ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲಾಕ್ಡೌನ್ ಬಿಸಿ ಶುರುವಾಗಲಿದೆ ಇನ್ನೊಂದು ಕಡೆ ಬೆಳ್ಳಂಬೆಳಿಗ್ಗೆ ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುವ ಧಾವಂತ ಮಾಡುತ್ತಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮೆಜೆಸ್ಟಿಕ್ ತುಂಬಾ ಜನವೋ ಜನ. ಹೆದ್ದಾರಿಗಳಲ್ಲಿ ಸಾಲು ಸಾಲು ವಾಹನ ಇದು ಬೆಂಗಳೂರಿನ ಸಾಮಾನ್ಯ ದೃಶ್ಯವಾಗಿದೆ.
state Jul 14, 2020, 11:38 AM IST
ಮದ್ಯ ಪ್ರಿಯರಿಗೆ ಶಾಕ್ ನೀಡಿದೆ ಬೆಂಗಳೂರು ಲಾಕ್ಡೌನ್. ಹೌದು, ಲಾಕ್ಡೌನ್ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಇಂದು(ಮಂಗಳವಾರ) ರಾತ್ರಿ 8 ರಿಂದ ಲಾಕ್ಡೌನ್ ಆರಂಭವಾಗಲಿದೆ.
state Jul 14, 2020, 11:37 AM IST
ಇಂದು ರಾತ್ರಿ 8 ಗಂಟೆಯಿಂದ ಜುಲೈ 22 ರ ಬೆಳಿಗ್ಗೆ 5 ಗಂಟೆಯವರೆಗೆ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಕಠಿಣ ಲಾಕ್ಡೌನ್ ಇರಲಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಿದ್ದು ಅನಗತ್ಯವಾಗಿ ಸಂಚರಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
state Jul 14, 2020, 11:02 AM IST
ಕಾಂಗ್ರೆಸ್ ರಾಜಕೀಯಕ್ಕಿಂತ ಜನಪರ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರನ್ನು ಲಾಕ್ಡೌನ್ ಅವಧಿಯಲ್ಲಿ ಕೊರೋನಾ ನಿಯಂತ್ರಣ ಹಾಗೂ ಸಾರ್ವಜನಿಕರ ಸೇವೆಗೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ತಯಾರಿದ್ದು, ಅವರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ಡಿಕೆಶಿ ತಿಳಿಸಿದರು.
state Jul 14, 2020, 8:43 AM IST
1 ವಾರದ ನಂತರ ಲಾಕ್ಡೌನ್? ಮುಂದುವರೆಸುತ್ತಾರಾ? ಸಿಎಂ ಯಡಿಯೂರಪ್ಪ ಕೊಟ್ಟ ಸ್ಪಷ್ಟನೆ| ಬೆಂಗಳೂರಲ್ಲಿ ಯಾವುದೇ ಕಾರಣಕ್ಕೂ ವಿಸ್ತರಿಸೋದಿಲ್ಲ
state Jul 14, 2020, 8:30 AM IST
ಜಿಲ್ಲೆಯಲ್ಲಿ ಕೊರೋನಾ ಮಹಾಸ್ಫೋಟವಾಗುತ್ತಿದೆ. ಇನ್ನೇನು ಲಾಕ್ಡೌನ್ ಆಗುತ್ತದೆ ಎನ್ನುವ ಸುದ್ದಿ ಹರಡಿದ್ದರಿಂದ ಕೊಪ್ಪಳ ಮಾರುಕಟ್ಟೆಯಲ್ಲಿ ಸೋಮವಾರ ಜನಜಾತ್ರೆ. ಹಳ್ಳಿಯಿಂದ ಎದ್ದೋಬಿದ್ದೋ ಮಾರುಕಟ್ಟೆಗೆ ಆಗಮಿಸಿದ ಜನರು ಮನೆಯ ಸಂತೆ ಮಾಡುವುದು ಸೇರಿದಂತೆ ತುರ್ತು ಅಗತ್ಯದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಗಿಬಿದ್ದಿರುವುದು ಕಂಡು ಬಂದಿದೆ.
