Asianet Suvarna News Asianet Suvarna News

ಮಾತಾಡೋ ಮುನ್ನ ಯೋಚಿಸು; ಹಿಂದೂಗಳ ವಿರುದ್ಧ ನಾಲಗೆ ಹರಿಬಿಟ್ಟ ಪ್ರಕಾಶ ರಾಜ್‌ಗೆ ಡಿಸಿಎಂ ಪವನ್ ಕಲ್ಯಾಣ ಎಚ್ಚರಿಕೆ

ಹಿಂದೂ ಧರ್ಮ ಮತ್ತು ಸನಾತನ ಧರ್ಮಕ್ಕೆ ಇಂತಹ ಅಪಮಾನ ನಡೆಯುತ್ತಿದ್ದರೂ ಹಿಂದೂಗಳು ಸುಮ್ಮನಿರುವುದೇಕೆ ಎಂದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ಪ್ರಶ್ನಿಸಿದ್ದಾರೆ.

tirupati laddu row andhra pradesh dcm pawan kalyan warns to prakash raj rav
Author
First Published Sep 25, 2024, 12:01 AM IST | Last Updated Sep 25, 2024, 12:28 AM IST

ಆಂಧ್ರ ಪ್ರದೇಶ (ಸೆ.24) : ಹಿಂದೂ ಧರ್ಮ ಮತ್ತು ಸನಾತನ ಧರ್ಮಕ್ಕೆ ಇಂತಹ ಅಪಮಾನ ನಡೆಯುತ್ತಿದ್ದರೂ ಹಿಂದೂಗಳು ಸುಮ್ಮನಿರುವುದೇಕೆ ಎಂದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ ಪ್ರಶ್ನಿಸಿದ್ದಾರೆ.

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಬಳಸಿರುವ ವಿವಾದ ಸಂಬಂಧ ಕಳೆದ  ಮೂರು ದಿನಗಳಿಂದ ಪ್ರಯಶ್ಚಿತ ದೀಕ್ಷೆ ನಡೆಸುತ್ತಿರುವ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದು ದುರ್ಗಾ ಗುಡಿಯಲ್ಲಿ ಶುದ್ಧೀಕರಣ ಕಾರ್ಯಕ್ರಮ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮೌನವನ್ನು  ದೌರ್ಬಲ್ಯ ಎಂದು ತಿಳಿದಿದ್ದಾರೆ. ಬೇರೆ ಬೇರೆ ಧರ್ಮದವರು ಬೇರೆ ಬೇರೆ ಪ್ರದೇಶದಲ್ಲಿ ಈ ರೀತಿ ನಡೆದಿದ್ದರೆ ಪರಿಸ್ಥಿತಿ ಹೀಗಿರುತ್ತಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿರುಪತಿ ಲಡ್ಡು ವಿವಾದ: ಪವನ್‌ ಕಲ್ಯಾಣ್‌ 11 ದಿನ ಉಪವಾಸ ವ್ರತ

 

ಜಾತ್ಯತೀತತೆ ಎರಡು ಕಡೆಯಿಂದ ಇರಬೇಕು:

ಜಾತ್ಯಾತೀತತೆ ಹಿಂದೂಗಳಷ್ಟೇ ಪಾಲಿಸುವುದಲ್ಲ, ಎರಡೂ ಕಡೆಯಿಂದಲೂ ಇರಬೇಕು. ಇದುವರೆಗೆ ಸಹಿಸಿಕೊಂಡಿದ್ದ ಹಿಂದೂಗಳು ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಸನಾತನ ಧರ್ಮಕ್ಕಾಗಿ ಹೋರಾಟ ಮಾಡಿದರೆ ಅವರನ್ನು ತಡೆಯುವವರು ದೇಶದಲ್ಲಿ ಯಾರೂ ಇಲ್ಲ. ಹಿಂದೂಗಳ ವಿರುದ್ಧ ಮಾತನಾಡುವ ಮುನ್ನ ಯೋಚಿಸಿ ಮಾತನಾಡಿ ಎಂದು ಪೊನ್ನವೋಲು, ಸುಬ್ಬಾರೆಡ್ಡಿ, ಕುರಣಕರ್ ರೆಡ್ಡಿ, ಪ್ರಕಾಶ್ ರಾಜ್ ಅವರು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಯಾಗಿ ಎಚ್ಚರಿಕೆ ನೀಡಿದ್ದಾರೆ.

