Asianet Suvarna News Asianet Suvarna News

ಬೆಂಗಳೂರು ಲಾಕ್‌ಡೌನ್‌: ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್‌| ಇಂದು ರಾತ್ರಿ 8 ರಿಂದ ಲಾಕ್‌ಡೌನ್‌ ಆರಂಭ| ಮುಂದಿನ ಏಳು ದಿನಗಳ ಕಾಲ ನಗರದಲ್ಲಿನ ಬಾರ್‌ಗಳು ಬಂದ್‌|

ಬೆಂಗಳೂರು(ಜು.14): ಮದ್ಯ ಪ್ರಿಯರಿಗೆ ಶಾಕ್‌ ನೀಡಿದೆ ಬೆಂಗಳೂರು ಲಾಕ್‌ಡೌನ್‌. ಹೌದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್‌ ಹಾಕಲಾಗಿದೆ. ಇಂದು(ಮಂಗಳವಾರ) ರಾತ್ರಿ 8 ರಿಂದ ಲಾಕ್‌ಡೌನ್‌ ಆರಂಭವಾಗಲಿದೆ. 

ಲಾಕ್‌ಡೌನ್ ವೇಳೆ ಏನಿರತ್ತೆ? ಏನಿರಲ್ಲ?: ಇಲ್ಲಿದೆ ಇದೆ, ಇಲ್ಲಗಳ ಮಾಹಿತಿ

ಮುಂದಿನ ಏಳು ದಿನಗಳ ಕಾಲ ನಗರದಲ್ಲಿನ ಬಾರ್‌ಗಳು ಬಂದ್‌ ಇರಲಿವೆ. ಇದರಿಂದ ಎಣ್ಣೆ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ ಬಂದಿದೆ. ಇಂದಿನಿಂದ ಮುಂದಿನ ಏಳು ದಿನಗಳ ಕಾಲ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಲಾಕ್‌ಡೌನ್‌ ಆಗಲಿದೆ.