ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಗೆ ಪದೋನ್ನತಿ ಸಿಗುತ್ತದೆ. ಹೀಗೊಂದು ಸುದ್ದಿ ದಿಲ್ಲಿ ವಲಯದಲ್ಲಿ ತುಂಬಾ ವೇಗದಲ್ಲಿ ಓಡಾಡುತ್ತಿದೆ.
Lok Sabha Election News May 7, 2019, 1:31 PM IST
2019 ರಲ್ಲಿ ಉತ್ತರ ಪ್ರದೇಶ ಬಿಟ್ಟರೆ ಅತಿ ಹೆಚ್ಚು ಚುನಾವಣಾ ರಂಗು ಏರಿರುವುದು ಪಶ್ಚಿಮ ಬಂಗಾಳದಲ್ಲಿ. ತ್ರಿಪುರಾದ ‘ಚಲೋ ಪಲ್ಟಾಯ’ ಅಂದರೆ ‘ಬನ್ನಿ ಪರಿವರ್ತಿಸೋಣ’ ಘೋಷಣೆಯನ್ನು ದೀದಿ ರಾಜ್ಯದಲ್ಲಿ ಹಾಕಿಸುತ್ತಿರುವ ಮೋದಿ ಮತ್ತು ಅಮಿತ್ ಶಾಗೆ, ಯುಪಿಯಲ್ಲಿ ಕಮ್ಮಿ ಆಗುವ ಸೀಟು ಇಲ್ಲಿ ಬಂದರೆ ಸಾಕು ಎನ್ನುವ ಸ್ಥಿತಿಯಿದೆ.
Lok Sabha Election News May 7, 2019, 11:07 AM IST
ಮೇ 23 ರ ನಂತರ ಬಿಜೆಪಿ ರಾಜ್ಯ ಸರ್ಕಾರ ಬರುತ್ತಾ ಎಂದರೆ, ‘ನನಗೆ ಗೊತ್ತಿಲ್ಲಪ್ಪ, ನನಗೆ ಯಾರೂ ಕರೆದು ಹೇಳಿಲ್ಲ’ ಎಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಂತ್ರಿ ಆಗ್ತೀರಾ ಅಂದ್ರೆ ಅದಕ್ಕೂ ಬಾಯಿ ಬಿಟ್ಟಿಲ್ಲ.
Lok Sabha Election News Apr 30, 2019, 12:55 PM IST
ಲೋಕಸಭಾ ಚುನಾವಣೆಯ 4 ಹಂತಗಳು ಮುಗಿದ ನಂತರ ಮರಳಿ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳ ದೃಷ್ಟಿಉತ್ತರ ಪ್ರದೇಶದ ಕಡೆ ತಿರುಗಿದ್ದು, ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ; ‘ಯುಪಿಯಲ್ಲಿ ಕಳೆದ ಬಾರಿ 73 ಗೆದ್ದಿದ್ದ ಮೋದಿ ಈ ಬಾರಿ ಎಷ್ಟುಉಳಿಸಿಕೊಳ್ಳುತ್ತಾರೆ?’ ಮೋದಿಯವರ ಸೇನಾಧಿಪತಿ ಅಮಿತ್ ಶಾ ಅಂತೂ ವಾರಕ್ಕೆ ಒಮ್ಮೆ ಬಿಜೆಪಿ ಸೀಟುಗಳ ಸ್ಥಿತಿಗತಿ ಬಗ್ಗೆ ಸರ್ವೆ ಮಾಡಿಸಿಕೊಂಡು ತಂತ್ರ ಹೆಣೆಯುತ್ತಿದ್ದಾರೆ.
Lok Sabha Election News Apr 30, 2019, 11:39 AM IST
ಆಮ್ ಆದ್ಮಿ ಪಕ್ಷದ ಜೊತೆ ಲೋಕಸಭೆ ಚುನಾವಣೆಗೆ ದಿಲ್ಲಿಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆಂದು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರನ್ನು ಬೆನ್ನು ಹತ್ತಿದ್ದರೂ ಕೂಡ ಆಮ್ ಆದ್ಮಿ ಪಕ್ಷ ಏನೇನೋ ಸಬೂಬು ಹೇಳಿ ರಾಹುಲ್ ಅವರನ್ನು ಸತಾಯಿಸುತ್ತಿದೆ.
Lok Sabha Election News Apr 16, 2019, 4:18 PM IST
ಬಿಜೆಪಿಯ ಸಂಸ್ಥಾಪನಾ ದಿನದಂದು ಐದು ವರ್ಷದ ನಂತರ ಲಾಲ್ ಕೃಷ್ಣ ಅಡ್ವಾಣಿ ಬರೆದಿರುವ ಬ್ಲಾಗ್ ಖುದ್ದು ಅವರೇ ಬರೆದಿದ್ದಾ ಅಥವಾ ಬೇರೆಯವರ ಸಹಾಯದಿಂದ ಬರೆಸಿದ್ದಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಏನಿದರ ಸತ್ಯಾಸತ್ಯತೆ ಇಲ್ಲಿದೆ ನೋಡಿ.
NEWS Apr 16, 2019, 3:54 PM IST
ಡಿ ಕೆ ಶಿವಕುಮಾರ್ ಅನಗತ್ಯವಾಗಿ ಲಿಂಗಾಯತ ಧರ್ಮ ವಿಷಯ ಕೆದಕಿರುವುದು ಹೈಕಮಾಂಡ್ ನಾಯಕರಿಗೆ ‘ಬೇಡವಿತ್ತು’ ಎನಿಸಿದೆ. ಇಂಥ ವಿವಾದಗಳಿಂದ ದೂರವಿರಬೇಕು ಎಂದು ದಿಲ್ಲಿ ನಾಯಕರು ಸೂಚನೆ ಕೂಡ ಕೊಟ್ಟಿದ್ದಾರಂತೆ.
