ಕನ್ನಡಿಗರ ಸಂಗಮ ಎನಿಸಿದ್ದ ನಟ ಯಶ್ ಅಭಿನಯ ಹಾಗು ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರವು ಆರ್‌ಆರ್‌ಆರ್‌ ಚಿತ್ರವನ್ನು ಕಲೆಕ್ಷನ್‌ನಲ್ಲಿ ಹಿಂದಿಕ್ಕಿ ಮುಂದಿನ ಸ್ಥಾನವನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ. ಪ್ರಭಾಸ್ ನಾಯಕತ್ವದ 'ಸಲಾರ್'...

ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ನಾಯಕತ್ವದ ಕೆಜಿಎಫ್‌ ಸರಣಿ ಸಿನಿಮಾಗಳು ಸೂಪರ್ ಹಿಟ್ ಆಗಿರುವುದು ಗೊತ್ತೇ ಇದೆ. ಸದ್ಯಕ್ಕೆ ನಟ ಯಶ್ ಅವರು ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ದಾಸ್ ಅವರ ಮುಂಬರುವ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಬಾಲಿವುಡ್‌ನ ರಾಮಾಯಣ ಚಿತ್ರದಲ್ಲಿ ಖಳನಾಯಕ ರಾವಣಪಾತ್ರದಲ್ಲಿ ಮಿಂಚಲಿದ್ದು, ಈ ಚಿತ್ರದ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ಇಧಿಗ ನಟ ಯಶ್ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಹೌದು, ನಟ ಯಶ್ 'ಕೆಜಿಎಫ್ 3' ಬಗ್ಗೆ ಮಾತನಾಡಿದ್ದಾರೆ. 'ರಾಕಿ ಜಿಂದಗಿ ಮತ್ತು ಅವನ ಕಥೆಯಲ್ಲಿ ಹೇಳಬೇಕಾಗಿರುವುದು ತುಂಬಾ ಇದೆ. ನಾನು ಹಾಗು ಪ್ರಶಾಂತ್ ನೀಲ್ (Prashanth Neel) ಕೆಜಿಎಫ್ 3 ಗೆ ಸಾಕಷ್ಟು ಸೀನ್‌ಗಳನ್ನು ಈಗಾಗಲೇ ಯೋಚಿಸಿ ರೆಡಿ ಮಾಡಿ ಇಟ್ಟುಕೊಂಡಿದ್ದೇವೆ. ಕೆಜಿಎಫ್ 2ನಲ್ಲಿ ಹೇಳಲು ಆಗದೇ ಇರುವ ಹಲವಾರು ಸಂಗತಿಗಳು ನಮ್ಮ ಬಳಿ ಇವೆ. ಅವೆಲ್ಲ ಹೇಳಲು ಹೊರಟರೆ ಖಂಡಿತ ಕೆಜಿಎಫ್ ಸಿನಿಮಾ ಮಾಡಬಹುದು. ಮುಂಬರುವ ಕೆಜಿಎಫ್‌ 3 ಸಿನಿಮಾ ಈಗಾಗಲೇ ಆಗಿರುವ ಚಿತ್ರಗಳಿಗಿಂತ ಬಿಗ್ ಬಜೆಟ್ ಹಾಗು ಭಿನ್ನವಾಗಿ ಮೂಡಿ ಬರಲಿದೆ' ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. 

ಯಾವ್ ಹೀರೋನೂ ನಂಗೆ ಹಾಗೆ ಹೇಳಿರ್ಲಿಲ್ಲ, ಅವ್ರು ಮಾತ್ರ ಅಂದಿದ್ರು: ಶಾಕ್ ಕೊಟ್ರು 'AK 47' ಓಂ ಪ್ರಕಾಶ್ ರಾವ್!

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ನಟನೆ ಹಾಗು ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾ ಖ್ಯಾತಿ ಮತ್ತು ಗಳಿಕೆ ಬಗ್ಗೆ ಇಡೀ ಪ್ರಪಂಚಕ್ಕೇ ಬಹುತೇಕ ಗೊತ್ತು. ಕೆಜಿಎಫ್‌ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಹೆಚ್ಚಾಗಿತ್ತು. ಕೆಜಿಎಫ್ 2 ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಎನಿಸಿತ್ತು. ಆದರೆ, ಇದೀಗ ಬಂದ ಹೊಸ ಸುದ್ದಿಯ ಪ್ರಕಾರ, ನಟ ಯಶ್ ಅಭಿನಯದ ಸಿನಿಮಾ 'ಕೆಜಿಎಫ್ 2' ಭಾರತದಲ್ಲಿ ಹೊಸ ದಾಖಲೆ ಬರೆದಿದೆ. 

