Asianet Suvarna News Asianet Suvarna News

ಲೇಟ್ ಆಗಿ ಬ್ಯಾಟ್ ಬೀಸ್ತಿರೋದು ಯಾಕೆ, ಮ್ಯಾಚ್ ಬಗ್ಗೆ ಈಗ ಅಪ್‌ಡೇಟ್ ಆಗ್ತಿದ್ಯಾ ದರ್ಶನ್ ಆಪ್ತರಿಗೆ?

ಕೆಲವೊಮ್ಮೆ ತಪ್ಪು ಎಲ್ಲರಿಂದ ಆಗುತ್ತದೆ,‌ ನಾವು ಅದನ್ನು ಕಣ್ಣಿಂದ ನೋಡಿದ್ದೇವೆ ಅಂತೇನೂ ಅಲ್ಲ, ಕೇಳಿದ್ದೇವೆ ಅಷ್ಟೇ. ತಪ್ಪು ಯಾರಿಂದ ಯಾವ ರೀತಿಯಲ್ಲಿ ನಡೆದಿದೆ ಎಂಬುದನ್ನು ನಡೆಯುತ್ತಿರುವ ತನಿಖೆ ..

kannada cinema producer k manju talks about actor darshan and renukaswamy murder case srb
Author
First Published Jul 3, 2024, 2:10 PM IST

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವುದು ಗೊತ್ತೇ ಇದೆ. ಚಿತ್ರರಂಗದ ದರ್ಶನ್ ಆಪ್ತರು ಈಗ ಒಬ್ಬೊಬ್ಬರಾಗಿಯೇ ನಟ ದರ್ಶನ್ ಪರ ಮಾತನಾಡಲು ಆರಂಭಿಸಿದ್ದಾರೆ. ದರ್ಶನ್ ಅವರಿಗೆ ಇನ್ನೊಂದು ಮುಖ ಕೂಡ ಇದ್ದು, ಅದು ಕರುಣೆ ಹಾಗು ಸಹಾಯ ಹಸ್ತ ಚಾಚುವ ಕೈ ಹೊಂದಿದೆ ಎಂದು ಹಲವರು ಹೇಳತೊಡಗಿದ್ದಾರೆ.  

ಇದೀಗ, ಸ್ಯಾಂಡಲ್‌ವುಡ್ ನಿರ್ಮಾಪಕ ಕೆ ಮಂಜು ಸುದ್ದಿಗೋಷ್ಠಿಯಲ್ಲಿ ನಟ ದಶ್ನ್ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದರೆ, ಕನ್ನಡ ಸಿನಿಮಾ ಪ್ರೊಡ್ಯೂಸರ್ ಕೆ ಮಂಜು ಏನು ಹೇಳಿದ್ದಾರೆ? ಇಲ್ಲಿದೆ ನೋಡಿ.. ನಟ ದರ್ಶನ್ ಅವರಿಗೆ 'ಲಂಕೇಶ್ ಪತ್ರಿಕೆ' ಸಿನಿಮಾ ನಿರ್ಮಿಸಿದ್ದರು ಕೆ ಮಂಜು. 'ಅವತ್ತಿನ ದರ್ಶನ್ ಹೇಗೆ ಇದ್ದರೋ ಈಗಲೂ ಹಾಗೇ ಇದ್ದಾರೆ. ದರ್ಶನ್ ತುಂಬಾ ಬಡತನದಿಂದ ಬಂದ ಹುಡುಗ, ಅವರು ಕೆಟ್ಟವರು ಅಲ್ಲ, ನನ್ನಿಂದ ಒಳ್ಳೆಯದು ಆಗುತ್ತದೆ ಎಂದರೆ ಬನ್ನಿ ಸಿನಿಮಾ ಮಾಡೋಣಾ ಎನ್ನುತ್ತಾರೆ. 

ಕರುನಾಡ ಹಂಪಿ ವಿರೂಪಾಕ್ಷನೆದುರು ತೆಲುಗು ಟೀಮ್, ಏನ್ ಮಾಡ್ತಿದಾರೆ ಸ್ಟಾರ್ ನಟ ರಾಮ್‌ ಚರಣ್?

ನಮ್ಮ ಕನ್ನಡ ನೆಲದ ನಿರ್ಮಾಪಕರಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ. 'ನನಗೆ ಡೈರೆಕ್ಟರ್ ಕಥೆ ಹೇಳಬೇಕು' ಎಂಬ ದರ್ಶನ್ ಪ್ರಿನ್ಸಿಪಲ್ ಕರೆಕ್ಟ್ ಇದೆ. ಇತ್ತೀಚೆಗೆ ಭೇಟಿಯಾಗಿ ದರ್ಶನ್ ಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ದರ್ಶನ್ ಅವರು ಜೈಲಿನಿಂದ ಬಂದರೆ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ. ಆ ಬಗ್ಗೆ ನ್ಯಾಯಮೂರ್ತಿಗಳು ಹಾಗು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ. 

ಮೂರನೇ ಸ್ಥಾನಕ್ಕೆ ಜಿಗಿದ ರಾಕಿಂಗ್ ಸ್ಟಾರ್ ಕೆಜಿಎಫ್ 2, ನಟ ಯಶ್ ಕೆಳಕ್ಕೆ ತಳ್ಳಿದ್ದು ಯಾರನ್ನ ನೋಡ್ರಿ!

