Asianet Suvarna News Asianet Suvarna News

French Open: 7ನೇ ಫ್ರೆಂಚ್‌ ಓಪನ್‌ ಫೈನಲ್‌ಗೆ ಜೋಕೋವಿಚ್‌ ಲಗ್ಗೆ..!

ದಾಖಲೆಯ 23ನೇ ಗ್ರ್ಯಾನ್‌ ಸ್ಲಾಂ ಹೊಸ್ತಿಲಲ್ಲಿ ನೋವಾಕ್ ಜೋಕೋವಿಚ್‌
ವಿಶ್ವ ನಂ.1, ಸ್ಪೇನ್‌ನ ಕಾರ್ಲೋಸ್‌ ಆಲ್ಕರಜ್‌ ಎದುರು ಗೆದ್ದು ಫೈನಲ್‌ ಪ್ರವೇಶಿಸಿದ ಜೋಕೋ
7ನೇ ಬಾರಿಗೆ ಸರ್ಬಿಯಾ ಆಟಗಾರ ಫ್ರೆಂಚ್ ಓಪನ್ ಫೈನಲ್‌ ಪ್ರವೇಶ

Novak Djokovic Defeats Ailing Carlos Alcaraz At Roland Garros enters final kvn
Author
First Published Jun 10, 2023, 7:40 AM IST

ಪ್ಯಾರಿಸ್‌(ಜೂ.10): ಭಾರೀ ಪೈಪೋಟಿಯಿಂದ ಸಾಗುತ್ತಿದ್ದ ಪಂದ್ಯದಲ್ಲಿ ವಿಶ್ವ ನಂ.1, ಸ್ಪೇನ್‌ನ ಕಾರ್ಲೋಸ್‌ ಆಲ್ಕರಜ್‌ ಗಾಯಗೊಂಡ ಪರಿಣಾಮ ದಾಖಲೆಯ 23ನೇ ಗ್ರ್ಯಾನ್‌ ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿರುವ ನೋವಾಕ್‌ ಜೋಕೋವಿಚ್‌ರ ಫೈನಲ್‌ ಹಾದಿ ಸುಗಮಗೊಂಡಿತು. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಜೋಕೋವಿಚ್‌ 6-3, 5-7, 6-1, 6-1 ಸೆಟ್‌ಗಳಲ್ಲಿ ಜಯ ಸಾಧಿಸಿದರು. ಇದರೊಂದಿಗೆ 7ನೇ ಬಾರಿಗೆ ಸರ್ಬಿಯಾ ಆಟಗಾರ ಫೈನಲ್‌ ಪ್ರವೇಶಿಸಿದರು.

ಇಬ್ಬರು ತಲಾ ಒಂದು ಸೆಟ್‌ ಗೆದ್ದು, ಪಂದ್ಯ ರೋಚಕ ಅಂತ್ಯ ಕಾಣುವ ನಿರೀಕ್ಷೆ ಹುಟ್ಟಿಸಿದ್ದರು. ಆಲ್ಕರಜ್‌ರ ಆಕರ್ಷಕ ಹೊಡೆತಗಳಿಗೆ ಮೆಚ್ಚುಗೆ ಸೂಚಿಸುತ್ತಲೇ ತಮ್ಮ ಅನುಭವಕ್ಕೆ ತಕ್ಕ ಆಟವಾಡುತ್ತಿದ್ದ ಜೋಕೋ, ಪ್ರೇಕ್ಷಕರಿಗೆ ಭಾರೀ ಮನರಂಜನೆ ಒದಗಿಸಿದರು. ಆದರೆ 3ನೇ ಸೆಟ್‌ನ ಆರಂಭದಲ್ಲೇ ಆಲ್ಕರಜ್‌ ಮೀನಖಂಡ ಸೆಳೆತಕ್ಕೆ ಒಳಗಾದ ಕಾರಣ ಅಂಕಣದಲ್ಲಿ ಅವರ ಓಡಾಟ ಸೀಮಿತಗೊಂಡಿತು. ಪಂದ್ಯದಿಂದ ನಿವೃತ್ತಿ ಪಡೆಯಲು ನಿರಾಕರಿಸಿದ ಆಲ್ಕರಜ್‌ ಹೋರಾಟ ಪ್ರದರ್ಶಿಸಿದರೂ ಜೋಕೋವಿಚ್‌ರ ಮೇಲೆ ಅಚ್ಚರಿಯ ಜಯ ಸಾಧಿಸಲು ಸಾಧ್ಯವಾಗಲಿಲ್ಲ.

