'ಬೆಂಗಳೂರಿನಿಂದ ಯಾರೂ ನಮ್ಮೂರಿಗೆ ಬರಬೇಡಿ': ಗ್ರಾಮಸ್ಥರಿಂದ ಆಗ್ರಹ

'ಬೆಂಗಳೂರಿನಿಂದ ಯಾರೂ ನಮ್ಮೂರಿಗೆ ಬರಬೇಡಿ. ಸದ್ಯಕ್ಕೆ ಎಲ್ಲಿದ್ದೀರೋ ಅಲ್ಲಿಯೇ ಇರಿ. ಊಟಕ್ಕೆ ತೊಂದರೆಯಾದರೆ ಆಹಾರ ಧಾನ್ಯಗಳನ್ನು ನಾವು ಕಳುಹಿಸುತ್ತೇವೆ. ರೈತರಿಗೆ ಕೊರೊನಾ ಬಂದ್ರೆ ಜಮೀನಿನ ಕತೆಯೇನು? ಎಂದು ವಿಜಯಪುರದ ಯೋಗಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. 
 

First Published Jul 13, 2020, 7:05 PM IST | Last Updated Jul 13, 2020, 7:05 PM IST

ವಿಜಯಪುರ (ಜು. 13): 'ಬೆಂಗಳೂರಿನಿಂದ ಯಾರೂ ನಮ್ಮೂರಿಗೆ ಬರಬೇಡಿ. ಸದ್ಯಕ್ಕೆ ಎಲ್ಲಿದ್ದೀರೋ ಅಲ್ಲಿಯೇ ಇರಿ. ಊಟಕ್ಕೆ ತೊಂದರೆಯಾದರೆ ಆಹಾರ ಧಾನ್ಯಗಳನ್ನು ನಾವು ಕಳುಹಿಸುತ್ತೇವೆ. ರೈತರಿಗೆ ಕೊರೊನಾ ಬಂದ್ರೆ ಜಮೀನಿನ ಕತೆಯೇನು? ಎಂದು ವಿಜಯಪುರದ ಯೋಗಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ರಾಜಧಾನಿಯಿಂದ ಊರಿಗೆ ಮರಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಊರುಗಳಲ್ಲಿಯೂ ಸೋಂಕು ಹರಡುವ ಭಯ ಎದುರಾಗಿದೆ. ಹಾಗಾಗಿ ಸಹಜವಾಗಿ ಗ್ರಾಮಸ್ಥರು 'ಯಾರೂ ನಮ್ಮ ಊರಿಗೆ ಬರಬೇಡಿ' ಎನ್ನುತ್ತಿದ್ದಾರೆ. 

ಲಾಕ್‌ಡೌನ್ ಬೇಕು, ಬೇಡದ ನಡುವೆ ಉದ್ಯಮಿಗಳಿಂದ ಹೊಸ ಡಿಮ್ಯಾಂಡ್..!