ದೇವಸ್ಥಾನದಲ್ಲಿ ಗಂಟೆ ಬಾರಿಸುವ ಹಿಂದಿನ ಉದ್ದೇಶ ಏನು ಅನ್ನೋದನ್ನ ಬಲ್ಲಿರೇನು? ಆಧ್ಯಾತ್ಮಿಕ, ವೈಜ್ಞಾನಿಕ ಕಾರಣಗಳ ಜೊತೆಗೆ ಯೋಗ ಶಾಸ್ತ್ರದ ಪ್ರಕಾರ ಏನು ರೀಸನ್ ಗೊತ್ತಾ? ಅಸಲಿ ಕಾರಣ ರಿವೀಲ್
ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದ್ವಾರಬಾಗಿಲು ಪ್ರವೇಶ ಮಾಡಿ ಒಳಗೆ ಹೋಗುತ್ತಿದ್ದಂತೆಯೇ, ನಮ್ಮ ಕೈ ಮೇಲಿನ ಗಂಟೆಯತ್ತ ತಾನಾಗಿಯೇ ಹೋಗಿಬಿಡುತ್ತೆ. ಕೆಲವರಿಗೆ ಗಂಟೆ ಬಾರಿಸದೇ ದೇವಸ್ಥಾನಕ್ಕೆ ಹೋಗಿ ಬಂದರೆ ಅದೇನೋ ಕಸಿವಿಸಿ ಅನುಭವ. ಇದು ಅದೆಷ್ಟೋ ಮಂದಿಗೆ ಬಾಲ್ಯದಿಂದಲೇ ಅಭ್ಯಾಸವಾಗಿಬಿಟ್ಟಿದೆ.. ದೇವಸ್ಥಾನದಲ್ಲಿ ಗಂಟೆ ಬಾರಿಸುವುದರ ಹಿಂದಿರುವ ರಹಸ್ಯಗಳು ಏನು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ..
ಆಧ್ಯಾತ್ಮಿಕ ಕಾರಣಗಳು
ಆಗಮ ಶಾಸ್ತ್ರದ ಪ್ರಕಾರ.. ದೇವಸ್ಥಾನ ಏಂದರೆ ದೇವರ ಮನೆ. ನಾವು ಬೇರೆಯವರ ಮನೆಗೆ ಹೋದಾಗ ಡೋರ್ ಬೆಲ್ ಬಾರಿಸುವಂತೆ.. ದೇವರ ಸನ್ನಿಧಾನಕ್ಕೆ ಬಂದಿದ್ದೇವೆ ಎಂದು ತಿಳಿಸಲು ಗಂಟೆ ಬಾರಿಸಲಾಗುತ್ತದೆ.. ಗಂಟೆಯಿಂದ ಹೊರಹೊಮ್ಮುವ ಶಬ್ದವು ಸೃಷ್ಟಿಯ ಮೂಲ ನಾದವಾದ ಓಂ (ಪ್ರಣವ ನಾದ) ಶಬ್ದಕ್ಕೆ ಸಮಾನ. ಈ ನಾದಕ್ಕೆ ದೇವರು ಪ್ರಸನ್ನನಾಗಿ ಭಕ್ತರ ಪ್ರಾರ್ಥನೆ ಆಲಿಸುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ.
ಇನ್ನು ಸ್ಕಂದ ಪುರಾಣದ ಪ್ರಕಾರ.. ಯಾರು ಗಂಟೆ ಬಾರಿಸಿ ದೇವರ ಪೂಜೆ ಮಾಡುತ್ತಾರೋ ಅಂಥವ್ರಿಗೆ ನೂರು ಅಶ್ವಮೇಧ ಯಾಗಗಳನ್ನು ಮಾಡಿದಷ್ಟು ಪುಣ್ಯ ಸಿಗುವ ನಂಬಿಕೆ ಇದೆ. ಜೊತೆಗೆ ಗಂಟೆಯ ಪವಿತ್ರ ಶಬ್ದವು ದೇವಸ್ಥಾನದ ಆವರಣದಲ್ಲಿರುವ ದುಷ್ಟ ಶಕ್ತಿಗಳು, ಭೂತ-ಪ್ರೇತಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ ಎನ್ನಲಾಗುತ್ತದೆ.. ಆಧ್ಯಾತ್ಮದ ಪ್ರಕಾರ ಮತ್ತು ನೆನಪಿಡಲೇಬೇಕಾದ ಸಂಗತಿ ಏನೆಂದರೆ ಗಂಟೆಯನ್ನು ದೇವಸ್ಥಾನದ ಒಳಗೆ ಹೋಗುವಾಗ ಮಾತ್ರ ಬಾರಿಸಬೇಕು.. ದರ್ಶನ ಮುಗಿಸಿ ಹೊರುವಾಗ ಎಂದಿಗೂ ಬಾರಿಸಬಾರದು.
