ನಿವಿ-ನಾನು ಜೊತೆಲ್ಲಿ ಇಲ್ದೇ ಒಂದು ವರ್ಷನೇ ಆಗಿತ್ತು, ಪರ್ಸನಲ್ ವಿಷ್ಯ ಪಬ್ಲಿಕ್ ಆಗೋಯ್ತು: ಚಂದನ್ ಶೆಟ್ಟಿ
ಪ್ರೀತಿಸಿ ಮದುವೆಯಾಗಿದ್ದರೂ ಕೂಡ ಸಂಸಾರದಲ್ಲಿ ಸರಿಗಮ ಮೂಡಲಿಲ್ಲ ಎಂದಾದರೆ, ದಾಂಪತ್ಯ ಮುಂದುವರೆಸಲು ಮನಸ್ಸಿಲ್ಲ ಎಂದಾದಾಗ, ಪರಸ್ಪರ ಮಾತನಾಡಿಕೊಂಡು ನಗುನಗುತ್ತಲೇ ಡಿವೋರ್ಸ್ ಮಾಡಿಕೊಂಡರೆ ಸಮಸ್ಯೆಯೇನು?
ಸುತ್ತಲೂ ಮೀಡಿಯಾದವರು ಇರುವ ರೂಮಿನಲ್ಲಿ ಕುಳಿತುಕೊಂಡು ನಮ್ಮಿಬ್ಬರ ಡಿವೋರ್ಸ್ ಬಗ್ಗೆ ಮಾತನಾಡಿದ್ದು ನಮ್ಮಿಬ್ಬರಿಗೂ ತುಂಬಾ ನೋವು ಹಾಗೂ ಕಸಿವಿಸಿ ತಂದ ವಿಷಯವಾಗಿತ್ತು' ಎಂದಿದ್ದಾರೆ ಕನ್ನಡದ ರಾಪರ್ ಸಿಂಗರ್ ಚಂದನ್ ಶೆಟ್ಟಿ. ನಾವಿಬ್ಬರೂ ಪರಸ್ಪರ ಚರ್ಚೆ ನಡೆಸಿ, ಒಪ್ಪಿಗೆ ಮೇರೆಗೆ ವಿಚ್ಛೇದನ ತೆಗೆದುಕೊಂಡಿದ್ದೇವೆ. ಅದರೂ ನಮಗೆ ನೂರಾರು ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆಲ್ಲ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು' ಎಂದಿದ್ದಾರೆ ನಟ, ಗಾಯಕ ಚಂದನ್ ಶೆಟ್ಟಿ.
ಹೌದು, ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ 2020 ರಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ, ಅವರಿಬ್ಬರಲ್ಲಿ ಹೊಂದಾಣಿಕೆ ಮೂಡದ ಕಾರಣ, ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ತೆಗದುಕೊಂಡಿದ್ದಾರೆ. ಮೇ ಆರನೇ ತಾರೀಖು (06 May 2024) ರಂದು ಫ್ಯಾಮಿಲಿ ಕೋರ್ಟ್‌ಗೆ ಅಪ್ಲೈ ಮಾಡಿ ಮಾರನೇ ದಿನ ಅಂದರೆ 7ಕ್ಕೇ ಡಿವೋರ್ಸ್ ಪಡೆದಿದ್ದಾರೆ. ಯಾವಾಗ ಈ ಸಂಗತಿ ಹೊರಜಗತ್ತಿಗೆ ಗೊತ್ತಾಯಿತೋ ಆಗ ಎಲ್ಲರೂ ತಮ್ಮತಮ್ಮ ಮನೆಗಳಿಗೇ ಬೆಂಕಿ ಬಿದ್ದಂತೆ ಆಡತೊಡಗಿದರು. ಮಾಧ್ಯಮಗಳು ಕೂಡ ಅದನ್ನೊಂದು ಸುಂಟರಗಾಳಿ ಮಾಡಿಬಿಟ್ಟರು!
ಸ್ಟಾರ್‌ಡಂ ಇದ್ರೂ ಸರಳತೆಯೂ ಇತ್ತು, ಕಷ್ಟದಿಂದ ಬೆಳೆದವರು ನಟ ದರ್ಶನ್; ಬಿಗ್ ಬಾಸ್ ವಿನ್ನರ್ ಶ್ರುತಿ
ಈ ಬಗ್ಗೆ ಮಾತನಾಡಿರುವ ಚಂದನ್ ಶೆಟ್ಟಿ 'ನಾವಿಬ್ಬರೂ ಯಾವುದೇ ಮನಸ್ತಾಪ. ಜಗಳ ಮಾಡಿಕೊಳ್ಳದೇ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರೂ ಮಾಧ್ಯಮದವರೇ ತುಂಬಿಕೊಂಡಿದ್ದ ಹಾಲ್‌ನಲ್ಲಿ ಮಾತನಾಡುವಾಗ ಬಹಳಷ್ಟು ನೋವು, ಆತಂಕ ನಿರ್ಮಾಣವಾಗಿತ್ತು. ನಮ್ಮಿಬ್ಬರ ಒಪ್ಪಿಗೆಯ ಮೇರೆಗೆ ಮದುವೆಯಾಗಿ ನಮ್ಮಿಬ್ಬರದೇ ನಿರ್ಧಾರದಂತೆ ಬೇರೆಬೇರೆ ಆಗುವುದಕ್ಕೂ ಕೂಡ ಕಾರಣ ಕೊಡಬೇಕಾಗಿದ್ದು, ಆ ಬಗ್ಗೆ ಎಲ್ಲರೆದುರು ಕ್ಯಾಮರಾ ಮುಂದೆ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದು ನನಗೆ ಮತ್ತು ನಿವಾದಿತಾ ಗೌಡ ಇಬ್ಬರಿಗೂ ತುಂಬಾ ನೋವು ತರಿಸಿತು.
