Asianet Suvarna News Asianet Suvarna News

French Open Final: 23ನೇ ಗ್ರ್ಯಾನ್‌ಸ್ಲಾಂ ಮೇಲೆ ಜೋಕೋವಿಚ್ ಕಣ್ಣು!

ಫೈನ​ಲ್‌​ನ​ಲ್ಲಿಂದು ಜೋಕೋವಿಚ್‌ಗೆ ನಾರ್ವೆಯ ರುಡ್‌ ಸವಾಲು
ಐತಿಹಾಸಿಕ 23ನೇ ಗ್ರ್ಯಾನ್‌ ಸ್ಲಾಂ ಜಯಿಸುವ ವಿಶ್ವಾಸದಲ್ಲಿ ಸರ್ಬಿಯಾದ ಟೆನಿಸಿಗ
ಸದ್ಯ ಜೋಕೋ ಹಾಗೂ ರಾಫೆಲ್‌ ನಡಾಲ್‌ ತಲಾ 22 ಗ್ರ್ಯಾನ್‌ಸ್ಲಾಂಗಳ​ನ್ನು ಗೆದ್ದಿ​ದ್ದಾರೆ

French Open 2023 Casper Ruud stands between Novak Djokovic and his 23rd Tennis Grand Slam kvn
Author
First Published Jun 11, 2023, 8:48 AM IST

ಪ್ಯಾರಿ​ಸ್‌(ಜೂ.11): 23 ಗ್ರ್ಯಾನ್‌ಸ್ಲಾಂ ಪ್ರಶ​ಸ್ತಿ​ಗ​ಳನ್ನು ಗೆದ್ದು ಪುರು​ಷರ ಟೆನಿ​ಸ್‌​ನಲ್ಲಿ ಇತಿ​ಹಾಸ ಸೃಷ್ಟಿ​ಸಲು ಸರ್ಬಿ​ಯಾದ ನೋವಾಕ್‌ ಜೋಕೋ​ವಿ​ಚ್‌ಗೆ ಇನ್ನೊಂದೇ ಹೆಜ್ಜೆ ಬಾಕಿ​ಯಿದೆ. 3ನೇ ಶ್ರೇಯಾಂಕಿತ ಜೋಕೋ ಭಾನು​ವಾರ ಫ್ರೆಂಚ್‌ ಓಪನ್‌ ಟೂರ್ನಿಯ ಫೈನ​ಲ್‌​ನಲ್ಲಿ 4ನೇ ಶ್ರೇಯಾಂಕಿತ, ನಾರ್ವೆಯ ಕ್ಯಾಸ್ಪರ್‌ ರುಡ್‌ ವಿರುದ್ಧ ಸೆಣ​ಸಾ​ಡ​ಲಿದ್ದಾರೆ.

ಪುರು​ಷರ ಸಿಂಗ​ಲ್ಸ್‌​ನಲ್ಲಿ ಸದ್ಯ ಜೋಕೋವಿಚ್ ಹಾಗೂ ರಾಫೆಲ್‌ ನಡಾಲ್‌ ತಲಾ 22 ಟೆನಿಸ್ ಗ್ರ್ಯಾನ್‌ಸ್ಲಾಂಗಳ​ನ್ನು ಗೆದ್ದಿ​ದ್ದಾರೆ. ಒಂದು ವೇಳೆ ಜೋಕೋ ಫೈನ​ಲ್‌​ನಲ್ಲಿ ಗೆದ್ದರೆ ಪುರು​ಷರ ಸಿಂಗ​ಲ್ಸ್‌​ನಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಗೆದ್ದ ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಲಿದೆ. ಮಹಿಳಾ ಸಿಂಗ​ಲ್ಸ್‌​ನಲ್ಲಿ ಆಸ್ಪ್ರೇ​ಲಿ​ಯಾದ ಮಾರ್ಗ​ರೇಟ್‌ ಕೋರ್ಚ್‌ ದಾಖ​ಲೆಯ 24 ಗ್ರ್ಯಾನ್‌ಸ್ಲಾಂ ಗೆದ್ದಿ​ದ್ದರೆ, ಅಮೆ​ರಿ​ಕದ ಸೆರೆನಾ ವಿಲಿ​ಯಮ್ಸ್‌ 23, ಜರ್ಮ​ನಿಯ ಸ್ಟೆಫಿ ಗ್ರಾಫ್‌ 22 ಬಾರಿ ಪ್ರಶಸ್ತಿ ಗೆದ್ದಿ​ದ್ದಾ​ರೆ.

