರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಯಾನಾ, ಸಂಘಟಿತ ಭ್ರಷ್ಟಾಚಾರದ ಗುಂಪಿನ ಭಾಗವಾಗಿದ್ದು ಕಂಡುಬಂದಿತ್ತು.

Roger Federer

OTHER SPORTSJun 4, 2021, 1:34 PM IST

ಫ್ರೆಂಚ್ ಓಪನ್‌: ಫೆಡರರ್ ಮಿಂಚಿನಾಟಕ್ಕೆ ತಬ್ಬಿಬ್ಬಾದ ಮರಿನ್ ಸಿಲಿಕ್

ಫ್ರೆಂಚ್ ಓಪನ್‌ ಟೂರ್ನಿಯ ಎರಡನೇ ಸುತ್ತಿನಲ್ಲೇ ಎರಡು ಆಟಗಾರರು ಗೆಲುವಿಗಾಗಿ ಸಾಕಷ್ಟು ಪೈಪೋಟಿ ನಡೆಸಿದರು. ಸುಮಾರು 2 ಗಂಟೆ 35 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ 20 ಗ್ರ್ಯಾನ್‌ಸ್ಲಾಂ ವಿಜೇತ ರೋಜರ್ ಫೆಡರರ್ 6-2, 2-6, 7-5(4), 6-2 ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

Ash Barty

OTHER SPORTSJun 4, 2021, 8:24 AM IST

ಫ್ರೆಂಚ್‌ ಓಪನ್‌ನಿಂದ ವಿಶ್ವ ನಂ.1 ಆಶ್ಲೆ ಬಾರ್ಟಿ ಔಟ್‌

ಪೋಲೆಂಡ್‌ನ ಮಾಗ್ಡ ಲಿನೆಟಿ ವಿರುದ್ಧದ ಪಂದ್ಯದಲ್ಲಿ ಬಾರ್ಟಿ ಮೊದಲ ಸೆಟ್‌ 1-6 ಗೇಮ್‌ಗಳಲ್ಲಿ ಸೋತು, 2ನೇ ಸೆಟ್‌ನಲ್ಲಿ 2-2ರಲ್ಲಿ ಸಮಬಲ ಸಾಧಿಸಿದ್ದರು. ಇದೇ ವೇಳೆ 9ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ 2ನೇ ಸುತ್ತಿನಲ್ಲೇ ಸೋಲುಂಡಿದ್ದಾರೆ.

Rafael Nadal

OTHER SPORTSJun 2, 2021, 9:19 AM IST

ಫ್ರೆಂಚ್‌ ಓಪನ್‌ ಟೆನಿಸ್‌: ಜೋಕೋವಿಚ್, ನಡಾಲ್ ಶುಭಾರಂಭ

ಫ್ರೆಂಚ್‌ ಓಪನ್‌ನಲ್ಲಿ ತನ್ನದೇ ಆದ ಖದರ್ ಮೂಡಿಸಿರುವ ನಡಾಲ್‌ ಈ ಗೆಲುವಿನೊಂದಿಗೆ ಆವೆ ಮಣ್ಣಿನ ಅಂಕಣದಲ್ಲಿ 101 ಜಯ ದಾಖಲಿಸಿದರು. ನಿಮಗೆ ತಿಳಿದಿರಲಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ ಎಡಗೈ ಆಟಗಾರ ನಡಾಲ್ ಕೇವಲ ಎರಡು ಬಾರಿ ಮಾತ್ರ ಸೋಲಿನ ಕಹಿಯುಂಡಿದ್ದಾರೆ.