ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಜಿಲ್ಲೆಯಲ್ಲಿ 47 ರಸ್ತೆ ಸಂಚಾರ ಸ್ಥಗಿತಗೊಂಡು, 51 ಗ್ರಾಮಗಳು ಜಲಾವೃತಗೊಂಡಿವೆ ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
Karnataka Districts Jul 24, 2021, 11:56 AM IST
ಕಳೆದ 4-5 ದಿನಗಳಿಂದ ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ.
Karnataka Districts Jul 24, 2021, 9:13 AM IST
* ಮಹಾ ಮಳೆಗೆ ನೆರೆ ರಾಜ್ಯ ತತ್ತರ
* ಮಹಾರಾಷ್ಟ್ರ ಮಳೆ: 2 ದಿನಕ್ಕೆ 136 ಬಲಿ
* ವಿಕೋಪಕ್ಕೆ ಮೋದಿ, ಶಾ ಆಘಾತ
India Jul 24, 2021, 7:23 AM IST
ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕದಲ್ಲೂ ಮಳೆ ಅಬ್ಬರ ಜೋರಾಗಿದೆ. ಬೆಳಗಾವಿ, ಖಾನಪುರ, ಉತ್ತರ ಕನ್ನಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳು ಕೊಚ್ಚಿ ಹೋಗಿವೆ. ಹೆಲಿಕಾಪ್ಟರ್ ಮೂಲಕ ಜನರ ರಕ್ಷಣೆ ನಡೆಯುತ್ತಿದೆ. ಹಲವು ಜಿಲ್ಲಿಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತ್ತ ರಾಜ್ಯ ರಾಕಾರಣದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ಚೋರಾಗಿದೆ. ಬಾಲಿವುಡ್ನಲ್ಲಿ ಅಶ್ಲೀಲ ಸಿನಿಮಾ ದಂಧೆ ಇದೀಗ ಶಿಲ್ಪಾ ಶೆಟ್ಟಿ ಕೊರಳಿಗೂ ಸುತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿದೆ. ಈ ಎಲ್ಲಾ ಸುದ್ದಿ ವಿವರ ಇಂದಿನ ನ್ಯೂಸ್ ಹವರ್ನಲ್ಲಿದೆ ನೋಡಿ.
India Jul 23, 2021, 11:22 PM IST
ಪ್ರವಾಹದಿಂದ 131 ಗ್ರಾಮಗಳು ತೊಂದರೆಗೆ ಸಿಲುಕಿವೆ. ಮಳೆಯಿಂದ ರಾಜ್ಯಾದ್ಯಂತ 830 ಮನೆಗಳಿಗೆ ಹಾನಿಯಾಗಿದೆ. 8733 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 80 ಕಾಳಜಿ ಕೇಂದ್ರ ಆರಂಭ ಮಾಡಲಾಗಿದೆ.
Karnataka Districts Jul 23, 2021, 8:25 PM IST
ಕಾಫಿ ನಾಡಿನಲ್ಲಿ ಮಹಾಮಳೆ ಬಲಿ ಪಡೆದುಕೊಂಡಿದೆ. ಕೊಟ್ಟಿಗೆ ಕುಸಿದು ವೃದ್ಧ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದೆ. ಹಸುವಿಗೆ ಮೇವು ಹಾಕಲು ಹೋದಾಗ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಮೊಮ್ಮಗ ಅಪಾಯದಿಂದ ಪಾರಾಗಿದ್ದಾರೆ.
Karnataka Districts Jul 23, 2021, 6:18 PM IST
India Jul 23, 2021, 5:36 PM IST
ರಾಯಚೂರು, ಬೆಳಗಾವಿ,ಶಿವಮೊಗ್ಗ ಕಡೆಗಳಲ್ಲಿ ಎನ್ ಡಿ ಆರ್ ಎಫ್ ತಂಡವನ್ನು ಕಳಿಸಲಾಗಿದೆ. ಜನರನ್ನು ಸುರಕ್ಷಿತ ಜಾಗಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮೂರು ಸಾವು, ಎರಡು ನಾಪತ್ತೆ ಪ್ರಕರಣಗಳು ವರದಿ ಆಗಿವೆ.. ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಆರ್ ಅಶೋಕ ತಿಳಿಸಿದ್ದಾರೆ.
