'ಪ್ರಚಂಡ ರಾವಣ'ನಾದ ಸದಾನಂದ ಸಾಗರ; ಕೊನೆಗಾಲ ಹೇಗಿತ್ತು, ಅದೆಂಥ ವ್ಯಕ್ತಿಯಾಗಿದ್ದರು ವಜ್ರಮುನಿ..!?

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರಲ್ಲಿ ವಜ್ರಮುನಿ ಒಬ್ಬರು. ಅವರು ಮಹಾನ್ ಕಲಾವಿದರಲ್ಲಿ ಒಬ್ಬರು ಎನ್ನುವುದಕ್ಕಿಂತ ಹೆಚ್ಚಾಗಿ ಅವರಂಥವರು ಇನ್ನೊಬ್ಬರಿಲ್ಲ ಎನ್ನಬಹುದು. ವಜ್ರಮುನಿ ಅವರು ಪ್ರಚಂಡ ರಾವಣ ಹೆಸರಿನ ನಾಟಕದಲ್ಲಿ ಮೊಟ್ಟಮೊದಲು ಬಣ್ಣ ಹುಚ್ಚಿದ್ದು...

Kannada actor Vajramuni suffered from heart and kidney problems in last days srb

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರಲ್ಲಿ ವಜ್ರಮುನಿ ಒಬ್ಬರು. ಅವರು ಮಹಾನ್ ಕಲಾವಿದರಲ್ಲಿ ಒಬ್ಬರು ಎನ್ನುವುದಕ್ಕಿಂತ ಹೆಚ್ಚಾಗಿ ಅವರಂಥವರು ಇನ್ನೊಬ್ಬರಿಲ್ಲ ಎನ್ನಬಹುದು. ವಜ್ರಮುನಿ (Vajramuni) ಅವರು ಪ್ರಚಂಡ ರಾವಣ ಹೆಸರಿನ ನಾಟಕದಲ್ಲಿ ಮೊಟ್ಟಮೊದಲು ಬಣ್ಣ ಹುಚ್ಚಿದ್ದು. ಅವರ ಕಂಚಿನ ಕಂಠ ಹಾಗು ವಿಲನ್ ಪಾತ್ರದ ನಟನೆ ಹೇಗಿತ್ತು ಎಂದರೆ ಅಂದು ರಾವಣ ಎಂದರೆ ಅದು ವಜ್ರಮುನಿಯೇ ಎಂದುಕೊಂಡಿದ್ದರಂತೆ. ಪ್ರಚಂಡ ರಾವಣ ನಾಟಕ ನೋಡಿದ ಮಾರನೆ ರಾತ್ರಿ ಅದೆಷ್ಟೋ ಮಕ್ಕಳು ಮತ್ತು ಮಹಿಳೆಯರು ರಾತ್ರಿ ಚೀರುವುದು, ಬೆಚ್ಚಿ ಬೀಳುವುದೆಲ್ಲ ಮಾಡುತ್ತಿದ್ದರಂತೆ. 

Kannada actor Vajramuni suffered from heart and kidney problems in last days srb

ನಟ ವಜ್ರಮುನಿಯಂಥ ವಿಲನ್ ಕನ್ನಡ ಚಿತ್ರಂಗಕ್ಕೆ ಮತ್ತೊಬ್ಬ ಬಂದಿಲ್ಲ. ಕನ್ನಡವನ್ನು ಬಿಟ್ಟು ಬೇರೆ ಭಾಷೆಗಳ ಚಿತ್ರಗಳಲ್ಲಿ ನಾನು ನಟಿಸುವುದಿಲ್ಲ ಎಂದು ನಟ ವಜ್ರಮುನಿ ಶಪಥ ಮಾಡಿದ್ದರಂತೆ. ಅದರಂತೆ ನಡೆದುಕೊಂಡರು ಕೂಡ, ಸಾಯುವವರೆಗೂ ಬೇರೆ ಭಾಷೆಗಳಲ್ಲಿ ನಟಿಸಲಿಲ್ಲ. ವಜ್ರಮುನಿ ನಟಿಸುತ್ತಿದ್ದ ಕಾಲದಲ್ಲಿ ಹೀರೋ ಯಾರೇ ಆಗಿರಲಿ, ವಿಲನ್ ವಜ್ರಮುನಿಯೇ ಇರಲಿ ಎಂಬ ಮಾತು ಚಾಲ್ತಿಯಲ್ಲಿತ್ತು ಎನ್ನಲಾಗಿದೆ. 10 May 1944 ರಂದು ಕನಕಪಾಳ್ಯದಲ್ಲಿ ಜನಿಸಿದ್ದ ವಜ್ರಮಿನಿ ಮೊದಲ ಹೆಸರು ಸದಾನಂದ ಸಾಗರ (Sadananda Sagara). ವಜ್ರಮುನಿ ನಟನೆಯ ಮೊಟ್ಟ ಮೊದಲ ಕನ್ನಡ ಚಿತ್ರ ಮಲ್ಲಮ್ಮನ ಪವಾಡ (Mallammana Pavada).

