ಮಂಗಗಳು ಸತ್ತಾಗ ಅವುಗಳ ಮೃತದೇಹಗಳು ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ಸಾವನ್ನು ಮುಂಚಿತವಾಗಿ ಗ್ರಹಿಸಿ ಏಕಾಂತ ಸ್ಥಳಕ್ಕೆ ಹೋಗುವುದು, ಆಂಜನೇಯನಿಗೆ ಸಂಬಂಧಿಸಿದ ಪೌರಾಣಿಕ ನಂಬಿಕೆ, ಹಾಗೂ ಪ್ರಕೃತಿಯ ಸ್ವಯಂ-ಸ್ವಚ್ಛತಾ ವ್ಯವಸ್ಥೆ ಈ ವಿಸ್ಮಯದ ಹಿಂದಿನ ಕಾರಣಗಳಾಗಿವೆ.

ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯ ಜನನ ಮತ್ತು ಮರಣದ ಹಿಂದೆ ತನ್ನದೇ ಆದ ನಿಯಮ ಹಾಗೂ ವಿಸ್ಮಯಗಳಿವೆ. ಅದರಲ್ಲಿಯೂ ಮಂಗಗಳು ಸತ್ತಾಗ ಪ್ರಕೃತಿ ಮತ್ತು ಇತರ ಪ್ರಾಣಿಗಳು ವರ್ತಿಸುವ ರೀತಿ ಮಾನವರನ್ನು ಬೆರಗುಗೊಳಿಸುತ್ತದೆ. ಮಂಗನ ಸಾವು ಹಾಗೂ ಅದಕ್ಕೆ ಸಂಬಂಧಿಸಿದ ಪ್ರಕೃತಿಯ ಹಲವಾರು ವಿಸ್ಮಯಕಾರಿ ಸಂಗತಿಗಳು ಇಲ್ಲಿವೆ.ಕೆಲವೊಂದು ವೈಜ್ಞಾನಿಕವಾಗಿ ಸಾಬೀತಾಗಿದ್ದರೆ, ಕೆಲವೊಂದು ಧಾರ್ಮಿಕ ನಂಬಿಕೆಗಳು ಇವೆ. ವಿಜ್ಞಾನಕ್ಕೂ ನಿಲುಕದ ಸೃಷ್ಟಿಯ ರೋಚಕತೆಯೂ ಇದರಲ್ಲಿ ಇದೆ. ಅಷ್ಟಕ್ಕೂ, ತನ್ನ ಗುಂಪಿನ ಮಂಗವೊಂದು ಮೃತಪಟ್ಟರೆ, ಇತರ ಮಂಗಗಳು ಮೌನವಾಗುತ್ತವೆ. ಮೃತ ದೇಹದ ಸುತ್ತಲೂ ಕುಳಿತು ಮನುಷ್ಯರಂತೆಯೇ ದುಃಖಿಸುತ್ತವೆ. ತಾಯಿ ಮಂಗನ ಮರಿ ಸತ್ತಾಗ, ಅದು ಮರಿ ಸತ್ತಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ದಿನಗಟ್ಟಲೆ, ಕೆಲವು ಬಾರಿ ವಾರಗಳ ಕಾಲ ಆ ಮೃತ ಮರಿಯನ್ನು ತನ್ನ ಎದೆಗೇ ಅಪ್ಪಿಕೊಂಡು ಮರದಿಂದ ಮರಕ್ಕೆ ಜಿಗಿಯುತ್ತದೆ. ಪ್ರಕೃತಿಯಲ್ಲಿ ತಾಯ್ತನದ ಈ ತೀವ್ರತೆ ನಿಜಕ್ಕೂ ಒಂದು ವಿಸ್ಮಯ.

ಶವ ಕಾಣುವುದಿಲ್ಲವೇಕೆ?

ಕಾಡಿನಲ್ಲಿ ಮಂಗಗಳು ಸತ್ತಾಗ ಅವುಗಳ ಮೃತದೇಹಗಳು ನಮಗೆ ಸಾಮಾನ್ಯವಾಗಿ ಕಾಣಿಸುವುದಿಲ್ಲ. ಇದು ಪ್ರಕೃತಿಯ ಅತ್ಯಂತ ದೊಡ್ಡ ವಿಸ್ಮಯಗಳಲ್ಲಿ ಒಂದಾಗಿದೆ. ಕೋತಿಗಳು, ಸಾವಿಗೆ ಕನಿಷ್ಠ ಒಂದು ವಾರದ ಮೊದಲು ತಮ್ಮ ಸಾವಿನ ದಿನಾಂಕವನ್ನು ಗ್ರಹಿಸುತ್ತವೆ. ಅಂದಿನಿಂದ ಅವು ಸುರಕ್ಷಿತ ಸ್ಥಳವನ್ನು ಆರಿಸಿಕೊಳ್ಳುತ್ತದೆ ಮತ್ತು ಯಾವುದೇ ಆಹಾರ ಅಥವಾ ನೀರಿಲ್ಲದೆ ಸದ್ದಿಲ್ಲದೆ ಕುಳಿತುಕೊಳ್ಳುತ್ತದೆ. ಕೋತಿ ಆ ಒಂದು ವಾರವೂ ತಪಸ್ಸು ಮಾಡುತ್ತದೆ. ಯಾವುದೇ ಪವಾಡಕ್ಕಿಂತ ಹೆಚ್ಚಾಗಿ, ಅದು ಒಂದು ವಾರ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತದೆ. ಒಂದು ಕೋತಿ ಸಾಯುವ ಹಂತದಲ್ಲಿದ್ದಾಗ, ಅದು ಸದ್ದಿಲ್ಲದೆ ಮತ್ತು ಇತರ ಪ್ರಾಣಿಗಳಿಗೆ ಯಾವುದೇ ತೊಂದರೆಯಿಲ್ಲದೆ ದಟ್ಟವಾದ ಕಾಡಿನಲ್ಲಿ ಹುತ್ತದ ಬಳಿ ಮಲಗುತ್ತವೆ. ಗೆದ್ದಲು ಅದನ್ನು ತಿನ್ನಲು ಅನುವು ಮಾಡಿಕೊಡುತ್ತದೆ.

