ಬೆಂಗಳೂರು, (ಜುಲೈ.13): ನಾಳೆ ಅಂದ್ರೆ ಜುಲೈ 14 (ಮಂಗಳವಾರ) ರಾತ್ರಿ 8ರಿಂದ ಒಂದು ವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸಂಪೂರ್ಣವಾಗಿ ಸ್ತಬ್ಧವಾಗಲಿವೆ.

 ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಎರಡು ಜಿಲ್ಲೆಗಳಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 23ರ ತನಕ ಒಂದು ವಾರದ ಲಾಕ್ ಡೌನ್ ಮಾಡುವುದಾಗಿ ಘೋಷಣೆಯಾಗಿದೆ. 

ಲಾಕ್‌ಡೌನ್‌ ಬಗ್ಗೆ ಬಿಎಸ್‌ವೈ ಸ್ಪಷ್ಟನೆ: ಎಲ್ಲಾ ಗೊಂದಲಗಳಿಗೆ ತೆರೆ

ಲಾಕ್‌ಡೌನ್ ಸಂದರ್ಭದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವುದನ್ನು ರಾಜ್ಯ ಸರ್ಕಾರ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಇಂದು (ಸೋಮವಾರ) ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅವರು ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಅದು ಈ ಕೆಳಗಿನಂತಿದೆ ನೋಡಿ. 

ಏನಿರುತ್ತೆ...?
* ಹಣ್ಣು, ಹಾಲು ಮತ್ತು ದಿನಸಿ ಅಂಗಡಿ ಓಪನ್ ಇರುತ್ತವೆ.
* ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬಹುದು.
* ಮೊಟ್ಟೆ, ಮೀನು, ಮಾಂಸ ಮಾರಾಟಕ್ಕೆ ನಿಷೇಧ ಇಲ್ಲ. 
* ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಇರುವುದಿಲ್ಲ.
* ಹೋಟೆಲ್, ರೆಸ್ಟೋರೆಂಟ್ ಪಾರ್ಸೆಲ್ ಸೇವೆ ಮುಂದುವರಿಕೆ
* ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
* ಆರೋಗ್ಯ, ವೈದ್ಯಕೀಯ ಶಿಕ್ಷಣ, ಗೃಹ ರಕ್ಷಣ ದಳ, ಪೊಲೀಸ್, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ಇತರೆ ತುರ್ತು ಸೇವೆಗಳು ಲಭ್ಯವಿರುತ್ತವೆ.
* ಮೆಡಿಕಲ್ ಶಾಪ್ ಇರುತ್ತವೆ.
* ಎಲ್ಲಾ ಆರೋಗ್ಯ ಸೇವೇಗಳು ಎಂದಿನಂತೆ ಸಿಗಲಿವೆ.
* ರಾಜ್ಯ ಖಜಾನೆಗಳು ಕಾರ್ಯನಿರ್ವಹಣೆ
* ಔಷಧ ಕಾರ್ಖಾನೆಗಳಿಗೆ ವಿನಾಯಿತಿ
* ತುರ್ತು ಸಂದರ್ಭದಲ್ಲಿ ಮಾತ್ರ ಪ್ರಯಾಣಿಕರ ವಾಹನಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಯಾಣಕ್ಕೆ ಅವಕಾಶ
* ಅನುಮತಿ ಪಡೆದ  ಕಾರ್ಯಚಟುವಟಿಕೆಗಳಿಗಾಗಿ /ಕಚೇರಿಗೆ ಹೋಗಿ ಬರಲು ಅರ್ಹ ಗುರುತಿನ ಚೀಟಿ ಕಡ್ಡಾಯ
* ಇ ಕಾರ್ಮರ್ಸ್ ಮೂಲಕ ಆಹಾರ, ಔಷಧ, ವೈದ್ಯಕೀಯ ಸಲಕರಣೆಗಳ ಸರಬರಾಜು ಮಾಡಬಹುದು
* ವಿಶೇಷ ಆರ್ಥಿಕ ವಲಯಗಳು ಮತ್ತು ಕೈಗಾರಿಕಾ ಟೌನ್ ಗಳಲ್ಲಿನ ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಹಿಸಬಹುದು
* ಪ್ಯಾಕಿಂಗ್  ಸಾಮಗ್ರಿಗಳ ಉತ್ಪಾದನೆ ಮಾಡವಹುದು

ಏನಿರಲ್ಲ...?
* ಮೆಟ್ರೋ ರೈಲು ಸೇವೆ ಇರುವುದಿಲ್ಲ.
* ಟ್ಯಾಕ್ಸಿ, ಆಟೋ, ಕ್ಯಾಬ್ ಇರುವುದಿಲ್ಲ.
* ಶಾಲೆ-ಕಾಲೇಜುಗಳು, ಕೋಚಿಂಗ್ ಸೆಂಟರ್‌ಗಳು ಈಗಾಗಲೇ ಮುಚಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ.
* ಲಾಡ್ಜ್ ಸೇರಿದಂತೆ ಅತಿಥ್ಯ ಸೇವೇಗಳಿಗೆ ನಿರ್ಬಂಧ
* ದೇವಾಲಯ, ಚರ್ಚ್, ಮಸೀದಿ ಬಂದ್ ಮಾಡಲಾಗುವುದು
* ಬೆಂಗಳೂರಿನಲ್ಲಿರುವ ರಾಜ್ಯ ಸರ್ಕಾರದ ಕಚೇರಿಗಳು ಸ್ವಾತಯತ್ತ ಸಂಸ್ಥೆ ಹಾಗೂ ನಿಗಮಗಳು ಸಹ ಬಂದ್
* ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಶೇಕಡಾ 50 % ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಾಹಿಸಬೇಕು..
* ಮಾಲ್, ಚಿತ್ರಮಂದಿರ ಬಂದ್
* ಎಲ್ಲಾ ರೀತಿಯ ಸಾಮಾಜಿಕ, ಧಾರ್ಮಿಕ, ಕ್ರೀಡಾ, ಸಮಾರಂಭ ಗಳು ರದ್ದು