Karnataka Districts Jul 14, 2020, 7:40 AM IST
ನಿನ್ನೆ ಬೆಂಗ್ಳೂರಿಂದ ಲಕ್ಷಾಂತರ ಜನ ಗುಳೆ!| ಲಾಕ್ಡೌನ್ಗೆ ಬೆಚ್ಚಿದ ಬಡ, ಕೆಳಮಧ್ಯಮ ವರ್ಗ - ಮನೆ ಖಾಲಿ ಮಾಡಿ ಸಿಕ್ಕಸಿಕ್ಕ ವಾಹನದಲ್ಲಿ ಊರಿಗೆ| ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ - ಇಂದೂ ಭಾರಿ ಪ್ರಮಾಣದಲ್ಲಿ ವಲಸೆ ಸಾಧ್ಯತೆ
state Jul 14, 2020, 7:33 AM IST
ಕೈಗಾರಿಕೆ, ಅಗತ್ಯ ವಸ್ತುಗಳ ಖರೀದಿಗೆ ವಿನಾಯ್ತಿಯೊಂದಿಗೆ ಜು. 15ರಂದು ಬೆಳಗ್ಗೆ 10ರಿಂದ ಜು. 24ರ ರಾತ್ರಿ 8ರ ವರೆಗೆ ಧಾರವಾಡ ಜಿಲ್ಲೆಯನ್ನು ಲಾಕ್ಡೌನ್ ಮಾಡಲಾಗುವುದು ಎಂದು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Karnataka Districts Jul 14, 2020, 7:12 AM IST
ಕೊರೋನಾ ನಿಯಂತ್ರಣಕ್ಕೆ ಅನಿವಾರ್ಯವಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಕಳೆದ ಬಾರಿಯ ನಿಯಮಗಳಿಗೂ ಈ ಬಾರಿಯದ್ದಕ್ಕೂ ಪ್ರಮುಖ ಎರಡು ವ್ಯತ್ಯಾಸಗಳಿವೆ.
Karnataka Districts Jul 13, 2020, 9:28 PM IST
ಕೊರೋನಾ ಕಾಟದಿಂದಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಈ ವೇಳೆ ಏನಿರುತ್ತೆ? ಏನಿರಲ್ಲ? ಎನ್ನುವ ಹೊಸ ಗೈಡ್ಲೈನ್ಸ್ ಅನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
state Jul 13, 2020, 8:04 PM IST
ಸಿಎಂ ಜೊತೆ ಕಾನ್ಫರೆನ್ಸ್ ಬಳಿಕ ಮೈಸೂರು ಡಿಸಿ ಅಭಿರಾಮ್ ಜಿ ಶಂಕರ್, ಮೈಸೂರು ಲಾಕ್ಡೌನ್ ಮಾಡಲ್ಲ. ಏರಿಯಾ ಲಾಕ್ ಆಗುತ್ತೆ. ಹೆಚ್ಚು ಪ್ರಕರಣ ಇರುವಲ್ಲಿ ಲಾಕ್ಡೌನ್ಗೆ ಚಿಂತನೆ ನಡೆಸಲಾಗಿದೆ. ಧಾರಾವಿ ಮಾದರಿಯನ್ನು ಅನುಸರಿಸುತ್ತೇವೆ. ಎರಡು ಮೂರು ದಿನಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
state Jul 13, 2020, 7:23 PM IST
'ಬೆಂಗಳೂರಿನಿಂದ ಯಾರೂ ನಮ್ಮೂರಿಗೆ ಬರಬೇಡಿ. ಸದ್ಯಕ್ಕೆ ಎಲ್ಲಿದ್ದೀರೋ ಅಲ್ಲಿಯೇ ಇರಿ. ಊಟಕ್ಕೆ ತೊಂದರೆಯಾದರೆ ಆಹಾರ ಧಾನ್ಯಗಳನ್ನು ನಾವು ಕಳುಹಿಸುತ್ತೇವೆ. ರೈತರಿಗೆ ಕೊರೊನಾ ಬಂದ್ರೆ ಜಮೀನಿನ ಕತೆಯೇನು? ಎಂದು ವಿಜಯಪುರದ ಯೋಗಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
state Jul 13, 2020, 7:05 PM IST
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳು ಮತ್ತೆ ಲಾಕ್ಡೌನ್ ಆಗಿವೆ. ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿದೆ. ಕೊರೋನಾ ಕಾರಣ ಇತ್ತ ಆಟೋಮೊಬೈಲ್ ಕಂಪನಿಗಳಿಗಳು ಹೊಡೆತ ಬಿದ್ದಿದೆ. ಇದೀಗ ಡೀಲರ್ಗಳು ವಿನೂತನ ಐಡಿಯಾ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
Automobile Jul 13, 2020, 6:55 PM IST
ಕೊರೊನಾ ತಡೆಗೆ ರಾಜಧಾನಿಯಲ್ಲಿ ಒಂದು ವಾರ ಲಾಕ್ಡೌನ್ ಘೋಷಿಸಿದ ಜೊತೆಗೆ ಬೇರೆ ಬೇರೆ ಜಿಲ್ಲೆಗಳಲ್ಲೂ ಲಾಕ್ಡೌನ್ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.
state Jul 13, 2020, 6:55 PM IST
ಲಾಕ್ಡೌನ್ ಬಗ್ಗೆ ಬೇಕು, ಬೇಡ, ಹೀಗಿರಲಿ, ಹಾಗಿರಲಿ ಎನ್ನುವ ಚರ್ಚೆ ಮಧ್ಯೆ ಸಬ್ ರಿಜಿಸ್ಟಾರ್ ಕಚೇರಿ, RTO ಕಚೇರಿ ಓಪನ್ ಮಾಡುವಂತೆ ಉದ್ಯಮಿಗಳ ವಲಯ ಸರ್ಕಾರದ ಮೇಲೆ ಡಿಮ್ಯಾಂಡ್ ಇಟ್ಟಿದೆ.
state Jul 13, 2020, 6:43 PM IST