ಜೋಕೋ ಶುಕ್ರ​ವಾರ ಮೊದಲ ಸೆಮೀ​ಸ್‌​ನಲ್ಲಿ ವಿಶ್ವ ನಂ.1, ಸ್ಪೇನ್‌ನ ಕಾರ್ಲೋಸ್‌ ಆಲ್ಕ​ರಜ್‌ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೇ​ರಿ​ದ್ದಾ​ರೆ. ಮತ್ತೊಂದೆಡೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ರುವ ರುಡ್‌, ಸೆಮೀ​ಸ್‌​ನಲ್ಲಿ ಜರ್ಮ​ನಿಯ ಅಲೆ​ಕ್ಸಾಂಡೆರ್‌ ಜ್ವೆರೆ​ವ್‌​ರನ್ನು 6-3, 6-4, 6-0 ಅಂತ​ರ​ದಲ್ಲಿ ಮಣಿ​ಸಿ ಸತತ 2ನೇ ಬಾರಿ ಫ್ರೆಂಚ್‌ ಓಪನ್‌ ಫೈನ​ಲ್‌ಗೇರಿದ​ರು. ಒಟ್ಟಾ​ರೆ ರುಡ್‌ಗೆ ಇದು 3ನೇ ಗ್ರ್ಯಾನ್‌ಸ್ಲಾಂ ಫೈನಲ್‌. ಕಳೆದ ವರ್ಷ ಫ್ರೆಂಚ್‌ ಓಪ​ನ್‌​ ಫೈನ​ಲ್‌​ನಲ್ಲಿ ನಡಾಲ್‌ ವಿರುದ್ಧ ಸೋತಿ​ದ್ದರೆ, ಯುಎಸ್‌ ಓಪ​ನ್‌​ನಲ್ಲಿ ಆಲ್ಕ​ರಜ್‌ ವಿರುದ್ಧ ಸೋತು ರನ್ನ​ರ್‌-ಅಪ್‌ ಆಗಿ​ದ್ದರು.

2 ಬಾರಿ ಪ್ರಶಸ್ತಿ ಗೆದ್ದಿರುವ ಜೋಕೋ

ನೋವಾಕ್ ಜೋಕೋವಿಚ್‌ ಈ ವರೆಗೂ 6 ಬಾರಿ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಆಡಿದ್ದು 2 ಬಾರಿ ಚಾಂಪಿಯನ್‌ ಆಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದ್ದ ಜೋಕೋ, 2021ರಲ್ಲಿ 2ನೇ ಬಾರಿಗೆ ಚಾಂಪಿಯನ್‌ ಆಗಿದ್ದರು. 2012, 2014, 2020ರಲ್ಲಿ ರಾಫೆಲ್‌ ನಡಾಲ್‌, 2015ರಲ್ಲಿ ಸ್ಟ್ಯಾನಿಸ್ಲಾಸ್‌ ವಾವ್ರಿಂಕಾ ವಿರುದ್ಧ ಫೈನಲ್‌ನಲ್ಲಿ ಸೋತಿದ್ದರು. 2016ರ ಫೈನಲ್‌ನಲ್ಲಿ ಆ್ಯಂಡಿ ಮರ್ರೆ, 2021ರ ಫೈನಲ್‌ನಲ್ಲಿ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಜೋಕೋವಿಚ್‌ ಗೆದ್ದಿದ್ದರು.

