Dr bro ಗೆ ಬಿಗ್ ಬಾಸ್ ಗೆ ಬನ್ನಿ ಅಂದ್ರೆ, ಬೇಡ ವಿಡಿಯೋ ಪೋಸ್ಟ್ ಮಾಡ್ತೀರಿ ಸಾಕೆಂದ ಫ್ಯಾನ್ಸ್!
ಬಿಗ್ ಬಾಸ್ ಶೋ ಶುರುವಾಗ್ತಿದ್ದಂತೆ ಯಾರೆಲ್ಲ ಹೋಗ್ತಾರೆ ಎಂಬ ಪ್ರಶ್ನೆ ಆರಂಭವಾಗಿದೆ. ಇದ್ರಲ್ಲಿ ಡಾ. ಬ್ರೋ ಹೆಸರು ಆಗಾಗ ಬಂದುಹೋಗ್ತಿದೆ. ಈಗ ಡಾ. ಬ್ರೋ ವಿದೇಶದಲ್ಲಿರುವ ಫೋಟೋ ಹಾಕಿದ್ರೂ ಜನಕ್ಕೆ ಅವರು ಬರ್ಬಹುದು ಎಂಬ ಆಸೆ ಮೂಡಿದೆ.
ಕೈನಲ್ಲಿ ಕ್ಯಾಮರಾ ಹಿಡಿದು, ಬೆನ್ನಿಗೆ ಬ್ಯಾಗ್ ಹಾಕಿ, ನಮಸ್ಕಾರ ದೇವ್ರು ಅಂತ ಮತ್ತೆ ಡಾ. ಬ್ರೋ ಎಲ್ಲರ ಮುಂದೆ ಬರುವ ಸಮಯ ಹತ್ತಿರವಾಗ್ತಿದೆ. ಡಾ. ಬ್ರೋ ಯೂಟ್ಯೂಬ್ ಚಾನೆಲ್ (Dr. Bro YouTube Channel) ನಲ್ಲಿ ತಿಂಗಳಾದ್ರೂ ಗಗನ್ (Gagan) ವಿಡಿಯೋ ಪೋಸ್ಟ್ ಆಗಿಲ್ಲ. ಡಾ. ಬ್ರೋ ಚಾನೆಲ್ ತಪ್ಪದೆ ನೋಡುವ ಫ್ಯಾನ್ಸ್ ಗೆ ಇದು ಬೇಸರತರಿಸಿದೆ. ಗಗನ್ ನೆಕ್ಸ್ಟ್ ದೇಶ ಯಾವ್ದು, ಅಲ್ಲಿ ಏನೆಲ್ಲ ನೋಡೋಕೆ ಸಿಗುತ್ತೆ ಎನ್ನುವ ಕಾರತರದಲ್ಲಿ ವೀಕ್ಷಕರಿದ್ದಾರೆ. ಈ ಮಧ್ಯೆ ಇನ್ಸ್ಟಾಗ್ರಾಮ್ (Instagram) ನಲ್ಲಿ ಆಕ್ಟೀವ್ ಆಗಿರುವ ಡಾ. ಬ್ರೋ ನಾಲ್ಕೈದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವ್ರ ಖಾತೆಯಲ್ಲಿ ಫೋಟೋ ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಲೈಕ್ ಮೇಲೆ ಲೈಕ್ ಸಿಕ್ಕಿದ್ದು, ಗಗನ್ ಕೇಳಿದ ಪ್ರಶ್ನೆಗೆ ಉತ್ತರ ಬಿಟ್ಟು, ಫ್ಯಾನ್ಸ್ ಬಿಗ್ ಬಾಸ್ (Bigg Boss) ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ.
ಗಗನ್ ತಮ್ಮ ಇನ್ಸ್ಟಾ ಖಾತೆ ಡಾ. ಬ್ರೋಕನ್ನಡದಲ್ಲಿ (drbrokannada) ಐದು ಫೋಟೋ ಪೋಸ್ಟ್ ಮಾಡಿದ್ದಾರೆ. ಯಾವ ದೇಶ ಅಂತ ಗೆಸ್ ಮಾಡಿ. ಅಲ್ಲದೆ ಹಿಂಟ್ ಕೂಡ ನೀಡಿದ್ದಾರೆ. ಗಗನ್ ಒಂದು ಫೋಟೋದಲ್ಲಿ ಸೆಲ್ಫಿ ತೆಗೆದುಕೊಂಡಿದ್ರೆ ಇನ್ನೊಂದು ಫೋಟೋದಲ್ಲಿ ಕಾರ್ ಫೋಟೋ ಹಾಕಿ, ಕಾರ್ ಬ್ರೋಕ್ ಅಂತ ಶೋರ್ಷಿಕೆ ಹಾಕಿದ್ದಾರೆ. ಮತ್ತೊಂದು ಫೋಟೋದಲ್ಲಿ ರಿಪೇರಿ ನಡೀತಾ ಇದೆ ಅಂತ ಬರೆದ್ರೆ, ಜುಗಾಡ್ ಡನ್ ಅಂತ ನೆಕ್ಸ್ಟ್ ಫೋಟೋಕ್ಕೆ ಶೀರ್ಷಿಕೆ ಬರೆದಿದ್ದಾರೆ. ಗಗನ್ ಕೊನೆ ಫೋಟೋ ಅಧ್ಬುತವಾಗಿದೆ. ಲಾಸ್ಟ್ ಫೋಟೋದಲ್ಲಿ ಒಬ್ಬ ಹುಡುಗನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಗಗನ್ ಕಣ್ಣು ನೋಡಿ ಫ್ಯಾನ್ಸ್, ಬೆಂಕಿ ಅಂತ ಕಮೆಂಟ್ ಮಾಡಿದ್ದಾರೆ.