Lok Sabha Election News Apr 16, 2019, 1:19 PM IST
ಪ್ರಧಾನಿ ನರೇಂದ್ರ ಮೋದಿ ಯಾವುದನ್ನೂ ಸುಲಭವಾಗಿ ಮರೆಯುವವರಲ್ಲ. ಯಾರ್ರಿ ಮೋದಿ ಎಂದ ಉಮೇಶ್ ಕತ್ತಿಯವರಿಗೆ ಈ ಚುನಾವಣೆಯಲ್ಲಿ ಮೋದಿಯವರಿಗೆ ಉತ್ತರ ಕೊಟ್ಟಿದ್ದು ಹೀಗೆ.
Lok Sabha Election News Apr 9, 2019, 4:08 PM IST
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಚುನಾವಣೆ ನಂತರ ಸರ್ಕಾರಿ ಬಂಗಲೆಯಲ್ಲಿ ಇರುವಂತಿಲ್ಲ. ಇವರ ಮುಂದಿನ ವಾಸ್ತವ್ಯ ಎಲ್ಲಿ? ಎಂಬ ಪ್ರಶ್ನೆಗೂ ಇನ್ನೂ ಉತ್ತರ ಸಿಕ್ಕಿಲ್ಲ.
Lok Sabha Election News Apr 9, 2019, 3:48 PM IST
ಸ್ಪೀಕರ್ ಸುಮಿತ್ರಾ ಮಹಾಜನ್ ನೇರವಾಗಿ ಮೋದಿ ಮತ್ತು ಅಮಿತ್ ಶಾ ಮೇಲೆ ಕೋಪಿಸಿಕೊಂಡಿದ್ದಾರೆ. ಇಂದೋರ್ನಿಂದ ಟಿಕೆಟ್ ಕೊಡಲು ತಮ್ಮನ್ನು ಪಕ್ಷ ಸತಾಯಿಸಿದ ಕಾರಣದಿಂದ ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದ ಸ್ಪೀಕರ್, ನನಗೆ ಟಿಕೆಟ್ ಬೇಡ ಎಂದು ಹೇಳಬೇಕಾಯಿತು.
Lok Sabha Election News Apr 9, 2019, 3:15 PM IST
ನರೇಂದ್ರ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲಿ ಎಲ್ಲ ವಿಪಕ್ಷಗಳ ಪರವಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಸ್ತಾವನೆ ಇಟ್ಟಿದ್ದು, ಅಖಿಲೇಶ್ ಯಾದವ್ ಇದನ್ನು ಒಪ್ಪಿಕೊಂಡಿದ್ದಾರೆ.
Lok Sabha Election News Apr 9, 2019, 2:20 PM IST
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಟಿಕೆಟ್ ಕೊಡಿಸುವಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಪ್ರಮುಖ ಪಾತ್ರ ವಹಿಸಿದವರು. ಇವರಿಗೆ ಪತ್ರಕರ್ತರನ್ನು ಕಂಡರೆ ಅಷ್ಟಕ್ಕಷ್ಟೇ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪತ್ರಕರ್ತರನ್ನು ಜೊತೆ ಗ್ರೌಂಡ್ ರಿಪೋರ್ಟ್ ತೆಗೆದುಕೊಳ್ಳುತ್ತಿದ್ದಾರೆ.
Lok Sabha Election News Apr 9, 2019, 1:10 PM IST
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟು ಮಾತ್ರ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿವೆ. ಬಿಜೆಪಿಯವರು ಮೋದಿ ಹೆಸರನ್ನು ಇಟ್ಟುಕೊಂಡು ಮತ ಬೇಟೆ ನಡೆಸುತ್ತಿದ್ದಾರೆ. ಮತದಾರ ಪ್ರಭು ಅಭ್ಯರ್ಥಿಗಳ ಕೆಲಸ ನೋಡಿ ವೋಟ್ ಹಾಕ್ತಾರಾ? ಮೋದಿ ನಾಮಬಲಕ್ಕೆ ವೋಟ್ ಹಾಕ್ತಾರಾ? ಅನ್ನೋದು ಕುತೂಹಲದ ವಿಚಾರ.
Lok Sabha Election News Apr 9, 2019, 11:29 AM IST
ಕುಟುಂಬ ರಾಜಕಾರಣದ ಅಪವಾದದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹೊಸ ತಂತ್ರ ಹೆಣೆಯಲು ಮುಂದಾಗಿದೆ. ಏನದು ಹೊಸ ತಂತ್ರ? ಇಲ್ಲಿದೆ ನೋಡಿ.
NEWS Apr 2, 2019, 4:31 PM IST
ಅಮೇಠಿ ಜೊತೆಗೆ ದಕ್ಷಿಣದಲ್ಲೂ ಸೇಫ್ ಕ್ಷೇತ್ರ ಹುಡುಕುತ್ತಿದ್ದ ರಾಹುಲ್; ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ, ತಮಿಳುನಾಡಿನಲ್ಲಿ ನಾಗರ ಕೊಯಿಲ್ ಮತ್ತು ಕೇರಳದ ವಯನಾಡ್ ಕ್ಷೇತ್ರಗಳನ್ನು ಗುರುತಿಸಿದ್ದರು. ರಾಹುಲ್ ಬೆಂಗಳೂರು ಗ್ರಾಮಾಂತರದಿಂದ ಹಿಂದೆ ಸರಿಯಲು ಇಲ್ಲಿದೆ ಕಾರಣ.
Lok Sabha Election News Apr 2, 2019, 2:46 PM IST