ಹಮಾಸ್ ರೀತಿ ದಾಳಿಗೆ ಸಜ್ಜಾಗಿದ್ದ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ
ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸೀಮಿತ ಭೂದಾಳಿ ನಡೆಸಿದೆ. ಇದಕ್ಕೂ ಮುನ್ನ ಇಸ್ರೇಲ್ ಮೇಲೆ ಹಿಜ್ಬುಲ್ಲಾ ಉಗ್ರರು ರಾಕೆಟ್ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಎದುರಾಗಿದೆ.
ವಾಷಿಂಗ್ಟನ್/ಟೆಲ್ ಅವಿವ್: ಈವರೆಗೆ ಲೆಬನಾನ್‌ನ ಮೇಲೆ ವಾಯುದಾಳಿ ನಡೆಸುತ್ತಿದ್ದ ಇಸ್ರೇಲ್ ಸೋಮವಾರ ಲಘು ಭೂದಾಳಿ ನಡೆಸಿದೆ. ಇಸ್ರೇಲ್‌ನ ಗಡಿಯ ಸಮೀಪವಿರುವ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಸೀಮಿತ ಭೂದಾಳಿ ನಡೆಸುತ್ತಿದೆ ಎಂದು ತನಗೆ ಇಸ್ರೇಲ್ ತಿಳಿಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ. ಮತ್ತೊಂದೆಡೆ ಇಸ್ರೇಲ್ ಮೇಲೆ 400ಕ್ಕೂ ಅಧಿಕ ರಾಕೆಟ್‌ಗಳಿಂದ ಇರಾನ್ ದಾಳಿ ನಡೆಸಿದೆ ಎಂಬ ವರದಿಗಳು ಬರುತ್ತಿವೆ.
‘ಅವರು ಪ್ರಸ್ತುತ ಭೂದಾಳು ನಡೆಸುತ್ತಿದ್ದಾರೆ ಎಂದು ಅವರು ನಮಗೆ ತಿಳಿಸಿದ್ದಾರೆ, ಇದು ಗಡಿಯ ಸಮೀಪವಿರುವ ಹಿಜ್ಬುಲ್ಲಾ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಸೀಮಿತ ಕಾರ್ಯಾಚರಣೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದರು. ‘ಇದು ಲಘು ದಾಳಿಯೇ?’ ಎಂದು ಕೇಳಿದಾಗ, ‘ನಾವು ಹಾಗೆ ಭಾವಿಸಿದ್ದೇವೆ’ ಎಂದು ಮಿಲ್ಲರ್ ಹೇಳಿದರು.
ಹಿಜ್ಬುಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯಿಂದ ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ, ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬಂದಿವೆ. ಇದಕ್ಕೆ ಪೂರಕವೆಂಬಂತೆ, ಇಸ್ರೇಲ್‌ನ ಸೇನಾ ನೆಲೆಗಳು ಮತ್ತು ಗುಪ್ತಚರ ಸಂಸ್ಥೆ ಮೊಸಾದ್ ಕಚೇರಿಯನ್ನು ಗುರಿಯಾಗಿಸಿ ಹಿಜ್ಬುಲ್ಲಾ ಉಗ್ರರು ಮಂಗಳವಾರ ರಾಕೆಟ್, ಕ್ಷಿಪಣಿ ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಇರಾನ್ ಕೂಡಾ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗೆ ಸಜ್ಜಾಗಿದೆ ಎಂದು ಅಮೆರಿಕ ಎಚ್ಚರಿಸಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು, ಯೆಮನ್ ಸೇನಾಪಡೆ, ಇರಾನ್ ಸರ್ಕಾರ ಮತ್ತು ಹಮಾಸ್ ಉಗ್ರರು ಜಂಟಿಯಾಗಿ ಮುಗಿಬೀಳುವ ಸಾಧ್ಯತೆ ಕಂಡುಬಂದಿದೆ.
60 ಅಡಿ ಆಳದಲ್ಲಿದ್ದರೂ ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೈದ ಇಸ್ರೇಲ್! ಬಾಂಬ್ ಶಬ್ದಕ್ಕೆ ಬೆಚ್ಚಿ ಸತ್ತಿರುವ ಶಂಕೆ
ಮೊಸಾದ್ ಮೇಲೆ ದಾಳಿ:
ಇಸ್ರೇಲಿ ಸೇನೆ ಸೋಮವಾರ, ಲೆಬನಾನಿನ ದಕ್ಷಿಣ ಭಾಗದಲ್ಲಿ ಸೀಮಿತ ಭೂದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಇಸ್ರೇಲಿನ ಸೇನಾ ನೆಲೆಗಳು ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಕೇಂದ್ರ ಕಚೇರಿ ಗುರಿಯಾಗಿಸಿ ಹಿಜ್ಬುಲ್ಲಾ ಉಗ್ರರು ಮಂಗಳವಾರ ರಾಕೆಟ್, ಕ್ಷಿಪಣಿ ದಾಳಿ ನಡೆಸಿದ್ದಾರೆ. ಸಂಘರ್ಷ ಪ್ರಾರಂಭವಾದಾಗಿನಿಂದ ಲೆಬನಾನ್ ಕಡೆಯಿಂದ ನಡೆದ ಅತಿ ದೊಡ್ಡ ದಾಳಿ ಇದಾಗಿದೆ. ಮತ್ತೊಂದೆಡೆ ಯೆಮೆನ್‌ನ ಸಶಸ್ತ್ರ ಪಡೆಗಳು ಕೂಡ ಡ್ರೋನ್ ಬಳಸಿ ಆಕ್ರಮಣ ಮಾಡಿರುವುದಾಗಿ ಹೇಳಿವೆ. ಬಾಹ್ಯ ದಾಳಿ ತಡೆಗೆ ಇಸ್ರೇಲ್ ಹೊಂದಿರುವ ಐರನ್ ಡ್ರೋನ್ ವ್ಯವಸ್ಥೆಯನ್ನೂ ದಾಟಿ ಕ್ಷಿಪಣಿ, ರಾಕೆಟ್‌ಗಳು ಇಸ್ರೇಲ್ ಪ್ರವೇಶಿಸಿವೆ ಎಂದು ವರದಿಗಳು ತಿಳಿಸಿವೆ.
ಅಮೆರಿಕದಿಂದ ಎಚ್ಚರಿಕೆ
ಹಿಜ್ಬುಲ್ಲಾ ಸಂಘಟನೆಯ ನಾಯಕ ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಲು ಇರಾನ್ ಸಜ್ಜಾಗಿದೆ ಎಂದು ಅಮೆರಿಕ ಎಚ್ಚರಿಸಿತ್ತು. ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಇರಾನ್ ಎಲ್ಲಾ ಸಿದ್ಧತೆ ಆರಂಭಿಸಿದೆ. ಒಂದು ವೇಳೆ ಅದು ದಾಳಿ ನಡೆಸಿದರೆ ಅದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಲಿದ ಎಂದು ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಬೆಂಬಲಕ್ಕೆ ನಿಂತಿದೆ. ಜೊತೆಗೆ ಅದಕ್ಕೆ ಪೂರಕವಾಗಿ ಇಸ್ರೇಲ್ ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾ ನಿಯೋಜನೆ ಹೆಚ್ಚಿಸಿದೆ.
Israel Iron Dome failed to stop Iran Missiles that strike Tel Aviv
— World life (@seautocure) October 1, 2024
It seems like the World War 3 is here
The US and Israel are behind the WWIII pic.twitter.com/S1WZw3a7SF