Karnataka Districts Jul 23, 2021, 4:19 PM IST
ಪಶ್ಚಿಮ ಘಟ್ಟ ಹಾಗೂ ರಾಜ್ಯದಲ್ಲಿಯೂ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಳ್ಳ, ಕೊಳ್ಳ ಹಾಗೂ ನದಿಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ಬೆಣ್ಣೆ ಹಳ್ಳದಲ್ಲಿ ಸುಮಾರು 200 ಕುರಿಗಳು ಹಾಗೂ 7 ಜನ ಕುರಿಗಾಯಿಗಳು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ತಾಲೂಕಾಡಳಿತ ಕಾರ್ಯಾಚರಣೆ ನಡೆಸಲಾಗುತ್ತಿದೆ.
Karnataka Districts Jul 23, 2021, 4:07 PM IST
ರಾಜ್ಯದಲ್ಲಿ ಮುಂಗಾರು ಅಬ್ಬರಿಸುತ್ತಿದೆ. 12 ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ರೀತಿಯ ವಾತಾವರಣ ನಿರ್ಮಾಣವಾಗಿದೆ.
ಮಲೆನಾಡಿನ 3 ಜಿಲ್ಲೆಗಳಲ್ಲಿ ಭೂ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
state Jul 23, 2021, 12:19 PM IST
ಜಿಲ್ಲೆಯಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಇಂದು(ಶುಕ್ರವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ 2.50 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಕೃಷ್ಣಾ ನದಿಗೆ ಹೊರಬಿಡಲಾಗುತ್ತದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕೆಂದು ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Karnataka Districts Jul 23, 2021, 10:46 AM IST
ವ್ಯಾಪಕ ಮಳೆಯಿಂದ ಕದ್ರಾ, ಕೊಡಸಳ್ಳಿ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮವಾಗಿ ಕದ್ರಾ ಬಳಿ ಮನೆಗಳಿಗೆ ನೀರು ನುಗ್ಗಿದೆ. ಸುರಕ್ಷತಾ ದೃಷ್ಟಿಯಿಂದ 45 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
Karnataka Districts Jul 23, 2021, 9:35 AM IST
ಹಿಂದೆಂದೂ ಕಂಡು ಕೇಳರಿಯದಂತಹ ರಣ ಭೀಕರ ಪ್ರವಾಹಕ್ಕೆ ಸಿಲುಕಿ ಚೀನಾ ತತ್ತರಿಸಿ ಹೋಗಿದೆ. ಸಾವಿರಾರು ಕಾರುಗಳು ಆಟಿಗಳಂತೆ ನೀರಲ್ಲಿ ತೇಲಿ ಹೋಗಿವೆ. ಇಲ್ಲಿದೆ ಬೆಚ್ಚಿ ಬೀಳಿಸುವ ವಿಡಿಯೋ
International Jul 23, 2021, 9:16 AM IST
India Jul 22, 2021, 9:43 PM IST
ರಾಜ್ಯದಲ್ಲಿ ಮುಂಗಾರು ಅಬ್ಬರ ಮುಂದುವರಿದಿದೆ. ಬೆಳಗಾವಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆ ನೀರಿನ ಹೊಡತಕ್ಕೆ ಸಿಲುಕಿ ಜನರು ಸಂಕಷ್ಟ ಪಡುತ್ತಿದ್ದಾರೆ. ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಮನೆಗಳು ಧರೆಗೆ ಉರುಳಿವೆ.
Karnataka Districts Jul 22, 2021, 5:15 PM IST