ಪ್ರಧಾನಿ ಮೋದಿ ಸರ್ಕಾರ ಸಂವಿಧಾನ ಮುಗಿಸುವ ಕೆಲಸ ಮಾಡುತ್ತೆ: ರಣದೀಪ್ ಸಿಂಗ್ ಸುರ್ಜೇವಾಲಾ
ಸಿನಿಮಾ ಆಗೇ ಇಲ್ಲಾ, ಟ್ರೆಲರ್‌ನಲ್ಲೇ ಮುಗಿದು ಹೋಗಿದೆ. ಕ್ಯಾಮೆರಾಮನ್ ಓಡಿ ಹೋಗಿದ್ದಾನೆ, ಡೈರೆಕ್ಟರ್ ಸಹ ಓಡಿ ಹೋಗಿದ್ದಾನೆ, ಹೀರೋ ಅಂತೂ ಇಲ್ಲವೇ ಇಲ್ಲ. ವಿಲನ್ ಒಬ್ಬನೇ ಉಳಿದಿದ್ದಾನೆ ಎಂದು ಪ್ರಧಾನಿ ಮೋದಿ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆ (Lok Sabha Elections 2024) ಪ್ರಚಾರದ ವೇಳೆ ಪಕ್ಷದ ಮುಖಂಡರು ಒಬ್ಬರಿಗೊಬ್ಬರು ತೀವ್ರವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಈ ನಡುವೆ ಈವರೆಗೂ ಮಾಡಿದ ಅಧಿಕಾರ ಟ್ರೈಲರ್, ಮುಂದೆ ಐದು ವರ್ಷ ಪಿಕ್ಚರ್ ಬಾಕಿ ಇದೆ ಎಂಬ ಮೋದಿ ಹೇಳಿಕೆಗೆ ಬೆಳಗಾವಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ತಿರುಗೇಟು ನೀಡಿದ್ದಾರೆ. ಸಿನಿಮಾ ಆಗೇ ಇಲ್ಲಾ, ಟ್ರೆಲರ್ ನಲ್ಲೇ ಮುಗಿದು ಹೋಗಿದೆ. ಕ್ಯಾಮೆರಾಮನ್ ಓಡಿ ಹೋಗಿದ್ದಾನೆ, ಡೈರೆಕ್ಟರ್ ಓಡಿ ಹೋಗಿದ್ದಾನೆ, ಹೀರೋ ಅಂತೂ ಇಲ್ಲವೇ ಇಲ್ಲ. ವಿಲನ್ ಒಬ್ಬನೇ ಉಳಿದಿದ್ದಾನೆ ಅಂತಾ ಮೋದಿಯನ್ನ ವಿಲನ್ ಎಂದು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ಬಿಜೆಪಿ ಓಬಿಸಿ, ಎಸ್‌ಸಿ, ಎಸ್‌ಟಿ ವಿರೋಧ ಮಾಡುತ್ತದೆ. ಅಲ್ಲದೆ ಮೋದಿ (PM Narendra modi) ಸರ್ಕಾರ ಸಂವಿಧಾನ ಮುಗಿಸುವ ಕೆಲಸ ಮಾಡುತ್ತಿದೆ ಎಂದ ಅವರು, ನೇಹಾ ಹತ್ಯೆ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ, ಬಿಜೆಪಿಯವರು ಹೆಣೆದ ಮೇಲೆ ರಾಜಕೀಯ ಮಾಡುತ್ತಿದ್ದಾರೆ, ಬಿಜೆಪಿಯವರಿಗೆ ನಾಚಿಗೆ ಆಗಬೇಕು, ಆರೋಪಿ ಯಾವುದೇ ಸಮುದಾಯ ಆದ್ರೂ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಹೇಳಿದರು.
ಇದರ ಜೊತೆಗೆ ಈಗಾಗಲೇ ನಮ್ಮ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ವಿಚಾರಣೆ ಮಾಡಬೇಕಿದೆ. ಸರ್ಕಾರವೇ ಗಲ್ಲು ಶಿಕ್ಷೆ ಆಗಬೇಕು ಅಂತಾ ಆಗ್ರಹಿಸುತ್ತೆ ಎಂದ ಅವರು ನೀವೆಲ್ಲ ನೀರಲ್ಲಿ ಮುಳುಗಿ ಸಾಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಬಿಜೆಪಿ ದೇಶದಲ್ಲಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, 400 ಅಲ್ಲ 150 ಸ್ಥಾನವನ್ನೂ ಸಹ ದಾಟುವುದಿಲ್ಲ ಎಂದು ವ್ಯಂಗ್ಯಮಾಡಿದ ಅವರು, ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೆ ಅಂತಾ ಹೇಳಿದ್ದೆ, ಈಗ 20 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಅಚ್ಚರಿ ಸೀಟ್ ಬರುತ್ತವೆ ಕಾದುನೋಡಿ ಎಂದು ತಿಳಿಸಿದ್ದಾರೆ. ಅಲ್ಲದೆ ಐಎನ್‌ಡಿ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ನಾವೆಲ್ಲರೂ ರಾಹುಲ್ ಗಾಂಧಿ (Rahul Gandhi) ಪ್ರಧಾನಿಯಾಗಲಿ ಅಂತಾ ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: Watch Video: ಕಾಂಗ್ರೆಸ್‌ಗೆ ಲಾಭ ಕೊಡುತ್ತಾ..ಶಾಪವಾಗುತ್ತಾ ಹೇಳಿಕೆಗಳು! ಜಾತಿ ಗಣತಿ..ಸಂಪತ್ತು ಮರುಹಂಚಿಕೆ..ಡೆತ್ ಟ್ಯಾಕ್ಸ್..!