Asianet Suvarna News Asianet Suvarna News

ರಾಕಿ ಭಾಯ್ ಕೆಳಕ್ಕೆ ತಳ್ಳಿದ್ದು ಯಾರನ್ನೆಲ್ಲ ನೋಡಿ, ಮೂರನೇ ಸ್ಥಾನಕ್ಕೆ ಜಿಗಿದ ಕೆಜಿಎಫ್ ರಾಕಿಂಗ್ ಸ್ಟಾರ್!

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. 

Kannada rocking star yash KGF 2 surpasses RRR to become the third highest grossing Indian movies srb
Author
First Published Jul 3, 2024, 12:30 PM IST

ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆ ಹಾಗು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' ಹಾಗು 'ಕೆಜಿಎಫ್ 2' ಸಿನಿಮಾ ಖ್ಯಾತಿ ಹಾಗು ಗಳಿಕೆ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಕೆಜಿಎಫ್‌ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಆಗಿದ್ದು, ಈ ಸಿನಿಮಾ ಸ್ಯಾಂಡಲ್‌ವುಡ್ ಮಟ್ಟಿಗೆ ಹೊಸ ದಾಖಲೆ ಎನಿಸಿತ್ತು. ಆದರೆ, ಇದೀಗ ಬಂದ ಹೊಸ ಸುದ್ದಿಯ ಪ್ರಕಾರ, ನಟ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಭಾರತದಲ್ಲಿ ಹೊಸ ದಾಖಲೆ ಬರೆದಿದೆ. 

ಹೌದು, ಇಲ್ಲಿಯವರೆಗೂ ರಾಜಮೌಳಿ ನಿರ್ದೇಶನ, ಜೂನಿಯರ್ ಎನ್‌ಟಿಆರ್ ಹಾಗು ರಾಮ್‌ಚರಣ್ ಅಭಿನಯದ 'ಆರ್‌ಆರ್‌ಆರ್' ಚಿತ್ರವು ಭಾರತದಲ್ಲಿ ಗಳಿಕೆ ದೃಷ್ಟಿಯಿಂದ ಮೂರನೇ ಸ್ಥಾನದಲ್ಲಿ ಇತ್ತು ಎನ್ನಲಾಗಿತ್ತು. ಆದರೆ ಹೊಸ ಸಂಗತಿ ಏನೆಂದರೆ, ಕೆಜಿಎಫ್ 2 (KGF 2) ಚಿತ್ರವು ಆರ್‌ಆರ್‌ಆರ್‌ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ, ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾರತದ ಅತೀ ಹೆಚ್ಚಿನ ಗಳಿಕೆ ಕಂಡ ಚಿತ್ರಗಳಲ್ಲಿ ಮೊದಲ ಸ್ಥಾನವನ್ನು ಬಾಲಿವುಡ್‌ನ ದಂಗಲ್ ಪಡೆದುಕೊಂಡಿದ್ದರೆ, ಎರಡನೇ ಸ್ಥಾನವನ್ನು ರಾಜಮೌಳಿ ನಿರ್ದೇಶನ, ಪ್ರಭಾಸ್ ನಟನೆಯ 'ಬಾಹಬಲಿ 2' ಚಿತ್ರವು ಪಡೆದುಕೊಂಡಿದೆ. 

ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?

ಒಟ್ಟಿನಲ್ಲಿ, ಕನ್ನಡಿಗರ ಸಂಗಮ ಎನಿಸಿದ್ದ ನಟ ಯಶ್ ಅಭಿನಯ ಹಾಗು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರವು ಆರ್‌ಆರ್‌ಆರ್‌ ಚಿತ್ರವನ್ನು ಕಲೆಕ್ಷನ್‌ನಲ್ಲಿ ಹಿಂದಿಕ್ಕಿ ಮುಂದಿನ ಸ್ಥಾನವನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ. ಪ್ರಭಾಸ್ ನಾಯಕತ್ವದ ಸಲಾರ್ ಬಳಿಕ ಸದ್ಯ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದು, ಜೂನಿಯರ್ ಎನ್‌ಟಿಆರ್ ನಟನೆಯ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 

ಬಾತ್‌ರೂಮ್ ಕ್ಲೀನ್ ಮಾಡ್ತಾರಂತೆ ಮನೆಲ್ಲಿ ಗೋಲ್ಡನ್ ಸ್ಟಾರ್; ಮೂರ್ಛೆ ಹೋಗ್ತಾರೇನೋ ಗಣೇಶ್ ಫ್ಯಾನ್ಸ್!

ಅಂದಹಾಗೆ, ಕನ್ನಡದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌'ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ. ಗೀತೂ ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ, ರಾಮಾಯಣ ಚಿತ್ರದಲ್ಲಿ, ರಾಮನಾಗಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರಿಗೆ ಸೀತೆಯಾಗಿ ಸಾಯಿ ಪಲ್ಲವಿ ಈಗಾಗಲೇ ನಟಿಸುತ್ತಿದ್ದಾರೆ.

ಅದನ್ನ ಮಾಡ್ಬೇಡ ಮನೆಗೋಗು ಅಂದ್ರು ವಿಷ್ಣು ಸರ್; ಆದ್ರೆ ವಾಸು ಸರ್ ಅದೇನೋ ಮಾಡ್ಬಿಟ್ರು: ನಟ ರಾಜೇಶ್ 

Latest Videos
Follow Us:
Download App:
  • android
  • ios