ಮೊದಲೆಲ್ಲ ಬಿಡುಬೀಸಾಗಿ ಮಾತಾಡಿ ಬಿಡುತ್ತಿದ್ದ ಶೋಭಾ ಕರಂದ್ಲಾಜೆ ಈಗ ಪತ್ರಕರ್ತರ ಜೊತೆ ಕುಳಿತಾಗ ಬಹಳ ಡಿಫೆನ್ಸಿವ್‌ ಆಗಿರುತ್ತಾರೆ.

ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

ಸೋಮವಾರ ಬೆಳಿಗ್ಗೆ ಮೀನಾಕ್ಷಿ ಲೇಖಿ ಪರ ಪ್ರಚಾರಕ್ಕೆ ದಿಲ್ಲಿಗೆ ಬಂದಿದ್ದ ಶೋಭಾ, ಮೇ 23 ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗುತ್ತೀರಾ ಎಂದರೆ, ‘ಅಯ್ಯೋ ಬಿಡಿ ನಮ್ಮಲ್ಲಿ ಎಷ್ಟೋ ಸೀನಿಯರ್ಸ್‌ಗಳಿದ್ದಾರೆ. ಅನಂತ್‌ ಕುಮಾರ್ ಹೆಗಡೆ, ಪ್ರಹ್ಲಾದ್‌ ಜೋಷಿ, ಸುರೇಶ್‌ ಅಂಗಡಿ, ಡಿವಿಎಸ್‌, ಜಿಗಜಿಣಗಿ ಅವರಂತಹ ಘಟಾನುಘಟಿ ನಾಯಕರು ಇರುವಾಗ ನಾವೆಲ್ಲ ಎಲ್ಲಿ?’ ಎನ್ನುತ್ತಿದ್ದರು. 

ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?

ಹೋಗಲಿ, ಮೇ 23ರ ನಂತರ ಬಿಜೆಪಿ ರಾಜ್ಯ ಸರ್ಕಾರ ಬರುತ್ತಾ ಎಂದರೆ, ‘ನನಗೆ ಗೊತ್ತಿಲ್ಲಪ್ಪ, ನನಗೆ ಯಾರೂ ಕರೆದು ಹೇಳಿಲ್ಲ’ ಎಂದರು. ದಿಲ್ಲಿ ಪ್ರಚಾರಕ್ಕೆ ಇನ್ನೇನು ಶೋಭಾ ಹೋಗಬೇಕು ಎಂದಾಗ ಆ ಕಡೆಯಿಂದ ಯಡಿಯೂರಪ್ಪ ಫೋನ್‌ ಮಾಡಿ, ‘ಇಲ್ಲಿಗೆ ಬಂದು ಕುಂದಗೋಳ, ಚಿಂಚೋಳಿ ಓಡಾಡಿ’ ಎಂದ ಕೂಡಲೇ ವಿಮಾನ ಬುಕ್‌ ಮಾಡಿ ಬೆಂಗಳೂರಿಗೆ ಹಾರಿಬಿಟ್ಟರು.

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