ವೈಜ್ಞಾನಿಕ ಕಾರಣಗಳು
- ದೇವಸ್ಥಾನದ ಗಂಟೆಯ ನಾದ ಸುಮಾರು 1100 ರಿಂದ 1200 ಹರ್ಟ್ಜ್
- ಇದರ ಶಬ್ದದ ಕಂಪನ ಕನಿಷ್ಠ 7 ಸೆಕೆಂಡುಗಳ ಕಾಲ ಉಳಿಯುತ್ತದೆ
- ಕಿವಿಗೆ ಬಿದ್ದ ತಕ್ಷಣ ನಮ್ಮ ಎಡ ಮತ್ತು ಬಲ ಮೆದುಳುಗಳು ಒಟ್ಟಿಗೆ ಕೆಲಸ
- ಕಚೇರಿಯ ಟೆನ್ಷನ್, ಮನೆಯ ಚಿಂತೆಗಳೆಲ್ಲಾ ಒಂದೇ ಸೆಕೆಂಡಿನಲ್ಲಿ ಮಾಯ
- ದೇವಸ್ಥಾನದ ಗಂಟೆಯನ್ನು ಕೇವಲ ಕಬ್ಬಿಣದಿಂದ ಮಾಡುವುದಿಲ್ಲ
- ತಾಮ್ರ, ಸತು, ಕಬ್ಬಿಣ, ನಿಕಲ್ ಮತ್ತು ಕ್ರೋಮಿಯಂನಂತಹ ಪಂಚಲೋಹ
- ಗಂಟೆ ಬಾರಿಸಿದಾಗ ಉಂಟಾಗುವ ಸೂಕ್ಷ್ಮ ತರಂಗಗಳು ಗಾಳಿಯಲ್ಲಿ ಪ್ರವೇಶ
- ಹಾನಿಕಾರಕ ಬ್ಯಾಕ್ಟೀರಿಯಾ, ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುತ್ತವೆ
ಯೋಗ ಶಾಸ್ತ್ರದ ಪ್ರಕಾರ.. ಗಂಟೆಯ ಆಳವಾದ ಕಂಪನ ದೇಹದಲ್ಲಿರುವ ಮೂಲಾಧಾರದಿಂದ ಸಹಸ್ರಾರದವರೆಗಿನ 7 ಚಕ್ರಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ..
ಗಂಟೆ ಬಾರಿಸುವ ವಿಧಾನ
ಬಹಳಷ್ಟು ಜನ ಗಂಟೆಯನ್ನು ಸುಮ್ಮನೆ ಮುಟ್ಟಿ ಬರುತ್ತಾರೆ, ಇದು ಸರಿಯಲ್ಲ. ನಂಬಿಕೆ ಪ್ರಕಾರ ಗಂಟೆಯನ್ನು ಒಮ್ಮೆ ಸ್ಪಷ್ಟವಾಗಿ ಬಾರಿಸಬೇಕು. ಅದರ ನಾದ ಕನಿಷ್ಠ 7 ಸೆಕೆಂಡುಗಳ ಕಾಲ ಮೊಳಗಬೇಕು. ಎರಡನೇಯದಾಗಿ ಎರಡು ಕೈಗಳಿಂದ ಗಂಟೆಯನ್ನು ಬಾರಿಸಬಾರದು. ಒಂದು ಕೈಯಿಂದ ಮಾತ್ರ ಗಂಟೆ ಬಾರಿಸಬೇಕು. ಇನ್ನೊಂದು ಕೈಯಿಂದ ನಮಸ್ಕಾರ ಮಾಡಬೇಕು ಎಂದು ಹೇಳಲಾಗುತ್ತದೆ. ಹಾಗೆಯೇ ಗಂಟೆ ಬಾರಿಸುವಾಗ ಕಣ್ಣುಗಳನ್ನು ಮುಚ್ಚಿ, ನಿಮ್ಮ ಇಷ್ಟದೈವವನ್ನು ನೆನೆದರೆ ಬೇಗ ಇಷ್ಟಾರ್ಥ ಸಿದ್ಧಿಯಾಗಲಿದೆ ಎಂಬ ನಂಬಿಕೆ ಇದೆ.