Kannada actor Vajramuni suffered from heart and kidney problems in last days srb

ನಾಯಕ ನಟರು ಕೂಡ ಖಳನಾಯಕ ವಜ್ರಮುನಿಯೇ ಇರಲಿ ಎಂದು ಅಪೇಕ್ಷಿಸುತ್ತಿದ್ದರಂತೆ. ಕಾರಣ, ಆಗಿನ ಕಾಲದಲ್ಲಿಯೇ ಒಂದೊಂದು ಸಿನಿಮಾಗೆ 50-60 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರೂ ಎಲ್ಲರೊಂದಿಗೂ ಸೆಟ್‌ನಲ್ಲಿ ಕೂಲ್‌ ಆಗಿ ಖುಷಿಖುಷಿಯಿಂದಲೇ ಇರುತ್ತಿದ್ದರಂತೆ ನಟ ವಜ್ರಮುನಿ.

ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!

ಅದೆಷ್ಟೋ ಹೀರೋಗಳಿಗಿಂತ ಹೆಚ್ಚು ಸಂಭಾವನೆ (ಆಂದಿನ 60 ಸಾವಿರ ಎಂದರೆ ಇಂದು ಅದು ಕೋಟಿಗೆ ಸಮ ಎನ್ನಬಹುದು) ಪಡೆಯುತ್ತಿದ್ದರೂ ಶೂಟಿಂಗ್‌ ಸೆಟ್‌ನಲ್ಲಿ ಯಾವುದೇ ಹಮ್ಮುಬಿಮ್ಮು ತೋರಿಸದೇ ಹೊಂದಾಣಿಕೆ ಮಾಡಿಕೊಮಡು ಕೆಲಸ ಮಾಡುತ್ತಿದ್ದರಂತೆ ನಟ ವಜ್ರಮುನಿ. 

ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದಾರೆ ಡಾ ವಿಷ್ಣುವರ್ಧನ್!

ಪಾತ್ರದಲ್ಲಿ ಪಾತ್ರ ವಿಲನ್ ಆಗಿರುತ್ತದ್ದ ನಟ ವಜ್ರಮಿನು ರಿಯಲ್ ಲೈಫ್‌ನಲ್ಲಿ ತೀರಾ ಸಂಕೋಚದ, ತುಂಬಾ ಶಿಸ್ತಿನ ಮನುಷ್ಯರಾಗಿದ್ದರಂತೆ. ತಮ್ಮ ಶಿಸ್ತಿನ ಮೂಲಕ ನಟ ವಜ್ರಮುನಿ ಇತರರನ್ನು ಶಿಕ್ಷಿಸುತ್ತಿರಿಲಿಲ್ಲವಂತೆ ಎಂಬುದೂ ಕೂಡ  ಗಮನಿಸಬೇಕಾದ ಸಂಗತಿ.

ವೀಡಿಯೋ ಸಾಂಗ್ 'ಸಾರಾಂಶ'ದ ನಕಾಶೆ ನಶೆ; ಡಾನ್ಸ್ ಮೂಲಕ ಚಮಕ್‌ ಕೊಟ್ಟ ಶ್ರುತಿ ಹರಿಹರನ್!

ತಮ್ಮ ಜೀವಿತದ ಕೊನೆಗಾಲದಲ್ಲಿ ಹೃದಯ ಹಾಗೂ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದರಂತೆ ನಟ ವಜ್ರಮುನಿ. ಸಾಯುವ ಮುನ್ನ ಅನಾರೋಗ್ಯದಿಂದ ಸಾಕಷ್ಟು ಬಳಲಿ ಬೆಂಡಾಗಿದ್ದ ವಜ್ರಮುನಿ ಅವರು ಕೊನೆಗೆ 5 ಜನವರಿ 2006ರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಹೆಂಡತಿ ಲಕ್ಷ್ಮೀ ಹಾಗು ಮೂರು ಮಕ್ಕಳನ್ನು ಅಗಲಿದ್ದಾರೆ. 

'40 ವರ್ಷ ಆದ್ರೂ ಫಿಗರ್-ಗಿಗರ್ ಮೆಂಟೇನ್ ಮಾಡ್ಕೊಂಡು..,ಯಾರ ಬಗ್ಗೆ ಹೀಗಂದ್ರು ಅದಿತಿ ಪ್ರಭುದೇವ..!?

Latest Videos
Follow Us:
Download App:
  • android
  • ios