ಕೆಲವೊಮ್ಮೆ ತಪ್ಪು ಎಲ್ಲರಿಂದ ಆಗುತ್ತದೆ,‌ ನಾವು ಅದನ್ನು ಕಣ್ಣಿಂದ ನೋಡಿದ್ದೇವೆ ಅಂತೇನೂ ಅಲ್ಲ, ಕೇಳಿದ್ದೇವೆ ಅಷ್ಟೇ. ತಪ್ಪು ಯಾರಿಂದ ಯಾವ ರೀತಿಯಲ್ಲಿ ನಡೆದಿದೆ ಎಂಬುದನ್ನು ನಡೆಯುತ್ತಿರುವ ತನಿಖೆ ಹಾಗೂ ನ್ಯಾಯಲಯ ಹೇಳಲಿವೆ. ದರ್ಶನ್ ಒಳ್ಳೆಯವರು ಸ್ನೇಹ ಜೀವಿ, ಕೆಲವರ ಜೊತೆ ಮನಸ್ತಾಪ ಇದೆ. ಆದರೆ, ಬಹಳಷ್ಟು ಜನರ ಜೊತೆ ದರ್ಶನ್ ಸ್ನೇಹ ಕೂಡ ಇದೆ. ದರ್ಶನ್ ಹೊರಬರದಂತೆ ರಾಜಕೀಯ ನಾಯಕರ ಕೈವಾಡ ಇದೆ...' ಎಂದಿದ್ದಾರೆ ಕೆ ಮಂಜು. 

ಬಾತ್‌ರೂಮ್ ಕ್ಲೀನ್ ಮಾಡ್ತಾರಂತೆ ಗೋಲ್ಡನ್ ಸ್ಟಾರ್; ಮೂರ್ಛೆ ಹೋಗ್ತಾರೋ ಏನೋ ಗಣೇಶ್ ಫ್ಯಾನ್ಸ್!

ಕುಮಾರಸ್ವಾಮಿ ಹೆಸರು ಹೇಳಿ, ಅವರು ಆ ರೀತಿ ವ್ಯಕ್ತಿಯಲ್ಲ ಎಂದಿದ್ದಾರೆ ಕೆ ಮಂಜು. 'ಕುಮಾರಸ್ವಾಮಿ ದೊಡ್ಡ ವ್ಯಕ್ತಿ, ಅವರು ಆ ರೀತಿ ವ್ಯಕ್ತಿಯಲ್ಲ, ಕುಮಾರಣ್ಣ ಆ ರೀತಿ ಇದ್ದಿದ್ದರೆ ಗೆಲ್ಲುತ್ತಾ ಇರಲಿಲ್ಲ.. ಒಂದು ವೇಳೆ ದರ್ಶನ್ ಈ ಪ್ರಕರಣದಲ್ಲಿ ಅಪರಾಧಿ ಆದ್ರೆ, ಯಾವ ಯಾವ ನಿರ್ಮಾಪಕರು ನಟ ದರ್ಶನ್ ಅವರಿಗೆ ಸಿನಿಮಾಕ್ಕಾಗಿ  ಹಣ ಕೊಟ್ಟಿದ್ದಾರೋ ಅವರಿಗೆ ವಾಪಸ್ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಚಿತ್ರರಂಗ ಅಂದರೆ ಅವರಿಗೆ ಒಳ್ಳೆ ಗೌರವ ಇದೆ' ಎಂದಿದ್ದಾರೆ ನಿರ್ಮಾಪಕ ಕೆ ಮಂಜು.

ಗರ್ಭಿಣಿ ಹೆಂಡ್ತಿ, ತಂದೆ-ತಾಯಿ ಬಗ್ಗೆ ಯೋಚಿಸ್ಬೇಕಿತ್ತು, ಅಶ್ಲೀಲ ಮೆಸೇಜ್ ಕಳ್ಸಿದ್ದು ದೊಡ್ಡ ತಪ್ಪು,: ಅಗ್ನಿ ಶ್ರೀಧರ್ 

ಇನ್ನು, ನಟ ದರ್ಶನ್ ಕೊಲೆ ಆರೋಪಿಯಾಗಿ ಜೈಲಿಗೆ ಹೋಗುವ ಮೊದಲು ಶೂಟಿಂಗ್ ಆಗುತ್ತಿದ್ದ 'ಡೆವಿಲ್' ಸಿನಿಮಾ ಬಗ್ಗೆ 'ಡೆವಿಲ್ ಬಹು ನಿರೀಕ್ಷಿತ ಸಿನಿಮಾ, ಈ ರೀತಿ ಘಟನೆ ಯಾಗಬಾರದಿತ್ತು, ಆಗಿದೆ' ಎಂದಿದ್ದಾರೆ ಕೆ ಮಂಜು. ಒಟ್ಟಿನಲ್ಲಿ, ಕನ್ನಡ ಚಿತ್ರರಂಗದ ನಿರ್ಮಾಪಕರು, ನಟನಟಿಯರು ಬಹುದಿನಗಳ ಬಳಿಕ, ನಟ ದರ್ಶನ್ ಪರವಾಗಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ ಎನ್ನಬಹುದು. ಅದಕ್ಕೆ ಕಾರಣ, ಕೇಸ್ ನ್ಯಾಯಾಲಯದಲ್ಲಿದೆ ಎಂಬುದೂ ಸೇರಿದಂತೆ ಹಲವಾರು ಇರಬಹುದು. 

Latest Videos
Follow Us:
Download App:
  • android
  • ios