ಬೆಂಗಳೂರು (ಏ. 16): ಡಿ ಕೆ ಶಿವಕುಮಾರ್‌ ಅನಗತ್ಯವಾಗಿ ಲಿಂಗಾಯತ ಧರ್ಮ ವಿಷಯ ಕೆದಕಿರುವುದು ಹೈಕಮಾಂಡ್‌ ನಾಯಕರಿಗೆ ‘ಬೇಡವಿತ್ತು’ ಎನಿಸಿದೆ. 

ಮೂಡ್ ಬಗ್ಗೆ ಸ್ವಾರಸ್ಯದ ವ್ಯಾಖ್ಯಾನ ಕೊಟ್ಟ ಸಿದ್ದರಾಮಯ್ಯ!

ಇಂಥ ವಿವಾದಗಳಿಂದ ದೂರವಿರಬೇಕು ಎಂದು ದಿಲ್ಲಿ ನಾಯಕರು ಸೂಚನೆ ಕೂಡ ಕೊಟ್ಟಿದ್ದಾರಂತೆ. ದಿಲ್ಲಿ ನಾಯಕರು ಹೇಳುವ ಪ್ರಕಾರ, ‘ಡಿ ಕೆ ಶಿವಕುಮಾರ್‌ ಮೈಸೂರು, ಬೆಂಗಳೂರು ಸೌತ್‌, ಸೆಂಟ್ರಲ್, ಚಿಕ್ಕಬಳ್ಳಾಪುರದಲ್ಲಿ ಗಟ್ಟಿಯಾಗಿ ನಿಂತು ಒಕ್ಕಲಿಗರ ವೋಟು ಕೊಡಿಸಿದ್ದರೆ ಇನ್ನೂ ದೊಡ್ಡ ನಾಯಕರಾಗುತ್ತಿದ್ದರು. ಆದರೆ ಅವರಿಗೆ ರಾಹುಲ್ ಜೀ, ಅಹ್ಮದ್‌ ಪಟೇಲ್ ಇಬ್ಬರೇ ಕರೆದು ಹೇಳಬಹುದು. ನಾವೆಲ್ಲ ಸಣ್ಣವರು.’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 

ಸಂಕಷ್ಟದಲ್ಲಿ ಪ್ರಜ್ವಲ್ ರೇವಣ್ಣ! ಮೈತ್ರಿ ಅಭ್ಯರ್ಥಿಗೆ ಅನರ್ಹತೆ ಭೀತಿ?

ಬಳ್ಳಾರಿಯಲ್ಲಿ ಮಾತನಾಡುವ ವೇಳೆ, ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.  ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಮುಂದಾಗಿದ್ದಕ್ಕೆ ಜನ ಕಪಾಲಕ್ಕೆ ಹೊಡೆದರು. ರಾಮಮಂದಿರ ಮಾಡಲು ಮುಂದಾದವರು ಇದೀಗ ಏನಾಗಿದ್ದಾರೆ?  ದೆಹಲಿಯಲ್ಲಿ ಆ ನಾಯಕರು ಇದೀಗ ರೆಸ್ಟ್ ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದರು. 

ಡಿಕೆಶಿಯವರ ಈ ಹೇಳಿಕೆ ಕಾಂಗ್ರೆಸ್ಸಿಗೆ ಭಾರೀ ಮುಜುಗರವನ್ನು ತಂದಿಟ್ಟಿತ್ತು. 

-ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾಋಣದ ಸುದ್ದಿಗಾಗಿ ’ಇಂಡಿಯಾ ಗೇಟ್’  ಕ್ಲಿಕ್ ಮಾಡಿ