ಸ್ವಿಯಾ​ಟೆ​ಕ್‌-ಮುಕೋ​ವಾ: ಯಾರಿಗೆ ಫ್ರೆಂಚ್‌ ಕಿರೀ​ಟ?

ಪ್ಯಾರಿ​ಸ್‌: 2023ರ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಫೈನಲ್‌ ಹಣಾ​ಹ​ಣಿಗೆ ವೇದಿಕೆ ಸಜ್ಜು​ಗೊಂಡಿದ್ದು, ಹಾಲಿ ಚಾಂಪಿ​ಯನ್‌ ಇಗಾ ಸ್ವಿಯಾ​ಟೆಕ್‌ ಹಾಗೂ ಚೆಕ್‌ ಗಣ​ರಾ​ಜ್ಯದ ಕ್ಯಾರೋ​ಲಿನಾ ಮುಕೋವಾ ಪ್ರಶ​ಸ್ತಿ​ಗಾಗಿ ಸೆಣ​ಸಲಿದ್ದಾರೆ.

ವಿಶ್ವ ನಂ.1 ಪೋಲೆಂಡ್‌ನ ಇಗಾ ಸತತ 2ನೇ ಬಾರಿ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ದ್ದರೆ, ಚೊಚ್ಚಲ ಬಾರಿ ಗ್ರ್ಯಾನ್‌​ಸ್ಲಾಂ ಫೈನ​ಲ್‌​ಗೇ​ರಿ​ರುವ ಶ್ರೇಯಾಂಕ ರಹಿತ ಮುಕೋವಾ ಮೊದಲ ಪ್ರಯ​ತ್ನ​ವನ್ನೇ ಚಾಂಪಿ​ಯನ್‌ ಪಟ್ಟ​ದೊಂದಿಗೆ ಅವಿ​ಸ್ಮ​ರ​ಣೀ​ಯ​ಗೊ​ಳಿ​ಸುವ ಕಾತ​ರ​ದ​ಲ್ಲಿ​ದ್ದಾರೆ. 4ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ರುವ ಇಗಾ ಸೆಮೀಸ್‌ನಲ್ಲಿ ಬ್ರೆಜಿಲ್‌ನ ಬೀಟ್ರೆಜ್‌ ಹಡ್ಡಾದ್‌ ವಿರುದ್ಧ 6-2, 7-6(9/7) ಸೆಟ್‌ಗಳಲ್ಲಿ ಜಯಿಸಿ, 4 ವರ್ಷಗಳಲ್ಲಿ 3ನೇ ಬಾರಿಗೆ ಫ್ರೆಂಚ್‌ ಓಪನ್‌ ಫೈನಲ್‌ಗೇರಿದ್ದರು.

French Open 2023: ಫೈನಲ್‌ಗೆ ಸ್ವಿಯಾಟೆಕ್‌, ಮುಕೋವಾ ಲಗ್ಗೆ..!