ಹಿಂದೂಗಳು ಎಲ್ಲರನ್ನು ಸ್ವೀಕರಿಸುತ್ತಾರೆ:

 ಬಾಲ್ಯದಿಂದಲೂ ಸನಾತನ ಧರ್ಮವನ್ನು ನಿಷ್ಠೆಯಿಂದ ಅನುಸರಿಸುತ್ತಿದ್ದೇನೆ. ಮನೆಯಲ್ಲಿ ಯಾವಾಗಲೂ ರಾಮ ನಾಮ ಜಪವನ್ನು ಕೇಳಿಬರುತ್ತದೆ. ಇದರ ಹೊರತಾಗಿ ನಾವು ಎಲ್ಲ ಧರ್ಮದವರನ್ನು ಗೌರವಿಸುತ್ತೇವೆ. ಯಾವುದೇ ಹಿಂದೂವಾದರೂ ಹೀಗೆ ಮಾಡುತ್ತಾನೆ. ದೇಶದಲ್ಲಿ ಹಿಂದೂಗಳಿಂದ ಭಯವಿಲ್ಲ. ಅನ್ಯಧರ್ಮ ಅಥವಾ ವ್ಯಕ್ತಿಯ ಬಗ್ಗೆ ಬೇರೆ ಧರ್ಮ ಎನ್ನುವ ಕಾರಣಕ್ಕೆ ದ್ವೇಷ ಸಾಧಿಸುವುದಿಲ್ಲ. ಇದು ಪ್ರಾಚೀನ ಕಾಲದಿಂದಲೂ ಹಿಂದೂಗಳು ಧರ್ಮ, ದೇಶ ನೋಡದೆ ಯಾರೇ ಬಂದರೂ ಸಮಾನವಾಗಿ ಕಂಡಿದ್ದಾರೆ, ಸತ್ಕರಿಸಿದ್ದಾರೆ ಎಂದರು.

ಹಿಂದೂಗಳೇ ಹಿಂದೂಗಳ ಶತ್ರು:

ಸನಾತನ ಧರ್ಮದ ಬಗ್ಗೆ ಹಿಂದೂಗಳೇ ಬಾಯಿಗೆ ಬಂದಂತೆ ಮಾತಾಡ್ತಾರೆ. ಹಿಂದೂಗಳೇ ಸನಾತನ ಧರ್ಮ ಶತ್ರು ಆಗಿದ್ದಾರೆ. ಮನೆಯಲ್ಲಿ ಹಿಂದೂ ಸಂಪ್ರಾದಯ ಆಚರಣೆ ಮಾಡ್ತಾರೆ, ಮಾಧ್ಯಮಗಳ ಮುಂದೆ ಹಿಂದೂ ಧರ್ಮದ ಅವಹೇಳನ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷಗಳ ಕಾಲ ಆಡಳಿತ ನಡೆಸಿದ ವೈಸಿಪಿ ಆಡಳಿತದಲ್ಲಿ ಕನಕದುರ್ಗಮ್ಮನ ಸಿಂಹಗಳು ಕಣ್ಮರೆಯಾದವು, ವಿಜಯನಗರದಲ್ಲಿ ಮೂರ್ತಿಗಳ ತಲೆ ಒಡೆದಾಗಲೂ ಇದೇ ರೀತಿಯ ಕೂಗು ಕೇಳಿಬಂದಿತ್ತು. ಇಂತಹ ವೇಳೆ ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂ ವಿರೋಧಿ ಹೇಳಿಕೆ ನೀಡ್ತಾರೆ. ಅವರೆಲ್ಲರೂ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು ಹಿಂದೂ ವಿರೋಧಿ ಹೇಳಿಕೆ ನೀಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನು ವೈ.ವಿ.ಸುಬ್ಬಾರೆಡ್ಡಿ, ಭೂಮನ ಕರುಣಾಕರ್ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ಯಾವ ಧರ್ಮವನ್ನು ಅಳವಡಿಸಿಕೊಂಡಿದ್ದಾರೆಂಬುದು ತಿಳಿದಿಲ್ಲ, ತಿಳಿಯುವ ಅಗತ್ಯವಿಲ್ಲ. ಆದರೆ ಅವರೆಲ್ಲರೂ ಈ ಹಿಂದೆ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಕಾರಣ ಜವಾಬ್ದಾರಿ ವಹಿಸುವಂತೆ ಸಲಹೆ ನೀಡಿದರು. ಹಿಂದೂ ಧರ್ಮದ ರಕ್ಷಣೆಗೆ ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ ಹೀಗಾಗಿ ನಡೆದ ಘಟನೆಗೆ ಅವರು ಸಹ ಹೊಣೆ ಹೊರಬೇಕು ಎಂದರು.

