ರಾಹುಲ್ ಗಾಂಧಿ ಅಮೇಥಿ ಜೊತೆ ವಯನಾಡುಗಳಿಂದಲೂ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ರಾಜಕೀಯ ಲೆಕ್ಕಾಚಾರದ ನಂತರ ಬೆಂಗಳೂರು ಗ್ರಾಮಾಂತರದಿಂದ ಹಿಂದೆ ಸರಿಯಲು ನಿರ್ಧರಿಸಿದರು. ಇದರ ಹಿಂದಿದೆ ಈ ಕಾರಣ. 

ಅಮೇಠಿ ಜೊತೆಗೆ ದಕ್ಷಿಣದಲ್ಲೂ ಸೇಫ್ ಕ್ಷೇತ್ರ ಹುಡುಕುತ್ತಿದ್ದ ರಾಹುಲ್; ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ, ತಮಿಳುನಾಡಿನಲ್ಲಿ ನಾಗರ ಕೊಯಿಲ್ ಮತ್ತು ಕೇರಳದ ವಯನಾಡ್ ಕ್ಷೇತ್ರಗಳನ್ನು ಗುರುತಿಸಿದ್ದರು. 

ಬೆಂಗಳೂರು ದಕ್ಷಿಣ: ಬೆರಳ ತುದಿಯಲ್ಲಿದೆ ನಿಮ್ಮ ವಾರ್ಡ್ ಮಾಹಿತಿ!

ಬೆಂಗಳೂರು ಗ್ರಾಮಾಂತರಕ್ಕೆ ಬಂದರೆ ಡಿ.ಕೆ ಶಿವಕುಮಾರ್ ಜೊತೆ ಗುರುತಿಸಿಕೊಂಡಂತೆ ಆಗುತ್ತದೆ ಎನ್ನುವ ಕಾರಣಕ್ಕೆ ಬೇಡ ಎಂದು ತೀರ್ಮಾನಿಸಿದರೆ, ನಾಗರ ಕೊಯಿಲ್ ಇರುವ ತಮಿಳುನಾಡಿನಲ್ಲಿ ಸಹಾಯ ಮಾಡುವ ಮಿತ್ರರ ಸರ್ಕಾರ ಇಲ್ಲ ಎಂದು ಕೊನೆಗೆ ವಯನಾಡ್‌ಅನ್ನು ಆಯ್ಕೆ ಮಾಡಲಾಗಿದೆ.

ಕುಟುಂಬ ರಾಜಕಾರಣದಲ್ಲಿ ವಿಫಲರಾದ ನಾಯಕರಿವರು!

51 ಪ್ರತಿಶತ ಮುಸ್ಲಿಮರು, ಕ್ರಿಶ್ಚಿಯನ್ ಮತದಾರರು ಇರುವ ಕ್ಷೇತ್ರದಲ್ಲಿ ಸಿಪಿಎಂ ಕೂಡ ರಾಹುಲ್‌ಗೆ ತ್ರಾಸು ಕೊಡುವ ಮನಸ್ಥಿತಿಯಲ್ಲಿ ಇಲ್ಲ. ರಾಹುಲ್ ಕ್ಷೇತ್ರ ಆಯ್ಕೆಯ ಹಿಂದೆ ಎ.ಕೆ ಆಂಟೋನಿ ಇದ್ದಾರಂತೆ. ಅಂದಹಾಗೆ ರಾಹುಲ್ ತನ್ನ ಮೊದಲ ಚುನಾವಣಾ ಸಂದರ್ಶನ ಮಲೆಯಾಳಂ ದೈನಿಕದೊಂದಿಗೆ ಶುರು ಮಾಡಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