ಡಾ. ಬ್ರೋ ಫೋಟೋ ಹಾಕ್ತಿದ್ದಂತೆ ಅಭಿಮಾನಿಗಳ ಬಿಗ್ ಬಾಸ್ ವಾದಾಟ ಶುರುವಾಗಿದೆ. ಡಾ. ಬ್ರೋ ಬಿಗ್ ಬಾಸ್ ಗೆ ಬರಬೇಕು ಅಂತ ಕೆಲವರು, ಬೇಡ ಅಂತ ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಗಗನ್, ಬಿಗ್ ಬಾಸ್ ಗೆ ಬಂದ್ರೆ ಅವರನ್ನು ಮತ್ತಷ್ಟು ಹತ್ತಿರದಿಂದ ನೋಡ್ಬಹುದು, ಅವರ ಸ್ವಭಾವ ಗೊತ್ತಾಗುತ್ತೆ, ಈ ಬಾರಿ ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟೆಂಟ್ ಗಗನ್ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಆದ್ರೆ ಕೆಲವರು, ಬಿಗ್ ಬಾಸ್ ಗೆ ಬರಬೇಡಿ ಬಾಸ್, ಬಿಗ್ ಬಾಸ್ ಶೋಗೆ ಬಂದ್ರೆ ನಿಮ್ಮ ಏಳ್ಗೆಗೆ ಕಷ್ಟವಾಗ್ಬಹುದು ಅಂತ ಸಲಹೆ ನೀಡಿದ್ದಾರೆ. ನೀವು ವಿಡಿಯೋ ಮಾಡ್ತಿರಿ, ನಾವು ನೋಡ್ತಿರ್ತೇವೆ ಎಂದಿದ್ದಾರೆ ನೆಟ್ಟಿಗರು.
ಮತ್ತೊಂದಿಷ್ಟು ಜನ, ಡಾ. ಬ್ರೋ ಎಲ್ಲಿಗೆ ಹೋಗಿದ್ದಾರೆ ಅನ್ನೋದನ್ನು ಗೆಸ್ ಮಾಡುವ ಪ್ರಯತ್ನ ಮಾಡಿದ್ದಾರೆ. ವಿಯಟ್ನಾಂ, ಸ್ಲೋವಾಕಿಯಾ, ಅರಬ್, ಸಿರಿಯಾ, ರಷ್ಯಾ ಹೀಗೆ ದೇಶದ ಹೆಸರನ್ನು ಹೇಳಿದ್ದಾರೆ. ಯೂಟ್ಯೂಬ್ ನಲ್ಲಿ ಗಗನ್ ವಿಡಿಯೋ ಹಾಕಿ ತುಂಬಾ ದಿನ ಕಳೆದಿದೆ. ಎರಡು ತಿಂಗಳ ಹಿಂದೆ ಗಗನ್ ಹಿಸ್ ಬುಲ್ಲ ವಿಡಿಯೋವನ್ನು ಹಂಚಿಕೊಂಡಿದ್ದರು. ಅದ್ರ ನಂತ್ರ ಡಾ. ಬ್ರೋ ಯೂಟ್ಯೂಬ್ ನಲ್ಲಿ ಯಾವುದೇ ವಿಡಿಯೋ ಪೋಸ್ಟ್ ಆಗಿಲ್ಲ. ಇದು ಅಭಿಮಾನಿಗಳನ್ನು ಸ್ವಲ್ಪ ನಿರಾಸೆಗೊಳಿಸಿದೆ. ಯಾವಾಗ ವಿಡಿಯೋ ಅಂತ, ಇನ್ಸ್ಟಾ ಪೋಸ್ಟ್ ಗೆ ರಿಯಾಕ್ಟ್ ಮಾಡಿದ್ದಾರೆ ಫ್ಯಾನ್ಸ್. ಆದಷ್ಟು ಬೇಗ ವಿಡಿಯೋ ಹಾಕಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಗಗನ್, ತಾವು ದೇಶ ಸುತ್ತಿ ಜನರಿಗೆ ಮಾಹಿತಿ ನೀಡೋದಲ್ಲದೆ ಸಾಮಾನ್ಯ ಜನರಿಗೂ ತಮ್ಮ ಜೊತೆ ದೇಶ ಸುತ್ತಲು ಸಹಾಯ ಮಾಡ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಟೀಂ ದುಬೈಗೆ ತೆರಳಲಿದೆ.