ಕನ್ನಡ ಚಿತ್ರರಂಗದ ಈ ಸ್ಟಾರ್ ನಟರು ಸ್ತ್ರೀ ಪಾತ್ರವನ್ನು ಮಾಡುವ ಮೂಲಕವೂ ಜನಪ್ರಿಯತೆ ಪಡೆದಿದ್ದರು. ಯಾವ ನಟರು, ಯಾವ ಸಿನಿಮಾದಲ್ಲಿ ಸ್ತ್ರೀ ಪಾತ್ರ ಮಾಡಿದ್ದರು ನೋಡೋಣ.
ಬಿ.ಎಸ್ ರಂಗ ನಿರ್ದೇಶನದ ಚಂದ್ರಹಾಸ ಸಿನಿಮಾದಲ್ಲಿ ಡಾ. ರಾಜಕುಮಾರ್ ಅವರು ಸ್ತ್ರೀ ಪಾತ್ರದಲ್ಲಿ ನೃತ್ಯ ಶಿಕ್ಷಕಿಯಾಗಿ ನಟಿಸುವ ಮೂಲಕ ಜನಮನ ಗೆದ್ದಿದ್ದರು.
ಪಿ. ಎನ್ ರಾಮಚಂದ್ರ ರಾವ್ ನಿರ್ದೇಶನದ 'ಬೊಂಬಾಟ್ ಹೆಂಡ್ತಿ' ಚಿತ್ರದಲ್ಲಿ ಶ್ರೀಧರ್ ಹೆಣ್ಣಿನ ವೇಷ ಹಾಕಿದ್ದರು.
ಶರಣ್ ಅವರು ಜೈ ಲಲಿತಾ ಸಿನಿಮಾದಲ್ಲಿ ಲೇಡಿ ಗೆಟಪ್ ಹಾಕಿ ನಟಿಸಿದ್ದರು. ಇದು ಕಾಮಿಡಿ ಸಿನಿಮಾವಾಗಿತ್ತು.
ನವರಸ ನಾಯಕ ಜಗ್ಗೇಶ್ ಅವರು ‘ಮೇಕಪ್’ ಸಿನಿಮಾದಲ್ಲಿ ಹೆಣ್ಣಿನ ಪಾತ್ರದಲ್ಲಿಯೇ ಮೇಕಪ್ ಧರಿಸಿ ನಟಿಸಿದ್ದರು.
ದಕ್ಷಿಣ ಭಾರತದ ಜನಪ್ರಿಯ ನಟ ಪ್ರಕಾಶ್ ರೈ ‘ಅನುಕೂಲಕ್ಕೊಬ್ಬ ಗಂಡ’ ಸಿನಿಮಾದಲ್ಲಿ ಸ್ತ್ರೀ ಪಾತ್ರದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು.
ಸಾಯಿಕುಮಾರ್ ಅವರು ‘ಕಲ್ಪನಾ’ ಎನ್ನುವ ಹಾರರ್ ಸಿನಿಮಾದಲ್ಲಿ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ಪಾತ್ರ ಹಿಟ್ ಆಗಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು 45, ಮಿಡಿತ ಶೃತಿ ಸಿನಿಮಾಗಳಲ್ಲಿ ಸ್ತ್ರೀ ರೂಪದಲ್ಲಿ ಕಾಣಿಸಿಕೊಳ್ಳುವ ಮೂಲಕ ಭರ್ಜರಿ ಮನರಂಜನೆ ನೀಡಿದ್ದರು.
ಸಂಚಾರಿ ವಿಜಯ್ ತಮ್ಮ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಸಿನಿಮಾ 'ನಾನು ಅವನಲ್ಲ ಅವಳು' ಸಿನಿಮಾದಲ್ಲಿ ಮಂಗಳಮುಖಿ ಪಾತ್ರ ಮಾಡಿದ್ದರು.
ಸಾಹಸಸಿಂಹ ವಿಷ್ಣುವರ್ಧನ್ ಅವರು ಹಬ್ಬ ಸಿನಿಮಾದಲ್ಲಿ ಸೀರೆಯುಟ್ಟು ಹುಡುಗಿಯಂತೆ ನಟಿಸಿದ್ದರು. ಈ ಚಿತ್ರದಲ್ಲಿ ಅಂಬರೀಶ್, ಶಶಿಕುಮಾರ್ ಎಲ್ಲರೂ ಗೆಟಪ್ ಬದಲಾಯಿಸಿದ್ದರು.
ಕಾನ್ಸ್ ಫಿಲಂ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕಾ ಉಪೇಂದ್ರ
ರಾಧಿಕಾ ಪಂಡಿತ್ ಸ್ಟೈಲಿಶ್ ಲುಕ್’ಗೆ ಬಾಂಗ್ಲಾದೇಶಿ ಫ್ಯಾನ್ಸ್ ಕೂಡ ಫಿದಾ ಆಗೋದ್ರೂ
ಶೇರ್ ಆಗಿ ಬಂದ ಕರ್ಣ ಧಾರಾವಾಹಿ ನಟ ಕಿರಣ್ ರಾಜ್! ವೀಕ್ಷಕರಿಗೆ ಹಬ್ಬವೋ ಹಬ್ಬ!
ಐಸ್ ಲ್ಯಾಂಡಲ್ಲಿ ಪ್ರಣೀತಾ ಸುಭಾಷ್.. ಪತಿ ಜೊತೆ ಜಾಲಿ ಮೂಡಲ್ಲಿ ನಟಿ