ನವದೆಹಲಿ (ಏ. 16):  ಆಮ್ ಆದ್ಮಿ ಪಕ್ಷದ ಜೊತೆ ಲೋಕಸಭೆ ಚುನಾವಣೆಗೆ ದಿಲ್ಲಿಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆಂದು ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲರನ್ನು ಬೆನ್ನು ಹತ್ತಿದ್ದರೂ ಕೂಡ ಆಮ್ ಆದ್ಮಿ ಪಕ್ಷ ಏನೇನೋ ಸಬೂಬು ಹೇಳಿ ರಾಹುಲ್ ಅವರನ್ನು ಸತಾಯಿಸುತ್ತಿದೆ. 

ದಿಲ್ಲಿಯ 7 ಸೀಟ್‌ಗಳಲ್ಲಿ 4 ಆಪ್‌ಗೆ ಕೊಟ್ಟು, 3ರಲ್ಲಿ ನಿಂತುಕೊಳ್ಳಲು ಕಾಂಗ್ರೆಸ್‌ ತಯಾರಿದೆ. ಆದರೆ, ಇದಕ್ಕಾಗಿ ಹರ್ಯಾಣದ 3 ಸೀಟು ಕೂಡ ಬಿಟ್ಟುಕೊಡಬೇಕು ಎಂದು ಕೇಜ್ರಿವಾಲ್ ಷರತ್ತು ಹಾಕುತ್ತಿದ್ದಾರೆ. ಒಂದು ವೇಳೆ ದಿಲ್ಲಿಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಆದರೆ ಬಿಜೆಪಿಗೆ ಕಷ್ಟವಾಗಲಿದೆ.

ಪುತ್ರ ಪ್ರೇಮದಲ್ಲಿ ನಿವೃತ್ತಿ

ಹರ್ಯಾಣದ ದೊಡ್ಡ ನಾಯಕ ಚೌಧರಿ ಬೀರೇಂದ್ರ ಸಿಂಗ್‌ ತಮ್ಮ ಐಎಎಸ್‌ ಮಗನಿಗೆ ಟಿಕೆಟ್‌ ಕೊಡಿಸಲು ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಹಿಸಾರ್‌ನಿಂದ ಬೀರೇಂದ್ರ ಸಿಂಗ್‌ರ ಮಗನಿಗೆ ಟಿಕೆಟ್‌ ಘೋಷಿಸಿರುವ ಬಿಜೆಪಿ, ಇಂದೋರ್‌ನಲ್ಲಿ ಸುಮಿತ್ರಾ ತಾಯಿಗೆ ಮಾತ್ರ ಕ್ಯಾರೇ ಅಂದಿಲ್ಲ. ಅಂದ ಹಾಗೆ ಗೋವಾದಿಂದ ಪರ್ರಿಕರ್‌ ಪುತ್ರನಿಗೂ ಬಿಜೆಪಿ ಟಿಕೆಟ್‌ ಕೊಡಲಿದೆಯಂತೆ. ಬಿಜೆಪಿಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಜೀನ್ಸ್‌ ಮತ್ತು ಡಿಎನ್‌ಎ ವ್ಯಾಖ್ಯೆ ಬದಲಾಗುವುದೋ ಏನೋ ಗೊತ್ತಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