ನವದೆಹಲಿ (ಏ. 09):  ಸ್ಪೀಕರ್‌ ಸುಮಿತ್ರಾ ಮಹಾಜನ್‌ ನೇರವಾಗಿ ಮೋದಿ ಮತ್ತು ಅಮಿತ್‌ ಶಾ ಮೇಲೆ ಕೋಪಿಸಿಕೊಂಡಿದ್ದಾರೆ. ಇಂದೋರ್‌ನಿಂದ ಟಿಕೆಟ್‌ ಕೊಡಲು ತಮ್ಮನ್ನು ಪಕ್ಷ ಸತಾಯಿಸಿದ ಕಾರಣದಿಂದ ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದ ಸ್ಪೀಕರ್‌, ನನಗೆ ಟಿಕೆಟ್‌ ಬೇಡ ಎಂದು ಹೇಳಬೇಕಾಯಿತು. 

ಮೋದಿ ಸಾಹೇಬ್ರ ನಿದ್ದೆಗೆಡಿಸಲು ಪ್ರಿಯಾಂಕ ಹೊಸ ತಂತ್ರ?

ಇದಕ್ಕೆ ಅಮಿತ್‌ ಶಾ ಕೊಟ್ಟ ಕಾರಣ 75 ವರ್ಷದ್ದು. ಕಟ್ಟಾರಾಷ್ಟ್ರ ಸೇವಿಕಾ ಸಮಿತಿಯಿಂದ ರಾಜಕೀಯಕ್ಕೆ ಬಂದಿರುವ ಸುಮಿತ್ರಾಗೆ ವಯಸ್ಸಿನ ಕಾರಣದಿಂದ ಟಿಕೆಟ್‌ ನಿರಾಕರಿಸಿರುವ ಅಮಿತ್‌ ಶಾ, ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದಿರುವ 77 ವರ್ಷದ ಬಸವರಾಜ್‌ಗೆ ತುಮಕೂರು ಮತ್ತು 76 ವರ್ಷದ ಬಿ.ಎನ್‌ ಬಚ್ಚೇಗೌಡರಿಗೆ ಚಿಕ್ಕಬಳ್ಳಾಪುರದಿಂದ ಟಿಕೆಟ್‌ ಕೊಟ್ಟಿದ್ದಾರೆ. 

ಚುನಾವಣೆ ಗೆಲ್ಲಲು ಮೋದಿ ನಾಮಬಲವೊಂದಿದ್ದರೆ ಸಾಕೇ?

ಕಳೆದ ವರ್ಷದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸುಮಿತ್ರಾ ತಮ್ಮ ಮಗನಿಗೆ ಟಿಕೆಟ್‌ ಕೇಳಿದಾಗ, ‘ಇಲ್ಲ, ನೀವು ಲೋಕಸಭೆಗೆ ನಿಲ್ಲಬೇಕು’ ಎಂದು ಹೇಳಿ ತಪ್ಪಿಸಿದ್ದ ಬಿಜೆಪಿ ನಾಯಕರು, ಕೈಲಾಶ್‌ ವಿಜಯ ವರ್ಗೀಯ ಪುತ್ರನಿಗೆ ಟಿಕೆಟ್‌ ಕೊಟ್ಟಿದ್ದರು. ಈಗ ನೋಡಿದರೆ ಸುಮಿತ್ರಾಗೆ ಲೋಕಸಭಾ ಟಿಕೆಟ್‌ ಕೂಡ ತಪ್ಪಿಹೋಗಿದೆ. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