ವಿಷ್ಣುವರ್ಧನ್‌ರನ್ನು 'ಅಪ್ಪಾಜಿ' ಅಂತಿದ್ದ ನಟ ದರ್ಶನ್ 'ಈ ಬಂಧನ' ಬಳಿಕ ಏನು ಹೇಳಿದ್ರು?
ಪ್ರೀತಿಸಿ ಮದುವೆಯಾಗಿದ್ದರೂ ಕೂಡ ಸಂಸಾರದಲ್ಲಿ ಸರಿಗಮ ಮೂಡಲಿಲ್ಲ ಎಂದಾದರೆ, ದಾಂಪತ್ಯ ಮುಂದುವರೆಸಲು ಮನಸ್ಸಿಲ್ಲ ಎಂದಾದಾಗ, ಪರಸ್ಪರ ಮಾತನಾಡಿಕೊಂಡು ನಗುನಗುತ್ತಲೇ ಡಿವೋರ್ಸ್ ಮಾಡಿಕೊಂಡರೆ ಸಮಸ್ಯೆಯೇನು? ಇಲ್ಲಿ ಎಲ್ಲರ ಜೀವನವೂ ವೈಯಕ್ತಿಕವೇ ಆಗಿದೆ. ಸಾರ್ವಜನಿಕ ವೃತ್ತಿಯಲ್ಲಿರುವ ವ್ಯಕ್ತಿಗಳದ್ದೇ ಆಗಿದ್ದರೂ ಮದುವೆ, ಮಕ್ಕಳು, ಊಟ-ತಿಂಡಿ ಸೇರಿದಂತೆ ಹಲವು ಸಂಗತಿಗಳು ವೈಯಕ್ತಿಕವೇ. ಆದರೂ ಕೂಡ ಆ ಬಗ್ಗೆ ಸಾರ್ವಜನಿಕರಿಗೆ ಆಸಕ್ತಿ ಇರುತ್ತದೆ, ಅವರಿಗೆ ಉತ್ತರ ಕೊಡಬೇಕು ಎಂಬುದು ಅಚ್ಚರಿಯ ಸಂಗತಿಯಾದರೂ ಸತ್ಯ.
ಪಾಠ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ: ಅತೃಪ್ತರು ಎಲ್ಲಾ ಕಡೆ ಇರ್ತಾರೆ, ಯಾಕೆ ತಲೆ ಕೆಡಿಸ್ಕೋತೀರಿ!
ಇಲ್ಲಿ ನಾನು ಸರಿ-ತಪ್ಪುಗಳ ಬಗ್ಗೆ ಮಾತನಾಡುತ್ತಿಲ್ಲ. ಅದು ಯಾರೇ ಆಗಿರಲಿ, ಸಲೆಬ್ರಿಟಿ ಆಗಿದ್ದರೂ ಅಥವಾ ಸಾಮಾನ್ಯ ಜನರೇ ಆಗಿದ್ದರೂ ಎಲ್ಲರಿಗೂ ವೈಯಕ್ತಿಕ ಬದುಕು ಇರುತ್ತದೆ. ಅದನ್ನು ಪ್ರತಿಯಬ್ಬರೂ ಗೌರವಿಸಬೇಕು. ಸಮಸ್ಯೆಗಳಾದಾಗ ಕಾನೂನಿನ ಅಡಿಯಲ್ಲಿ ಪರಿಹಾರ ಕಂಡುಕೊಂಡರೆ ಮುಗಿಯಿತು. ಆದರೆ, ಅದಕ್ಕೆಲ್ಲಾ ಸಾರ್ವಜನಿಕವಾಗಿ ಉತ್ತರ ಕೊಡುತ್ತಾ ಇರಬೇಕಾದ ಸಮಯ-ಸಂದರ್ಭ ಸೃಷ್ಟಿಯಾದಾಗ ನಿಜವಾಗಿಯೂ ಮನಸ್ಸಿಗೆ ತುಂಬಾ ಬೇಸರ ಉಂಟಾಗುತ್ತದೆ. ಆ ಸಂದರ್ಭವನ್ನು ಅಂದು ನಾನು ಹಾಗು ನಿವೇದಿತಾ ಇಬ್ಬರೂ ಅನುಭವಿಸಿದ್ದೇವೆ' ಎಂದಿದ್ದಾರೆ ಚಂದನ್ ಶೆಟ್ಟಿ.
ಕಿಚ್ಚ ಸುದೀಪ್ ಪಾಲಿಗೆ ಪುನೀತ್ ಅಪ್ಪು ಅಲ್ಲ ಭಾಗ್ಯವಂತ; ಇದ್ಯಾ ಏನಾದ್ರೂ ರೈಟ್ ರೀಸನ್?