ಇಗಾ ಗೆದ್ದರೆ ದಾಖ​ಲೆ: ಫ್ರೆಂಚ್‌ ಓಪ​ನ್‌​ ಮಹಿಳಾ ಸಿಂಗ​ಲ್ಸ್‌ನಲ್ಲಿ 2007ರ ಬಳಿ​ಕ ಯಾರೂ ಸತತ 2 ಬಾರಿ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಇಗಾಗೆ ಆ ಅವ​ಕಾ​ಶ​ವಿದ್ದು, ಗೆದ್ದರೆ 16 ವರ್ಷ​ಗ​ಳಲ್ಲೇ ಮೊದಲ ಬಾರಿ ಸತತ 2 ಬಾರಿ ಚಾಂಪಿ​ಯನ್‌ ಆದ ಆಟ​ಗಾರ್ತಿ ಎನಿ​ಸಿ​ಕೊ​ಳ್ಳ​ಲಿ​ದ್ದಾರೆ. ಬೆಲ್ಜಿ​ಯಂನ ಜಸ್ಟಿನ್‌ ಹೆನಿನ್‌ 2005, 2006, 2007ರಲ್ಲಿ ಸತ​ತ​ವಾಗಿ ಚಾಂಪಿ​ಯನ್‌ ಆಗಿ​ದ್ದ​ರು.

ಭಾರ​ತದ ಕೈತ​ಪ್ಪಿದ ಎಟಿಪಿ ಟೆನಿಸ್‌ ಟೂರ್ನಿ ಆತಿಥ್ಯ!

ನವ​ದೆ​ಹ​ಲಿ: ಟೆನಿ​ಸ್‌​ನಲ್ಲಿ ಬಹ​ಳಷ್ಟು ಹಿಂದಿ​ರುವ ಭಾರ​ತಕ್ಕೆ ಈಗ ಮತ್ತೊಂದು ಆಘಾತ ಎದು​ರಾ​ಗಿದ್ದು, 1996ರಿಂದಲೂ ನಡೆ​ಯು​ತ್ತಿದ್ದ ಏಕೈಕ ಎಟಿಪಿ 250 ಟೆನಿಸ್‌ ಟೂರ್ನಿಯ ಆತಿಥ್ಯವೂ ಸದ್ಯ ಭಾರ​ತದ ಕೈತ​ಪ್ಪಿ​ದೆ. ಭಾರತ ಈವ​ರೆಗೆ 27 ಆವೃ​ತ್ತಿಗಳಿಗೆ ಆತಿಥ್ಯ ವಹಿ​ಸಿತ್ತು. 

ಚೊಚ್ಚಲ ಆವೃ​ತ್ತಿ ನವ​ದೆ​ಹ​ಲಿ​ಯಲ್ಲಿ, ಬಳಿಕ 21 ಆವೃತ್ತಿ ಚೆನ್ನೈ​ನಲ್ಲಿ ನಡೆ​ದಿತ್ತು. 2018ರಿಂದ ಮಹಾ​ರಾಷ್ಟ್ರ ಲಾನ್‌ ಟೆನಿಸ್‌ ಸಂಸ್ಥೆ​(​ಎಂಎ​ಸ್‌​ಎ​ಲ್‌​ಟಿ​ಎ) ಟೂರ್ನಿಗೆ ಆತಿಥ್ಯ ವಹಿ​ಸು​ತ್ತಿತ್ತು. ಆದ​ರೆ ಪ್ರಾಯೋ​ಜ​ಕರ ಕೊರ​ತೆ​ ಎದು​ರಿ​ಸು​ತ್ತಿದ್ದ ಆಯೋ​ಜ​ಕರು ಟೂರ್ನಿ ನಡೆ​ಸು​ವು​ದ​ರಿಂದ ಹಿಂದೆ ಸರಿ​ದಿ​ದ್ದಾರೆ. ಈ ಮೊದಲು ಟೂರ್ನಿ​ಯಲ್ಲಿ ದಿಗ್ಗಜ ಟೆನಿ​ಸಿ​ಗ​ರಾ​ದ ರಾಫೆಲ್‌ ನಡಾಲ್‌, ವಾಂವ್ರಿಕಾ, ಕಾರ್ಲೊಸ್‌ ಮೊಯಾ, ಮರಿನ್‌ ಸಿಲಿಚ್‌ ಸೇರಿದಂತೆ ಪ್ರಮು​ಖರು ಪಾಲ್ಗೊಂಡಿ​ದ್ದರು.

Follow Us:
Download App:
  • android
  • ios