ಚೆನ್ನೈ(ಜು.13):  ಕೊರೋನಾ ವೈರಸ್ ತಗಲುದಂತೆ ಎಚ್ಚರ ವಹಿಸಲು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲದೆ ಹೊರಬಂದರೆ ದುಬಾರಿ ದಂಡ ಕೂಡ ಜಾರಿಯಲ್ಲಿದೆ. ಕೊರೋನಾ ವೈರಸ್‌ನಿಂದ ಆಟೋಮೊಬೈಲ್ ಮಾರಾಟದಲ್ಲೂ ಕುಸಿತ ಕಂಡಿದೆ. ಹೀಗಾಗಿ ಚೆನ್ನೈನ ಕನ್ ಎಲೈಟ್ ಡೀಲರ್ ವಿನೂತನ ಐಡಿಯಾ ಮೂಲಕ ಕಾರು ಮಾರಾಟ ಉತ್ತೇಜಿಸಲು ಮುಂದಾಗಿದ್ದಾರೆ.

ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!.

BMW ಕಾರು ಡೀಲರ್ ತನ್ನ ಶೋ ರೂಂಲ್ಲಿ ಮಾರಾಟಕ್ಕಿಟ್ಟಿರುವ ಮಿನಿ ಕೂಪರ್ ಕಾರಿಗೆ ಮಾಸ್ಕ್ ಹಾಕಿದ್ದಾರೆ. ಮಿನಿ ಕೂಪರ್ ಕಾರು ಮಾರಾಟ ಉತ್ತೇಜಿಸಲು ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯದಲ್ಲಿ ಮಾಸ್ಕ್ ಧಾರಣೆಯ ಕಾರು ಎಲ್ಲರ ಗಮನ ಸೆಳೆದಿದೆ. ಕನ್ ಎಲೈಟ್ ಡೀಲರ್ ಎರಡು ದಿನ ಮಾರಾಟ ಮೇಳೆ ನಡೆಸಿತ್ತು. ಈ ವೇಳೆ ಗ್ರಾಹಕರನ್ನು ಆಕರ್ಷಿಸಲು ಮಿನಿ ಕೂಪರ್ ಕಾರಿನ ಮುಂಭಾಗಕ್ಕೆ ದೊಡ್ಡದಾದ ಮಾಸ್ಕ್ ಹಾಕಲಾಗಿತ್ತು.

ಕನ್ ಎಲೈಟ್ ಡೀಲರ್ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. 3 ವರ್ಷ ಶೂನ್ಯ ನಿರ್ವಹಣಾ ವೆಚ್ಚ. ಸುಲಭ ಸಾಲ, ಕಡಿಮೆ EMI ಸೇರಿದಂತೆ ಗ್ರಾಹಕರಿಗೆ ಹಲವು ಆಫರ್ ನೀಡಲಾಗಿದೆ. ಇದರ ಜೊತೆಗೆ ಕೊರೋನಾ ವೈರಸ್ ತಗಲುದಂತೆ ಎಚ್ಚರ ವಹಿಸಲು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಪ್ರದರ್ಶನಕ್ಕಿಟ್ಟಿದ್ದ ಮಿನಿ ಕೂಪರ್ ಕಾರಿಗೆ ಮಾಸ್ಕ್ ಹಾಕಿ ನಿಲ್ಲಿಸಲಾಗಿತ್ತು. ಕಾರಿಗೆ ಮಾಸ್ಕ್ ಹಾಕಿ ಓಡಿಸುವುದು ಉತ್ತಮ ಬೆಳವಣಿಗೆಯಲ್ಲ. ಕಾರಣ ಸರಿಯಾದ ಪ್ರಮಾಣದಲ್ಲಿ ಎಂಜಿನ್‌ಗೆ ಗಾಳಿ ಸಿಗದ ಕಾರಣ ಎಂಜಿನ್ ಉಷ್ಣತೆ ಹೆಚ್ಚಾಗಲಿದೆ. ಇದರಿಂದ ಎಂಜಿನ್ ಸೀಝ್ ಆಗುವ ಸಾಧ್ಯತೆ ಇದೆ. ಎಂಜಿನ್‌ ಉಷ್ಣತೆ ಕಡಿಮೆ ಮಾಡಲು ಪ್ರತಿ ಕಾರಿನ ಅಥವಾ ವಾಹನದ ಮುಂಭಾಗ ಗ್ರಿಲ್ ಬಳಸಲಾಗಿರುತ್ತದೆ.