ಘರ್ಷಣೆಗೆ ಒಂದು ನಿಮಿಷ ಸಾಕು:

ತಿರುಪತಿ ಲಡ್ಡು ಪ್ರಸಾದ ವಿಚಾರಕ್ಕೆ ಜಗನ್ ಅವರದ್ದಷ್ಟೇ ಅಲ್ಲ ಅವರ ನಾಯಕತ್ವದಲ್ಲಿ ಮಾತ್ರ ತಪ್ಪುಗಳು ನಡೆದಿವೆ. ಸಾಕ್ಷಿ ಇರೋದಕ್ಕೆ ಹೇಳ್ತಿರೋದು. ಸಾಕ್ಷಿ ಇಲ್ಲದಿದ್ದರೆ ಈ ರೀತಿ ಮಾತನಾಡಲು ನಮಗೆ ಬೇರೇನೂ ಕೆಲಸವಿಲ್ಲವ? ಇಂತಹ ವಿಷಯಗಳಿಗೆ ಸ್ಪಷ್ಟ ಸಾಕ್ಷಿ ಸಮೇತ ಉತ್ತರಿಸುತ್ತೇನೆ.  ಈ ಬಗ್ಗೆ ಗಲಾಟೆ ಮಾಡುವ ಅಗತ್ಯವಿಲ್ಲ. ಹಾಗೆ ಮಾಡಬೇಕೆಂದಿದ್ದರೆ ರಾಮನ ಮೂರ್ತಿಯ ತಲೆ ಕಡಿಯುವಾಗಲೇ ಗಲಾಟೆ ಆಗುತ್ತಿತ್ತು. ಗಲಾಟೆ ಆರಂಭಿಸಲಿಕ್ಕೆ ನಿಮಿಷ ಸಾಕು. ಆದರೆ ಜನರು ಚೆನ್ನಾಗಿರಬೇಕು. ಸಂವಿಧಾನ ಜಾರಿಯಲ್ಲಿರಬೇಕು ಎಂಬುದು ನಮ್ಮ ಆಶಯವಾಗಿದೆ.  ಸೆಕ್ಯೂಲರಿಸಂ ಹೆಸರಿನಲ್ಲಿ ಒನ್ ಸೈಡೆಡ್ ಮಾತಾಡುವುದು ಸರಿಯಲ್ಲ. ಜಾತ್ಯತೀತತೆ ಎರಡೂ ಕಡೆಯಿಂದಲೂ ಇರಬೇಕು ಎಂಬ ತತ್ವವನ್ನು ಮರೆಯುತ್ತಿದ್ದಾರೆ ಎಂದರು.

ತಿರುಪತಿ ಲಡ್ಡು ವಿವಾದ: ಪವನ್‌ ಕಲ್ಯಾಣ್ ಹೇಳಿಕೆಗೆ ತಿವಿದ ನಟ ಪ್ರಕಾಶ್ ರಾಜ್!

ಈಗಿನ ಬೆಳವಣಿಗೆಗಳಿಗೆ ಯಾರನ್ನೂ ದೂಷಿಸುವ ಬದಲು ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಮುಂದೆ ಇಂತಹ ಘಟನೆಗಳ ಆಗದಂತೆ ಎಚ್ಚರವಾಗಬೇಕು. ಹಿಂದೂಗಳಿಗೆ ಅನ್ಯಾಯವಾದಾಗ ಧ್ವನಿ ಎತ್ತಬೇಕು. ಹಿಂದೂ ದೇವಾಲಯಗಳಲ್ಲಿ ನಡೆದಂತೆ ಮಸೀದಿ, ಚರ್ಚ್ ಗಳಲ್ಲಿ ನಡೆದರೆ ಹೇಗಿರುತ್ತೆ ಎಂದು ಪ್ರಶ್ನಿಸಿದರು. ಏನೂ ಮಾಡಿದ್ರೂ ಹಿಂದೂಗಳು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಏನೂ ಬೇಕಾದ್ರೂ ಮಾಡ್ತಾರೆ. ಆದರೆ ಅದಕ್ಕೊಂದು ಮಿತಿಯಿದೆ. ಈಗಾಗಲೇ ಹಿಂದೂಗಳು ತಾಳ್ಮೆ ಕಳೆದುಕೊಂಡಿದ್ದಾರೆ ಎಂದರು. 

Latest Videos
Follow Us:
Download App:
  • android
  • ios