ನಟ ಕಿಚ್ಚ ಸುದೀಪ್ ಅವರು ಸಿನಿಮಾ ಹಾಗೂ ಕಿರುತೆರೆ ಎರಡೂ ಕಡೆಗಳಲ್ಲಿ ಸಾಕಷ್ಟು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮನರಂಜನಾ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇದೀಗ.. ‘ನವೆಂಬರ್ 27, ಸಂಜೆ 6 ಗಂಟೆಗೆ ಒರಾಯನ್ ಮಾಲ್ನಲ್ಲಿ ಭೇಟಿಯಾಗೋಣ’ ಎಂದಿದ್ಯಾಕೆ? ನೋಡಿ..
ನವೆಂಬರ್ 27, ಸಂಜೆ 6 ಗಂಟೆಗೆ ಒರಾಯನ್ ಮಾಲ್ನಲ್ಲಿ ಭೇಟಿಯಾಗೋಣ
ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆ ಹಾಗೂ ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಮುಂಬರುವ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಡೇಟ್ ಘೋಷಣೆ ಆಗಿದೆ. ಈಗ ಸ್ವಲ್ಪ ಹೊತ್ತಿಗೆ ಮುಂಚೆ ನಟ ಸುದೀಪ್ ಅವರು ತಮ್ಮ ಅಧಿಕೃತ 'ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ನಟ ಸುದೀಪ್ ಏನನ್ನು ಶೇರ್ ಮಾಡಿದ್ದಾರೆ ನೋಡಿ..
ನಿಮ್ಮನೆಲ್ಲಾ ಒರಾಯನ್ ಮಾಲ್ ನಲ್ಲಿ ನೋಡ್ತೀನಿ, ಈ ನವೆಂಬರ್ 27, 6-00 ಗಂಟೆಗೆ, ಲವ್ & ಹಗ್ಸ್ (See you all at Orion.. This Nov 27th... 6pm. Luv & Hug's) ಎಂದು ನಟ ಕಿಚ್ಚ ಸುದೀಪ್ ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಬರುತ್ತಿವೆ.
ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ
'ದಿ ವಿಲನ್' ಚಿತ್ರ ಆದಮೇಲೆ, 8 ವರ್ಷಗಳ ಬಳಿಕ ನಿರ್ದೇಶಕ ಪ್ರೇಮ್ ಮತ್ತು ಸುದೀಪ್ ಮತ್ತೆ ಒಂದಾಗಲಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್ ನವೆಂಬರ್ 27, 2026 ರಂದು, ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಸಾಯಂಕಾಲ 6.00 ಗಂಟೆಗೆ ಬಿಡುಗಡೆ ಆಗಲಿದೆ. ಆ ಬಳಿಕ ಸಿನಿಮಾದ ಬಗ್ಗೆ ಎಲ್ಲಾ ಮಾಹಿತಿಗಳು ಒಂದೊಂದಾಗಿ ಸಮಯ ಕಳೆದಂತೆ ಬಹಿರಂಗವಾಗಬಹುದು ಎನ್ನಬಹುದು.
ಸದ್ಯಕ್ಕೆ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಶೋದ ನಿರೂಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಬಿಗ್ ಬಾಸ್ ಹೋಸ್ಟಿಂಗ್ ಜೊತೆಜೊತೆಗೆ ಸುದೀಪ್ ಅವರು ಸಿನಿಮಾ ನಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಕಿಚ್ಚ ಸುದೀಪ್ ಅವರ ಕೈನಲ್ಲಿ 5 ಸಿನಿಮಾಗಳಿದ್ದು, ಆ ಬಗೆಗಿನ ಮಾಹಿತಿ ಮುಂದೆ ಇದೆ ನೋಡಿ..
ಕಿಚ್ಚ ಸುದೀಪ್ ಕೈನಲ್ಲಿ ಇರುವ, ಮುಂದೆ ತೆರೆಗೆ ಬರಲಿರುವ ಸಿನಿಮಾಗಳು-
• ಬಿಲ್ಲ ರಂಗ ಬಾಷಾ: ಫರ್ಸ್ಟ್ ಬ್ಲಡ್ (Billa Ranga Baasha: First Blood): ಅನೂಪ್ ಭಂಡಾರಿ ನಿರ್ದೇಶನದ ಈ ಫ್ಯಾಂಟಸಿ-ಆಕ್ಷನ್ ಸಿನಿಮಾದಲ್ಲಿ ಸುದೀಪ್ 'ಬಿಲ್ಲ', 'ರಂಗ' ಮತ್ತು 'ಬಾಷಾ' ಎಂಬ ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 19, 2027 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
• ದೇವರಾಯ (Devaraaya): ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಐತಿಹಾಸಿಕ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿರುವ ಈ ಬೃಹತ್ ಸಿನಿಮಾ ಡಿಸೆಂಬರ್ 2027 ರಲ್ಲಿ ತೆರೆಗೆ ಬರಲು ಸಜ್ಜಾಗಿದೆ.
• ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ: 'ದಿ ವಿಲನ್' ಚಿತ್ರದ 8 ವರ್ಷಗಳ ಬಳಿಕ ನಿರ್ದೇಶಕ ಪ್ರೇಮ್ ಮತ್ತು ಸುದೀಪ್ ಮತ್ತೆ ಒಂದಾಗಿದ್ದು, ಈ ಚಿತ್ರದ ಟೈಟಲ್ ಟೀಸರ್ ನವೆಂಬರ್ 27, 2026 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಅಪ್ಡೇಟ್ಗಳು ಇನ್ನಷ್ಟೇ ಸಿಗಬೇಕಿದೆ.
• ಸುದೀಪ್ ಸ್ವಂತ ನಿರ್ದೇಶನದ ಸಿನಿಮಾ (KRG - 6): ಸುಮಾರು 12 ವರ್ಷಗಳ ನಂತರ ಕಿಚ್ಚ ಸುದೀಪ್ ಮತ್ತೆ ನಿರ್ದೇಶನದ ಕ್ಯಾಪ್ ತೊಡುತ್ತಿದ್ದು, ಕೆಆರ್ಜಿ (KRG) ಸ್ಟುಡಿಯೋಸ್ ಜೊತೆಗಿನ ಈ ಸಿನಿಮಾ ಡಿಸೆಂಬರ್ 2026 ರ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.
• ಸ್ಕೂಲ್ ಬಸ್ (School Bus): ತಮಿಳು ನಿರ್ದೇಶಕರಾದ ಪಿ. ಸಮುದ್ರಖನಿ ನಿರ್ದೇಶನದ ಈ ಚಿತ್ರವು 2027 ರಲ್ಲಿ ಬಿಡುಗಡೆಯಾಗಲಿದ್ದು, ನಟ ಕಿಚ್ಚ ಸುದೀಪ್ ಅವರ ಮತ್ತೊಂದು ಪ್ರಮುಖ ಪ್ರಾಜೆಕ್ಟ್ ಆಗಿದೆ.
ಒಟ್ಟಿನಲ್ಲಿ, ನಟ ಕಿಚ್ಚ ಸುದೀಪ್ ಅವರು ಸಿನಿಮಾ ಹಾಗೂ ಕಿರುತೆರೆ ಎರಡೂ ಕಡೆಗಳಲ್ಲಿ ಸಾಕಷ್ಟು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮನರಂಜನಾ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎನ್ನಬಹುದು.

