ಆರ್ಚರಿ ಏಷ್ಯಾ​ಕ​ಪ್‌: 7 ಪದಕ ಜಯಿ​ಸಿದ ಭಾರ​ತ

ಸಿಂಗಾ​ಪು​ರ: ಆರ್ಚರಿ ಏಷ್ಯಾ​ಕಪ್‌-3 ಟೂರ್ನಿ​ಯಲ್ಲಿ ಭಾರತ 6 ಬೆಳ್ಳಿ ಸೇರಿ ಒಟ್ಟು 7 ಪದ​ಕ​ಗ​ಳೊಂದಿಗೆ ಪಟ್ಟಿ​ಯಲ್ಲಿ 5ನೇ ಸ್ಥಾನಿಯಾ​ಗಿ ಅಭಿ​ಯಾನ ಕೊನೆ​ಗೊ​ಳಿ​ಸಿದೆ. ಭಾನು​ವಾರ ಭಾರ​ತೀಯ ಆರ್ಚರ್‌ಗಳು ಚೀನಾ, ಕೊರಿಯಾ ಸ್ಪರ್ಧಿ​ಗಳ ಮುಂದೆ ಫೈನ​ಲ್‌​ನಲ್ಲಿ ನಿರೀ​ಕ್ಷಿತ ಪ್ರದ​ರ್ಶನ ನೀಡಲಾಗದೆ ಒಂದೂ ಚಿನ್ನ ಗೆಲ್ಲಲು ವಿಫ​ಲ​ರಾ​ದರು. ಪುರು​ಷರ ರೀಕರ್ವ್ ವಿಭಾ​ಗ​ದಲ್ಲಿ ಪಾರ್ಥ್ ಸಾಲುಂಕೆ, ಮಹಿಳಾ ಕಾಂಪೌಂಡ್‌​ನಲ್ಲಿ ರುಮಾ ಬಿಸ್ವಾಸ್‌ ಬೆಳ್ಳಿ ಗೆದ್ದರು.

French Open 2023: ಇಗಾ ಸ್ವಿಯಾಟೆಕ್‌ಗೆ 3ನೇ ಫ್ರೆಂಚ್‌ ಕಿರೀಟ! ವಿಶ್ವ ನಂ.1 ಪಟ್ಟವೂ ಭದ್ರ

ಕಾಂಪೌಂಡ್‌ ವಿಭಾ​ಗದ ಪುರು​ಷ, ಮಹಿಳಾ ತಂಡ, ರೀಕರ್ವ್ ವಿಭಾ​ಗದ ಪುರುಷ, ಮಹಿಳಾ ತಂಡ ಕೂಡಾ ಬೆಳ್ಳಿಗೆ ತೃಪ್ತಿ​ಪ​ಟ್ಟಿ​ತು. ಮಹಿ​ಳೆ​ಯರ ಕಾಂಪೌಂಡ್‌ ವಿಭಾ​ಗ​ದಲ್ಲಿ ಪ್ರಗತಿ ಕಂಚು ಜಯಿಸಿದರು. ಕೊರಿಯಾ 4 ಚಿನ್ನ ಸೇರಿ 7 ಪದ​ಕ​ದೊಂದಿಗೆ ಅಗ್ರ​ಸ್ಥಾನ ಪಡೆ​ದರೆ, ಚೀನಾ 3 ಚಿನ್ನ, 4 ಕಂಚಿ​ನೊಂದಿಗೆ 2ನೇ ಸ್ಥಾನಿ​ಯಾ​ಯಿ​ತು.

ಏಷ್ಯನ್‌ ನೆಟ್‌ಬಾಲ್‌: ಭಾರತ ಶುಭಾರಂಭ

ಜೊಂಬು: ಇಲ್ಲಿ ಆರಂಭಗೊಂಡ ಏಷ್ಯನ್‌ ಯೂತ್ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್‌ ವಿರುದ್ದ 46-40 ಅಂತರದಲ್ಲಿ ಗೆಲುವು ಸಾಧಿಸಿತು. ಭಾರತ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ ಹಾಂಕಾಂಗ್ ವಿರುದ್ದ ಸೆಣಸಾಡಲಿದೆ.

Follow Us:
Download App:
  • android
  • ios