ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದೀಪಿಕಾರನ್ನು ಭೇಟಿಯಾಗಲು ಇಂದ್ರಜಿತ್ ಲಂಕೇಶ್ ಮುಂಬೈಗೆ ಹೋದರು. ಆದರೆ ಆ ಭೇಟಿ ಆಗಿದ್ದು ಲಿಫ್ಟ್‌ನಲ್ಲಿ. ಅಲ್ಲಿ ನಡೆದ ಕೆಲವೇ ನಿಮಿಷಗಳ ಸಂಭಾಷಣೆ ದೀಪಿಕಾ ಬದುಕಿನ ದಿಕ್ಕನ್ನು ಬದಲಿಸಿತು ಎಂದರೆ ನಂಬಲೇಬೇಕು. ಹಾಗಿದ್ದರೆ ನಡೆದಿದ್ದು ಏನು?

ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ಕನ್ನಡದ 'ಐಶ್ವರ್ಯ' (Aishwarya) ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ (Deepika Padukone), ಬಳಿಕ ಶಾರುಖ್ ಖಾನ್ ನಾಯಕತ್ವದ 'ಓಂ ಶಾಂತಿ ಓಂ' ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಅವರು ಹಿಂತಿರುಗಿ ನೋಡಲೇ ಇಲ್ಲ. ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ದೀಪಿಕಾ, ಹಾಲಿವುಡ್‌ನಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಇದೀಗ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಅವರನ್ನು ತಾವು ಆಯ್ಕೆ ಮಾಡಿಕೊಂಡ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಅದೀಗ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದ್ರಜಿತ್ ಲಂಕೇಶ್ ಹೇಳಿದ್ದೇನೆ?

ಹೌದು, ನಟಿ ದೀಪಿಕಾ ಪಡುಕೋಣೆ ದೊಡ್ಡ ಯಶಸ್ಸಿನ ಹಿಂದೆ ಒಂದು ಕುತೂಹಲಕರ ಆರಂಭದ ಕಥೆಯಿದೆ ಎಂಬುದು ಹಲವರಿಗೆ ತಿಳಿದಿಲ್ಲ. 2006ರಲ್ಲಿ ತೆರೆಕಂಡ ಕನ್ನಡದ 'ಐಶ್ವರ್ಯ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಬಂದರು. ಈ ಚಿತ್ರದ ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಆ ಸಮಯದಲ್ಲಿ ಹೊಸ ಮುಖವನ್ನು ಹುಡುಕುತ್ತಿದ್ದರು. ಜನಪ್ರಿಯ ನಟಿಯನ್ನು ಆಯ್ಕೆ ಮಾಡುವ ಬದಲು, ಹೊಸ ಪ್ರತಿಭೆಗೆ ಅವಕಾಶ ನೀಡಬೇಕೆಂಬುದು ಅವರ ಉದ್ದೇಶವಾಗಿತ್ತು.

ಈ ವೇಳೆ ಕೆಲವರು ಇಂದ್ರಜಿತ್ ಅವರಿಗೆ ದೀಪಿಕಾ ಪಡುಕೋಣೆ ಹೆಸರನ್ನು ಸೂಚಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದೀಪಿಕಾರನ್ನು ಭೇಟಿಯಾಗಲು ಇಂದ್ರಜಿತ್ ಲಂಕೇಶ್ ಮುಂಬೈಗೆ ಹೋದರು. ಆದರೆ ಆ ಭೇಟಿ ಆಗಿದ್ದು ಲಿಫ್ಟ್‌ನಲ್ಲಿ. ಅಲ್ಲಿ ನಡೆದ ಕೆಲವೇ ನಿಮಿಷಗಳ ಸಂಭಾಷಣೆ ದೀಪಿಕಾ ಬದುಕಿನ ದಿಕ್ಕನ್ನು ಬದಲಿಸಿತು ಎಂದರೆ ನಂಬಲೇಬೇಕು.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ 'ಲಿಫ್ಟ್‌ನಲ್ಲಿ ದೀಪಿಕಾ ಅವರನ್ನು ಭೇಟಿಯಾದಾಗ ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಹೇಳಲು ನನಗೆ ಹೆಚ್ಚು ಸಮಯವೇ ಇರಲಿಲ್ಲ. ಕೇವಲ ಎರಡೇ ಎರಡು ಸಾಲುಗಳಲ್ಲಿ ಚಿತ್ರದ ಮುಖ್ಯ ಅಂಶವನ್ನು ವಿವರಿಸಿದೆ . ನಾನು ಹೇಳಿದ ಕಥೆಯನ್ನು ಕೇಳಿದ ತಕ್ಷಣ ದೀಪಿಕಾ ಹೆಚ್ಚು ಸಮಯ ತೆಗೆದುಕೊಳ್ಳದೇ ನನ್ನ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು' ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

ಜೊತೆಗೆ, ಇನ್ನೂ ಒಂದಷ್ಟು ರಹಸ್ಯ ಸಂಗತಿಗಳನ್ನು 'ಐಶ್ವರ್ಯ' ನಿರ್ದೇಶಕ ಇಂದ್ರಜಿತ್ ಲಂಕೇಶ್ ಶೇರ್ ಮಾಡಿಕೊಂಡಿದ್ದಾರೆ. 'ನನಗೆ ದೀಪಿಕಾ ಪಡುಕೋಣೆಯವರನ್ನು ಮೊದಲ ಬಾರಿ ನೋಡಿದ ಕ್ಷಣದಲ್ಲೇ ಮುಂದೆ ಅವರು ದೊಡ್ಡ ತಾರೆಯಾಗುತ್ತಾರೆ ಎಂದು ಅನ್ನಿಸಿತು. ಅದನ್ನು ನಾನು ಅವರಿಗೇ ಹೇಳಿದೆ ಕೂಡ. 'ಮುಂದೊಂದು ದಿನ ನೀವು ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತೀರಿ. ಬಾಲಿವುಡ್ ಆಳುತ್ತೀರಿ, ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತೀರಿ' ಎಂದು ನಾನು ಹೇಳಿದ್ದೆ ಎಂದು ಇಂದ್ರಜಿತ್ ಇತ್ತೀಚೆಗೆ ನೆನಪಿಸಿಕಕೊಂಡು ಹೇಳಿದ್ದಾರೆ.

ಒಟ್ಟಿನಲ್ಲಿ, ನಟಿ ದೀಪಿಕಾ ಪಡುಕೋಣೆ ಇಂದಿಗೂ ಕೂಡ ಸ್ಟಾರ್ ನಟಿಯಾಗಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಮದುವೆಯಾಗಿ ಮಗುವಾದ ಮೇಲೂ ತಮ್ಮ ಕ್ರೇಜ್ ಹಾಗೂ ಅಭಿಮಾನಿಗಳ ಮನದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಕೆಲಸದ ಅವಧಿಯನ್ನು 8 ತಾಸಿಗೆ ಸೀಮಿತ ಮಾಡಿಕೊಂಡಿದ್ದಾರೆ. ಅದು ದೊಡ್ಡ ವಿವಾದವನ್ನು ಸೃಷ್ಟಿಸಿ ಪರ-ವಿರೋಧ ಚರ್ಚೆ ಹುಟ್ಟುಹಾಕಿದ್ದು ಬಹುತೇಕ ಎಲ್ಲರಿಗೂ ಗೊತ್ತಿದೆ.