ದೀಪಿಕಾ ಪಡುಕೋಣೆ ಅವರ ಕ್ರೇಜ್ ಬಾಲಿವುಡ್‌ನಲ್ಲಿ ಕಡಿಮೆಯಾಗಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರಿಗೆ ಈ ಸುದ್ದಿ ಒಂದು ಶಾಕ್ ನೀಡಲಿದೆ. ‘ರಾಕಾ’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 'ಇಷ್ಟು' ಕೋಟಿ ರೂಪಾಯಿ! ಹೀಗಂತ ಸುದ್ದಿ ಸುತ್ತುತ್ತಿದೆ!
ದೀಪಿಕಾ ಪಡುಕೋಣೆ ಸಂಭಾವನೆ ಕೇಳಿದ್ರೆ ತಲೆ ಸುತ್ತೋದು ಗ್ಯಾರಂಟಿ!
ಸದ್ಯ ಭಾರತೀಯ ಚಿತ್ರರಂಗದಲ್ಲಿ ಎಲ್ಲಿ ಕೇಳಿದ್ರೂ ಒಂದೇ ಹೆಸರು, ಅದುವೇ ‘ರಾಕಾ’ (Raaka). ಅತ್ತ ‘ಪುಷ್ಪ 2’ ಹವಾ ಜೋರಾಗಿರುವಾಗಲೇ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಮಾಸ್ ನಿರ್ದೇಶಕ ಅಟ್ಲೀ ಕೈಜೋಡಿಸಿರುವ ಈ ಪ್ಯಾನ್ ವರ್ಲ್ಡ್ ಸಿನಿಮಾ ಸಿನಿರಂಗದ ನಿದ್ದೆಗೆಡಿಸಿದೆ. ಅಲ್ಲು ಅರ್ಜುನ್ ಹುಟ್ಟಹಬ್ಬದಂದು ಬಿಡುಗಡೆಯಾದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ, ಈ ಸಿನಿಮಾ ಈಗ ಸುದ್ದಿಯಾಗುತ್ತಿರುವುದು ಕೇವಲ ಅಲ್ಲು ಅರ್ಜುನ್ ಅವರಿಂದ ಮಾತ್ರವಲ್ಲ, ಚಿತ್ರದ ನಾಯಕಿ ದೀಪಿಕಾ ಪಡುಕೋಣೆ (Deepika Padukone) ಅವರ ‘ದುಬಾರಿ’ ಮ್ಯಾಜಿಕ್‌ನಿಂದ!
ಬಾಲಿವುಡ್ ಕ್ವೀನ್‌ಗೆ ಸಿಕ್ಕಿತು ‘ದಾಖಲೆ’ ಸಂಭಾವನೆ!
ದೀಪಿಕಾ ಪಡುಕೋಣೆ ಅವರ ಕ್ರೇಜ್ ಬಾಲಿವುಡ್‌ನಲ್ಲಿ ಕಡಿಮೆಯಾಗಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರಿಗೆ ಈ ಸುದ್ದಿ ಒಂದು ಶಾಕ್ ನೀಡಲಿದೆ. ‘ರಾಕಾ’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 25 ಕೋಟಿ ರೂಪಾಯಿ! ಹೌದು, ಸದ್ಯ ಭಾರತೀಯ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಟಿಯರ ಪೈಕಿ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ 30 ಕೋಟಿ ಪಡೆಯುತ್ತಾರೆ ಎಂಬ ಮಾತುಗಳಿದ್ದರೂ, ಅವರು ಈಗ ಗ್ಲೋಬಲ್ ಸ್ಟಾರ್ ಆಗಿ ವಿದೇಶಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ, ಇಂಡಿಯನ್ ಸಿನಿಮಾ ಮಾರ್ಕೆಟ್‌ನಲ್ಲಿ ದೀಪಿಕಾ ಅವರೇ ಈಗ ‘ಕಾಸ್ಟ್ಲಿ’ ನಾಯಕಿ.
8 ಗಂಟೆ ಕೆಲಸದ ‘ಕಂಡಿಷನ್’ ನಡುವೆಯೂ ಅಟ್ಲೀಗೆ ಇವರೇ ಬೇಕು!
ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ನಟನೆಯ ‘ಸ್ಪಿರಿಟ್’ ಮತ್ತು ‘ಕಲ್ಕಿ 2’ ಚಿತ್ರಗಳಿಂದ ಹೊರಬಂದಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಇದಕ್ಕೆ ಕಾರಣ ಅವರ ಕೆಲವು ಕಠಿಣ ನಿಯಮಗಳು. ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಿಯಾಗಿರುವ ದೀಪಿಕಾ, ಮಗುವಿನ ಆರೈಕೆಗಾಗಿ ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಪಟ್ಟು ಹಿಡಿದಿದ್ದಾರಂತೆ. ಜೊತೆಗೆ ಸಂಭಾವನೆ ವಿಷಯದಲ್ಲೂ ಯಾವುದೇ ರಾಜಿ ಮಾಡಿಕೊಳ್ಳದ ಕಾರಣ ಕೆಲವು ನಿರ್ಮಾಣ ಸಂಸ್ಥೆಗಳು ಹಿಂದೆ ಸರಿದಿದ್ದವು ಎನ್ನಲಾಗಿದೆ. ಆದರೆ, ನಿರ್ದೇಶಕ ಅಟ್ಲೀ ಮಾತ್ರ ದೀಪಿಕಾ ಅವರನ್ನೇ ತಮ್ಮ ಸಿನಿಮಾದ ‘ಲಕ್ಕಿ ಚಾರ್ಮ್’ ಎಂದು ಕರೆದಿದ್ದಾರೆ. 800 ಕೋಟಿ ರೂಪಾಯಿ ಬಜೆಟ್‌ನ ಈ ಬೃಹತ್ ಸಿನಿಮಾಗೆ ದೀಪಿಕಾ ಅವರ ಗ್ಲಾಮರ್ ಮತ್ತು ನಟನೆ ಅತ್ಯಗತ್ಯ ಎಂಬುದು ಅಟ್ಲೀ ಪ್ಲಾನ್.
ಏನಿದು ‘ರಾಕಾ’ ಸಿನಿಮಾದ ಸ್ಪೆಷಾಲಿಟಿ?
ಸನ್ ಪಿಕ್ಚರ್ಸ್ ಲಾಂಛನದಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ‘ರಾಕಾ’ ಒಂದು ಹೈ-ವೋಲ್ಟೇಜ್ ಸೈನ್ಸ್ ಫಿಕ್ಷನ್ ಡ್ರಾಮಾ. ಇದರಲ್ಲಿ ಅಲ್ಲು ಅರ್ಜುನ್ ಹಿಂದೆಂದೂ ನೋಡಿರದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಟ್ಲೀ ಅವರ ಮಾಸ್ ಮೇಕಿಂಗ್ ಮತ್ತು ಅಲ್ಲು ಅರ್ಜುನ್ ಅವರ ಸ್ಟೈಲಿಶ್ ಆಕ್ಷನ್ ಜೊತೆಗೆ ದೀಪಿಕಾ ಅವರ ಪವರ್‌ಫುಲ್ ಪರ್ಫಾರ್ಮೆನ್ಸ್ ಸೇರಿದರೆ ಚಿತ್ರಮಂದಿರಗಳಲ್ಲಿ ಹಬ್ಬ ಗ್ಯಾರಂಟಿ.
ಒಟ್ಟಿನಲ್ಲಿ, ದೀಪಿಕಾ ಪಡುಕೋಣೆ ತಮ್ಮ ಸಂಭಾವನೆ ಮತ್ತು ಬೇಡಿಕೆಯ ಮೂಲಕ ತಾವು ಇಂದಿಗೂ ನಂಬರ್ ಒನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಅವರ ಈ ‘ಡೆಡ್ಲಿ ಕಾಂಬಿನೇಷನ್’ ಬೆಳ್ಳಿಪರದೆಯ ಮೇಲೆ ಯಾವ ರೀತಿ ಕಮಾಲ್ ಮಾಡಲಿದೆ ಎಂದು ಕಾದು ನೋಡಬೇಕಿದೆ.


