ಬೆಂಗಳೂರು (ಏ. 09): 2014 ರಲ್ಲಿ ಉಮೇಶ್‌ ಕತ್ತಿ ಚಿಕ್ಕೋಡಿಯಲ್ಲಿ ‘ಯಾರೂ ಮೋದಿ ಮೋದಿ ಎಂದು ವೋಟು ಹಾಕೋದಿಲ್ಲ. ಇಲ್ಲಿ ಏನಿದ್ದರೂ ಕತ್ತಿ ಫ್ಯಾಮಿಲಿ ಹವಾ’ ಎಂದಿದ್ದರು. ಇದು ಯಾವ ಪರಿ ಮೋದಿ ಅವರಿಗೆ ಸಿಟ್ಟು ತರಿಸಿತ್ತು ಎಂದರೆ, ಮೋದಿ ಚಿಕ್ಕೋಡಿಗೆ ಭಾಷಣಕ್ಕೆ ಕೂಡ ಹೋಗಿರಲಿಲ್ಲ.

ಸುಮಿತ್ರಾ ಮಹಾಜನ್‌ಗೆ ಟಿಕೆಟ್ ಕೊಡದಿರಲು ಕಾರಣವೇನು?

ಈ ಬಾರಿ ಯಡಿಯೂರಪ್ಪ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಸಂಘ ಮತ್ತು ಅಮಿತ್‌ ಶಾ, ಕತ್ತಿ ಕುಟುಂಬಕ್ಕೆ ಟಿಕೆಟ್‌ ಸಿಗದ ಹಾಗೆ ನೋಡಿಕೊಂಡಿದ್ದಾರೆ. ಹಾಗೆಲ್ಲ ಮೋದಿ ಸುಲಭವಾಗಿ ಯಾವುದನ್ನೂ ಮರೆಯುವವರಲ್ಲ ಬಿಡಿ.

ಬಾಬಾಗಳ ಟಿಕೆಟ್‌ ರಾಜಕೀಯ

2014ರಲ್ಲಿಯೇ ಬಾಬಾ ರಾಮದೇವ್‌ ಅವರು ಮೋದಿ ಮೇಲೆ ಒತ್ತಡ ಹಾಕಿ ಬೀದರ್‌ನಿಂದ ತಮ್ಮ ಶಿಷ್ಯ ಭಗವಂತ ಖೂಬಾಗೆ ಟಿಕೆಟ್‌ ಕೊಡಿಸಿದ್ದರೆ, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ದಿಲ್ಲಿಯಿಂದ ತಮ್ಮ ಶಿಷ್ಯ ಮಹೇಶ್‌ ಗಿರಿಗೆ ಟಿಕೆಟ್‌ ಕೊಡಿಸಿದ್ದರು. ಈ ಬಾರಿ ಖೂಬಾ ಸಾಕಷ್ಟುಸ್ಥಳೀಯ ವಿರೋಧದ ನಂತರವೂ ಟಿಕೆಟ್‌ ಪಡೆದರಾದರೂ, ಮಹೇಶ್‌ ಗಿರಿಗೆ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಮೋದಿ ಸಾಹೇಬರು ಶ್ರೀಶ್ರೀಗೆ ನೇರವಾಗಿಯೇ ಹೇಳಿದ್ದಾರೆ. ಆರ್‌ಎಸ್‌ಎಸ್‌ ಮೂಲಕ ಮೋದಿ, ಶಾಗೆ ಹೇಳಿಸುವ ಶ್ರೀಶ್ರೀ ಯತ್ನ ಫಲ ಕಂಡಂತೆ ಕಾಣುತ್ತಿಲ್ಲ.

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