1000 ಮಂದಿಯಲ್ಲಿ ಅವರವರ ಒಳ ಉಡುಪು ಹೂಳಲು ಹೇಳಿದ್ದಾರೆ. ವಿಜ್ಞಾನಿಗಳ ತಂಡ ಹೇಳಿದಂತೆ ಭೂಮಿಯಲ್ಲಿ ಹೂತು ಹಾಕಿದ್ದಾರೆ. ಎರಡು ತಿಂಗಳ ನಂತರ ಮಣ್ಣಿನಡಿ ಹೂತ ಒಳ ಉಡುಪುಗಳನ್ನು ತೆಗೆದಿದ್ದಾರೆ.

ಸ್ವಿಟ್ಜರ್‌ಲೆಂಡ್ (ಸೆ.01) ವಿಜ್ಞಾನಿಗಳ ತಂಡ ಸಂಶೋಧನೆಯ ನಡುವೆ ಚರ್ಚಿಸಿ ಮಹತ್ವದ ನಿರ್ಧಾರ ಘೋಷಿಸಿತ್ತು. ಕನಿಷ್ಠ 1000 ಒಳ ಉಡುಪುಗಳನ್ನು ಹೂಳುವುದು ಅನಿವಾರ್ಯ ಎಂದಿತ್ತು. ಇದರಿಂದೆ ಹಲವರಲ್ಲಿ ಮನವಿ ಮಾಡಿತ್ತು. ಇದರಂತೆ 1000 ಜನರು ಒಳ ಉಡುಪುಗಳನ್ನು ಮಣ್ಣಿನಡಿ ಹೂತಿದ್ದಾರೆ. ಎರಡು ತಿಂಗಳ ಬಳಿಕ ತೆಗೆಯಲು ಸೂಚಿಸಿದ್ದಾರೆ. ಬಳಿಕ ಅವುಗಳು ಪೋಟೋ ಕಳುಹಿಸಿದ್ದಾರೆ. ವಿಜ್ಞಾನಿಗಳ ತಂಡ ಮತ್ತೆ ಅಧ್ಯಯನ ನಡೆಸಿ ಮಹತ್ವದ ವರದಿ ಬಹಿರಂಗಪಡಿಸಿದೆ.

ಏನಿದು ಒಳ ಉಡುಪು ಸಂಶೋಧನೆ

ಸ್ವಿಟ್ಜರ್‌ಲ್ಯಾಂಡ್‌ನ ವಿಜ್ಞಾನಿಗಳ ತಂಡ ಈ ಪ್ರಯೋಗ ಹಾಗೂ ಸಂಶೋಧನೆ ಮಾಡಿದೆ. ಈ ಪ್ರಯೋಗದ ಮುಖ್ಯ ಉದ್ದೇಶ ಮಣ್ಣಿನ ಆರೋಗ್ಯ ಪರೀಕ್ಷಿಸುವುದು. ಜೈವಿಕ ವೈವಿದ್ಯತೆಯಲ್ಲಿ ಎದುರಾಗಿರುವ ಆತಂಕಕ್ಕೆ ಕಾರಣ ಹಾಗೂ ಜನರಿಗೆ ಅರ್ಥವಾಗುವಂತೆ ತಿಳಿ ಹೇಳಲು ಈ ಪ್ರಯೋಗ ನಡೆಸಲಾಗಿತ್ತು. ಜ್ಯೂರಿಚ್ ವಿಶ್ವವಿದ್ಯಾಲಯ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕೃಷಿ ಸಂಶೋಧನಾ ಕೇಂದ್ರ ಅಗ್ರೋಸ್ಕೋಪ್‌ನ ಸಂಶೋಧಕರು ಪ್ರೂಫ್ ಬೈ ಅಂಡರ್‌ಪ್ಯಾಂಟ್ಸ್ ಯೋಜನೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಸ್ವಿಟ್ಜರ್‌ಲೆಂಡ್‌ನ 1000 ಸ್ಥಳಗಳಲ್ಲಿ 2000ಕ್ಕೂ ಹೆಚ್ಚು ಒಳ ಉಡುಪುಗಳು, 12000 ಟೀ ಚೀಲಗಳನ್ನು ಹೂತಿದ್ದಾರೆ. ಎರಡು ತಿಂಗಳ ಬಳಿಕ ಅವುಗಳನ್ನು ತೆಗೆದು ಫೋಟೋ ಹಾಗೂ ಮಣ್ಣಿನ ಜೊತೆ ವಿಜ್ಞಾನಿಗಳಿಗೆ ಕಳುಹಿಸಿದ್ದಾರೆ. ವಿಜ್ಞಾನಿಗಳ ಈ ಪ್ರಯೋಗದ ಮಾದರಿಯನ್ನು ಅಧ್ಯಯನ ಮಾಡಿದ್ದಾರೆ. ಈ ವೇಳೆ ಕೆಲ ಒಳ ಉಡುಪುಗಳು ಭೂಮಿಯಲ್ಲಿ ಕರಗದೆ ಹಾಗೇ ಉಳಿದಿತ್ತು. ಮತ್ತೆ ಕೆಲವು ಅರ್ಧದಷ್ಟು ಕರಗಿತ್ತು. ಭೂಮಿಯಡಿಯಲ್ಲಿ ಎಷ್ಟು ಜೈವಿಕ ಚಟುವಟಿಕೆ ನಡೆಯುತ್ತಿದೆ ಎಂಬುದರ ಸರಳ ಸೂಚಕ ಪತ್ತೆ ಹಚ್ಚಲಾಗಿತ್ತು. ಮಣ್ಣಿನ ಜೀವಿಗಳು ಹೆಚ್ಚು ಸಕ್ರಿಯವಾಗಿದ್ದಾಗ, ಅವು ಹತ್ತಿಯನ್ನು ಹೆಚ್ಚು ವೇಗವಾಗಿ ಕರಗಿಸುತ್ತಿತ್ತು. ಭೂಮಿಯಲ್ಲಿ ಸೇರುತ್ತಿರುವ ಪ್ಲಾಸ್ಟಿಕ್, ಬಟ್ಟೆ ಸೇರಿದಂತೆ ಹಲವು ವಸ್ತುಗಳಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಕೃಷಿ ಸೇರಿದಂತೆ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು.

ಮಣ್ಣು ಜೀವ ಕಳೆದುಕೊಳ್ಳುತ್ತಿದೆ

ಮಣ್ಣು ಜೀವ ಕಳೆದುಕೊಳ್ಳುತ್ತಿದೆ. ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಮಣ್ಣು ನಿರ್ಜೀವ ವಸ್ತುವಾಗಲಿದೆ. ಇದರಿಂದ ಭೂಮಿ ಮೇಲಿನ ಎಲ್ಲವೂ ನಾಶವಾಗುವ ಸಾಧ್ಯತೆ ಇದೆ. ಇದು ನಿಧಾನವಾಗಿ ಆಗುತ್ತಿದೆ ಅನ್ನೋದು ವಿಜ್ಞಾನಿಗಳ ವಾದ