Asianet Suvarna News Asianet Suvarna News

ನವಲಗುಂದ: ಬೆಣ್ಣೆಹಳ್ಳದಲ್ಲಿ ಸಿಲುಕಿರುವ 200 ಕುರಿ, 7 ಕುರಿಗಾಯಿಗಳ ರಕ್ಷಣೆಗೆ ಕಾರ್ಯಾಚರಣೆ

* ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ನಡೆದ ಘಟನೆ
* ಕುರಿಗಳ ಸಮೇತ ಹಳ್ಳದಲ್ಲಿ ಸಿಲುಕಿದ ಕುರಿಗಾಯಿಗಳು
* ತೊಂದರೆಯಾಗದ ಹಾಗೆ ರಕ್ಷಣೆ ಮಾಡುತ್ತಿರುವ ನವಲಗುಂದ ತಾಲೂಕಾಡಳಿತ

Navalgund Taluka Administration Operation Starts for Sheeps in Flood grg
Author
Bengaluru, First Published Jul 23, 2021, 4:07 PM IST

ಹುಬ್ಬಳ್ಳಿ(ಜು.23): ಪಶ್ಚಿಮ ಘಟ್ಟ ಹಾಗೂ ರಾಜ್ಯದಲ್ಲಿಯೂ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಳ್ಳ, ಕೊಳ್ಳ ಹಾಗೂ ನದಿಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ಬೆಣ್ಣೆ ಹಳ್ಳದಲ್ಲಿ ಸುಮಾರು 200 ಕುರಿಗಳು ಹಾಗೂ 7 ಜನ ಕುರಿಗಾಯಿಗಳು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ತಾಲೂಕಾಡಳಿತ ಕಾರ್ಯಾಚರಣೆ ನಡೆಸಲಾಗುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ ತುಂಬಿ ಬಂದ ಪರಿಣಾಮ, ಕುರಿಗಳ ಸಮೇತ ಕುರಿಗಾಯಿಗಳು ಸಿಲುಕಿ ಸಹಾಯಕ್ಕಾಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. 

ವರುಣನ ಅಬ್ಬರ: ಆಲಮಟ್ಟಿ ಡ್ಯಾಂನಿಂದ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಅಲ್ಲಿರುವ ಕುರಿಗಳನ್ನು ಬೋಟಿನಲ್ಲಿ ಹೊರಗೆ ತರುವ ಕಾರ್ಯಾಚರಣೆ ನಡೆದಿದ್ದು, ಯಾರಿಗೂ ತೊಂದರೆಯಾಗದ ಹಾಗೇ ರಕ್ಷಣೆ ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
 

Follow Us:
Download App:
  • android
  • ios