Asianet Suvarna News Asianet Suvarna News

ಲಾಕ್‌ಡೌನ್ ಬೇಕು, ಬೇಡದ ನಡುವೆ ಉದ್ಯಮಿಗಳಿಂದ ಹೊಸ ಡಿಮ್ಯಾಂಡ್..!

ಲಾಕ್‌ಡೌನ್ ಬಗ್ಗೆ ಬೇಕು, ಬೇಡ, ಹೀಗಿರಲಿ, ಹಾಗಿರಲಿ ಎನ್ನುವ ಚರ್ಚೆ ಮಧ್ಯೆ ಸಬ್ ರಿಜಿಸ್ಟಾರ್ ಕಚೇರಿ, RTO ಕಚೇರಿ ಓಪನ್ ಮಾಡುವಂತೆ ಉದ್ಯಮಿಗಳ ವಲಯ ಸರ್ಕಾರದ ಮೇಲೆ ಡಿಮ್ಯಾಂಡ್ ಇಟ್ಟಿದೆ. 

ಬೆಂಗಳೂರು (ಜು. 13): ಲಾಕ್‌ಡೌನ್ ಬಗ್ಗೆ ಬೇಕು, ಬೇಡ, ಹೀಗಿರಲಿ, ಹಾಗಿರಲಿ ಎನ್ನುವ ಚರ್ಚೆ ಮಧ್ಯೆ ಸಬ್ ರಿಜಿಸ್ಟಾರ್ ಕಚೇರಿ, RTO ಕಚೇರಿ ಓಪನ್ ಮಾಡುವಂತೆ ಉದ್ಯಮಿಗಳ ವಲಯ ಸರ್ಕಾರದ ಮೇಲೆ ಡಿಮ್ಯಾಂಡ್ ಇಟ್ಟಿದೆ.

ಆರ್ಥಿಕ ಚಕ್ರ ಉರುಳಿದರೆ ಮಾತ್ರ ಸರ್ಕಾರ ನಡೆಯಲು ಸಾಧ್ಯ. ರಿಯಲ್ ಎಸ್ಟೇಟ್ ವಹಿವಾಟಿಗೆ ಸಬ್ ರಿಜಿಸ್ಟಾರ್ ಕಚೇರಿ ಓಪನ್ ಇರಬೇಕಾಗುತ್ತದೆ. ವಾಹನಗಳ ನೋಂದಣಿಗೆ RTO ಕಚೇರಿ ತೆರೆದಿರಬೇಕಾಗುತ್ತದೆ. ಇವೆಲ್ಲಾ ಸರ್ಕಾರದ ಆದಾಯದ ಮೂಲಗಳು. ಇಲ್ಲಿ ಜನ ಸೇರಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ. ನಮಗೆ ವಿಶ್ವಾಸವಿದೆ. ಇದಕ್ಕೆ ಅವಕಾಶ ನೀಡಿ ಎಂದು ರಾಜ್ಯ ಸರ್ಕಾರದ ಮೇಲೆ ಉದ್ಯಮಿಗಳು ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ವಕ್ತಾರರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ.

ಸಚಿವರ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್: ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್