ರಾಮನಿಂದ ವರ ಕೇಳಿದ್ದ ಆಂಜನೇಯ?

ಮಂಗಗಳು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಸತ್ತರೂ, ಅವುಗಳ ಸಂಬಂಧಿಕರು ಅವುಗಳನ್ನು ಎಳೆದುಕೊಂಡು ಹೋಗಿ, ದೇಹವು ಕಣ್ಮರೆಯಾಗುವವರೆಗೂ ಹುತ್ತದ ಬಳಿ ಇಡುತ್ತಾರೆ. ಇದಕ್ಕೆ ಪೌರಾಣಿಕ ಕಥೆಯೂ ಇದೆ. ಆಂಜನೇಯನು ರಾಮನಿಂದ ಕೇಳಲ್ಪಟ್ಟ ಮತ್ತು ಪಡೆದ ವರಗಳಲ್ಲಿ ಇದೂ ಒಂದು ಎನ್ನಲಾಗಿದೆ. ಅವನು ಸಾಯುವ ಸ್ಥಿತಿಯನ್ನು ತಿಳಿದುಕೊಳ್ಳಬೇಕು ಮತ್ತು ಯಾರಿಗೂ ತೊಂದರೆಯಾಗದಂತೆ ಗೆದ್ದಲುಗಳಿಗೆ ತನ್ನ ದೇಹವನ್ನು ಆಹಾರವಾಗಿ ನೀಡಬೇಕು, ಈ ಮೂಲಕ ತನ್ನ ಅವನ ದೇಹದ ಭಾಗಗಳು ಯಾರಿಗೂ ಗೋಚರಿಸಬಾರದು ಎಂದು ವರ ಕೇಳಿದ್ದನಂತೆ. ಆಂಜನೇಯನ ಅವತಾರವೇ ಕೋತಿ ಎಂದು ನಂಬಿರುವ ಕಾರಣ, ಕೋತಿಗಳು ಅದೇ ರೀತಿ ನಡೆದುಕೊಳ್ಳುವುದು ಸೃಷ್ಟಿಯ ರೋಚಕತೆಗಳಲ್ಲಿ ಒಂದಾಗಿದೆ.

ದೇಹವೇನಾದರೂ ಉಳಿದಿದ್ದರೆ, ತಕ್ಷಣ ಕಾಡಿನಲ್ಲಿರುವ ನರಿ, ಚಿರತೆ, ಕರಡಿ, ಹೆಗ್ಗಣ, ಮತ್ತು ಹದ್ದುಗಳಂತಹ ಪ್ರಾಣಿ-ಪಕ್ಷಿಗಳು ಅವುಗಳನ್ನು ತಕ್ಷಣವೇ ಆಹಾರವಾಗಿಸಿಕೊಳ್ಳುತ್ತವೆ. ಸತ್ತ ಕೆಲವೇ ಗಂಟೆಗಳಲ್ಲಿ ನೂರಾರು ಕೀಟಗಳು, ನೊಣಗಳು ಮತ್ತು ಬ್ಯಾಕ್ಟೀರಿಯಾಗಳು ದೇಹವನ್ನು ಕೊಳೆಸಿ ಮಣ್ಣಾಗಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತವೆ. ಮಾಂಸ ಕಳೆದ ನಂತರ ಉಳಿಯುವ ಮೂಳೆಗಳನ್ನು ಸಹ ಕಾಡಿನ ಕೆಲವು ಪ್ರಾಣಿಗಳು (ಉದಾಹರಣೆಗೆ ಮುಳ್ಳುಹಂದಿ) ಜಗಿದು ತಿನ್ನುತ್ತವೆ. ಇದರಿಂದ ಅವುಗಳ ಕ್ಯಾಲ್ಸಿಯಂ ಅವಶ್ಯಕತೆ ಪೂರೈಸುತ್ತದೆ ಎನ್ನಲಾಗಿದೆ. ಪ್ರಕೃತಿಯು ತನ್ನದೇ ಆದ ಸ್ವಯಂ-ಸ್ವಚ್ಛತಾ ವ್ಯವಸ್ಥೆಯನ್ನು (Natural Waste Management) ಹೊಂದಿದೆ. ಈ ವ್ಯವಸ್ಥೆಯಿಂದಾಗಿ ಯಾವುದೇ ಪ್ರಾಣಿಯ ಮೃತದೇಹವು ಕಾಡಿನಲ್ಲಿ ಹೆಚ್ಚು ದಿನ ಉಳಿಯದೆ ಪರಿಸರದಲ್ಲಿ ಲೀನವಾಗಿಬಿಡುತ್ತದೆ.