ಲೇಟ್ ಆಗಿ ಬ್ಯಾಟ್ ಬೀಸ್ತಿರೋದು ಯಾಕೆ, ಮ್ಯಾಚ್ ಬಗ್ಗೆ ಈಗ ಅಪ್‌ಡೇಟ್ ಆಗ್ತಿದ್ಯಾ ದರ್ಶನ್ ಆಪ್ತರಿಗೆ?

ಅದೇನೆಂದರೆ, ಇಲ್ಲಿಯವರೆಗೂ ರಾಜಮೌಳಿ ನಿರ್ದೇಶನ, ಜೂನಿಯರ್ ಎನ್‌ಟಿಆರ್ ಹಾಗು ರಾಮ್‌ಚರಣ್ ಅಭಿನಯದ 'ಆರ್‌ಆರ್‌ಆರ್ (RRR)' ಚಿತ್ರವು ಭಾರತದಲ್ಲಿ ಗಳಿಕೆ ದೃಷ್ಟಿಯಿಂದ ಮೂರನೇ ಸ್ಥಾನದಲ್ಲಿ ಇತ್ತು ಎನ್ನಲಾಗಿತ್ತು. ಆದರೆ ಹೊಸ ಮಾಹಿತಿ ಏನೆಂದರೆ, ಕೆಜಿಎಫ್ 2 (KGF 2) ಚಿತ್ರವು ಆರ್‌ಆರ್‌ಆರ್‌ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ, ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾರತದ ಅತೀ ಹೆಚ್ಚಿನ ಗಳಿಕೆ ಕಂಡ ಚಿತ್ರಗಳಲ್ಲಿ ಮೊದಲ ಸ್ಥಾನವನ್ನು ಬಾಲಿವುಡ್‌ನ ದಂಗಲ್ ಪಡೆದುಕೊಂಡಿದ್ದರೆ, ಎರಡನೇ ಸ್ಥಾನವನ್ನು ರಾಜಮೌಳಿ ನಿರ್ದೇಶನ ಹಾಗು ಪ್ರಭಾಸ್ ನಟನೆಯ 'ಬಾಹಬಲಿ 2' ಚಿತ್ರವು ಪಡೆದುಕೊಂಡಿದೆ. 

ಮೂರನೇ ಸ್ಥಾನಕ್ಕೆ ಜಿಗಿದ ರಾಕಿಂಗ್ ಸ್ಟಾರ್ ಕೆಜಿಎಫ್ 2, ನಟ ಯಶ್ ಕೆಳಕ್ಕೆ ತಳ್ಳಿದ್ದು ಯಾರನ್ನ ನೋಡ್ರಿ!

ಅಂದಹಾಗೆ, ಕನ್ನಡದ ಸ್ಟಾರ್ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಸಹ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಯಶ್ ನಟನೆಯ ರಾಮಾಯಣ ಚಿತ್ರದಲ್ಲಿ, ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗು ರಾವಣನಾಗಿ ಯಶ್ ನಟಿಸುತ್ತಿದ್ದಾರೆ.

ಕರುನಾಡ ಹಂಪಿ ವಿರೂಪಾಕ್ಷನೆದುರು ತೆಲುಗು ಟೀಮ್, ಏನ್ ಮಾಡ್ತಿದಾರೆ ಸ್ಟಾರ್ ನಟ ರಾಮ್‌ ಚರಣ್?

ಒಟ್ಟಿನಲ್ಲಿ, ಕನ್ನಡಿಗರ ಸಂಗಮ ಎನಿಸಿದ್ದ ನಟ ಯಶ್ ಅಭಿನಯ ಹಾಗು ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರವು ಆರ್‌ಆರ್‌ಆರ್‌ ಚಿತ್ರವನ್ನು ಕಲೆಕ್ಷನ್‌ನಲ್ಲಿ ಹಿಂದಿಕ್ಕಿ ಮುಂದಿನ ಸ್ಥಾನವನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ. ಪ್ರಭಾಸ್ ನಾಯಕತ್ವದ 'ಸಲಾರ್ (Salaar) ಬಳಿಕ ಸದ್ಯ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದು, ಜೂನಿಯರ್ ಎನ್‌ಟಿಆರ್ ನಟನೆಯ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 

ನಿವಿ-ನಾನು ಜೊತೆಲ್ಲಿ ಇಲ್ದೇ ಒಂದು ವರ್ಷನೇ ಆಗಿತ್ತು, ಪರ್ಸನಲ್ ವಿಷ್ಯ ಪಬ್ಲಿಕ್‌ ಆಗೋಯ್ತು: ಚಂದನ್ ಶೆಟ್ಟಿ