News Hour: ಇಂದಿರಾ ಗಾಂಧಿ ಆಸ್ತಿ ಉಳಿಸಿಕೊಳ್ಳೋಕೆ ಉತ್ತರಾಧಿಕಾರ ತೆರಿಗೆ ರದ್ದು!

ಐದನೇ ದಿನವೂ ಪ್ರಾಪರ್ಟಿ ಫೈಟ್​ ಮುಂದುವರಿದಿದೆ. ಇಂದಿರಾ ಆಸ್ತಿಗಾಗಿ ಉತ್ತರಾಧಿಕಾರ ತೆರಿಗೆ ರದ್ದು ಎಂದು ಮೋದಿ ಹೇಳಿದ್ದಾರೆ. ಇದರ ನಡುವೆ ಮಲ್ಲಿಕಾರ್ಜುನ್‌ ಖರ್ಗೆ, ಪ್ರಧಾನಿಗೆ ಸೋಲಿನ ಸುಳಿವು ಸಿಕ್ಕಿದೆ ಎಂದು ಕೌಂಟರ್‌ ಕೊಟ್ಟಿದ್ದಾರೆ.
 

First Published Apr 25, 2024, 10:57 PM IST | Last Updated Apr 25, 2024, 10:57 PM IST

ಬೆಂಗಳೂರು (ಏ.25): ಐದನೇ ದಿನವೂ ಮುಂದುವರಿದ ಪ್ರಧಾನಿ ಮೋದಿ ಸಂಪತ್ತಿನ ಸವಾಲ್​ ಮುಂದುವರಿದಿದೆ. ಮಧ್ಯಪ್ರದೇಶದ ಮೊರೆನಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ. ಇಂದಿರಾ ಗಾಂಧಿ ಆಸ್ತಿ ಉಳಿಸಿಕೊಳ್ಳಲು ಉತ್ತರಾಧಿಕಾರ ಟ್ಯಾಕ್ಸ್​ ಅನ್ನು ರಾಜೀವ್‌ ಗಾಂಧಿ ರದ್ದು ಮಾಡಿದ್ದರು ಎಂದು ಆರೋಪಿಸಿದ್ದರು.

1985ರಲ್ಲಿ ಉತ್ತರಾಧಿಕಾರ ತೆರಿಗೆಯನ್ನು ರಾಜೀವ್​ ಗಾಂಧಿ ರದ್ದು ಮಾಡಿದ್ದರು. ಈ ತೆರಿಗೆ ಇದ್ದಿದ್ದರೆ, ಇಂದಿರಾ ಆಸ್ತಿ ರಾಜೀವ್ ಗಾಂಧಿಗೆ ಸಿಗುತ್ತಿರಲಿಲ್ಲ. ಹೀಗಾಗಿಯೇ ಇಂದಿರಾ ಗಾಂಧಿ ಆಸ್ತಿ ಉಳಿಸಿಕೊಳ್ಳಲೂ ತೆರಿಗೆ ರದ್ದು ಮಾಡಿ ಆಸ್ತಿ ಉಳಿಸಿಕೊಂಡಿದ್ದರು.

ಸಣ್ಣ ರಾಜಕಾರಣಿಯಂತೆ ಮೋದಿ ವರ್ತನೆ: ಖರ್ಗೆ ಆಕ್ರೋಶ

ಇಂದು ಅವರ ಪಕ್ಷದವರೇ ಮತ್ತೆ ಕಾನೂನೂ ತರ್ತಿನಿ ಅಂತಿದ್ದಾರೆ ಎಂದು ಹೇಳುವ ಮೂಲಕ ಮಧ್ಯ ಪ್ರದೇಶದಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಇದರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಗೆ ಸೋಲಿನ ಸುಳಿವು ಸಿಕ್ಕಿರುವ ಕಾರಣಕ್ಕೆ ಈ ಮಾತು ಹೇಳುತ್ತಿದ್ದಾರ ಎಂದಿದ್ದಾರೆ.