ಮಹಾರಾಷ್ಟ್ರದಲ್ಲಿ ರಣಭೀಕರ ಮಳೆ ಹಾಗೂ ಪ್ರವಾಹ NDRF ತಂಡದಿಂದ ರಕ್ಷಣಾ ಕಾರ್ಯ ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಮೋದಿ ಪ್ರಾರ್ಥಿನೆ  

ನವದೆಹಲಿ(ಜು.22): ದೇಶಾದ್ಯಂತ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ತೀರದ ಪ್ರದೇಶಗಳು ಜಲಾವೃತಗೊಂಡಿದೆ. NDRF ತಂಡದಿಂದ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜೊತೆ ದೂರವಾಣಿ ಮೂಲಕ ಮತನಾಡಿದ್ದೇನೆ. ಭಾರಿ ಮಳೆ ಮತ್ತು ಪ್ರವಾಹದ ಹಿನ್ನಲೆಯಲ್ಲಿ ಮುಳುಗಡೆಯಾಗಿರುವ, ಹಾನಿಗೊಳಗಾಗಿರುವ ಪ್ರದೇಶಗಳ ಕುರಿತು ಚರ್ಚಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಎಲ್ಲಾ ಅಗತ್ಯ ನೆರವು ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ.

Scroll to load tweet…

ಮಹಾ ಮಳೆಗೆ ಕೊಂಕಣ ರೈಲು ಮಾರ್ಗಗಳು ಜಲಾವೃತಗೊಂಡಿದೆ. ಹಲವು ರೈಲು ಮಾರ್ಗಗಳಲ್ಲಿ ಭೂಮಿ ಕುಸಿತ ಸಂಭವಿಸಿದೆ. ಇದರಿಂದ 6,000ಕ್ಕೂ ಹೆಚ್ಚು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಮುಂಬೈಗೆ ಹೊಂದಿರುವ ಪಾಲ್ಗರ್ ಹಾಗೂ ಥಾಣೆಯಲ್ಲೂ ಸತತ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.

Scroll to load tweet…

ಸಹಪುರದ ಮೋದಕ್ ಸಾಗರ ಅಣೆಕಟ್ಟು ಉಕ್ಕಿ ಹರಿಯುತ್ತಿದೆ. ಅಣೆಕಟ್ಟು ಗೇಟ್ ತೆರೆಯಲಾಗಿದೆ. ಅಣೆಕಟ್ಟು ಸನಿಹದ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಭಟಾಸ್ಸೈ, ಬದ್ಲಾಪುರ ಸೇರಿದಂತೆ ಮುಳಗಡೆಯಾಗಿರುವ ಗ್ರಾಮಗಳ ಜನರನ್ನು ಎನ್‌ಡಿಆರ್‌ಆಫ್ ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.

ಬದ್ಲಾಪುರದಲ್ಲಿನ ಆಶ್ರಮವೊಂದು ಮುಳುಗಡೆಯಾಗಿದೆ. ಇಲ್ಲಿ ಸಿಲುಕ್ಕಿದ್ದ 10 ಮಂದಿ ಹಾಗೂ 70ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾರಿ ಮಳೆಗೆ ಮರಳಗಳು ಧರೆಗುರುಳಿಸಿದೆ. ಇದರಿಂದ ವಿದ್ಯುತ್ ಸಮಸ್ಯೆ ತಲೆದೋರಿದೆ.