Raanav Gowda And Radha Bhagavati Engagement: ಅಮೃತಧಾರೆ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿಯಿಂದ ರಿಯಲ್ ಆಗಿ ಎಂಗೇಜ್ ಆಗಿದೆ. ಹೌದು, ನಟ ರಾಣವ್ ಗೌಡ, ರಾಧಾ ಭಗವತಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ರಿಯಲ್ ಆಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಹ್ಯಾಂಗೋವರ್‌ನಲ್ಲಿ ಇಡೀ ನಾಡು ಇರುವಾಗ ಇನ್ನೊಂದು ಕಿರುತೆರೆ ಜೋಡಿ ಎಂಗೇಜ್ ಆಗಿರೋ ನ್ಯೂಸ್ ನೀಡಿದೆ. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ಹಾಗೂ ಮಲ್ಲಿ ಪಾತ್ರ ತುಂಬ ಫೇಮಸ್. ಜಯದೇವ್ ಹಾಗೂ ಮಲ್ಲಿ ಪಾತ್ರಧಾರಿ ಈಗ ಗುಡ್‌ನ್ಯೂಸ್ ನೀಡಿದ್ದಾರೆ. ಇವರಿಬ್ಬರು ರಿಯಲ್ ಆಗಿ ಎಂಗೇಜ್ ಆಗಿದ್ದಾರೆ.
ಜೆಡಿ, ಮಲ್ಲಿ ಪಾತ್ರಧಾರಿಗಳು
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ಪಾತ್ರದಲ್ಲಿ ರಾಣವ್ ಗೌಡ ಅವರು ನಟಿಸುತ್ತಿದ್ದಾರೆ. ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸಿದ್ದರು. ಆಮೇಲೆ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದರು.
ಸೀರಿಯಲ್‌ನಲ್ಲಿ ಮೋಸ ಮಾಡ್ತಾನೆ
ಆರಂಭದಲ್ಲಿ ಜಯದೇವ್ ಅವರು ಮಲ್ಲಿಯನ್ನು ಪ್ರೀತಿಸಿ, ಗರ್ಭಿಣಿ ಮಾಡುತ್ತಾನೆ. ಆಮೇಲೆ ಭೂಮಿ ಹಠಕ್ಕೆ ಬಿದ್ದು ಅವಳನ್ನು ಮದುವೆಯಾಗುತ್ತಾನೆ. ಆಮೇಲೂ ಕೂಡ ಮಗುವನ್ನು ಗರ್ಭಪಾತ ಮಾಡಿಸಿ, ಇನ್ನೊಬ್ಬಳನ್ನು ಮದುವೆ ಆಗುತ್ತಾನೆ. ರೀಲ್‌ನಲ್ಲಿ ಇವರಿಬ್ಬರು ಒಂದಾಗಿಲ್ಲ, ಆದರೆ ರಿಯಲ್ ಆಗಿ ಒಂದಾಗಿದ್ದಾರೆ.
ಹೀರೋಯಿನ್ ಆಗಿರೋ ರಾಧಾ ಭಗವತಿ
ರಾಧಾ ಭಗವತಿ ಅವರು ಅಮೃತಧಾರೆ ಧಾರಾವಾಹಿ ಬಿಟ್ಟು, ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಪೋಷಕ ಪಾತ್ರ ಬಿಟ್ಟು, ಅವರು ಹೀರೋಯಿನ್ ಆಗುವ ಅವಕಾಶವನ್ನು ಆಯ್ಕೆ ಮಾಡಿಕೊಂಡಿದ್ದರು.
ಎಂಗೇಜ್ ಆಗಿರೋ ಜೋಡಿ
ಸೀರಿಯಲ್‌ನಿಂದ ಹೊರಗಡೆ ಬಂದಮೇಲೂ ಕೂಡ ರಾಣವ್ ಗೌಡ, ರಾಧಾ ಭಗವತಿ ಅವರು ಸ್ನೇಹದಿಂದ ಇದ್ದರು. ಆಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಈ ವಿಷಯ ಚಿತ್ರರಂಗದ ಕೆಲವರಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ. ಈಗ ರಿಯಲ್ ಆಗಿ ಎಂಗೇಜ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.
ಅನೇಕರಿಂದ ಶುಭಾಶಯಗಳ ಸುರಿಮಳೆ
ಫೈನಲೀ ಎಂದು ಬರಹದೊಂದಿಗೆ ರಾಣವ್ ಗೌಡ ಹಾಗೂ ರಾಧಾ ಭಗವತಿ ಅವರು ಎಂಗೇಜ್‌ಮೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿ ಸುಜಾತಾ ಅಕ್ಷಯ್ ಸೇರಿ ಅನೇಕರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಜೆಡಿ ಹಾಗೂ ಮಲ್ಲಿ ಕೊನೆಗೂ ಒಂದಾದರು, ಈ ಜೋಡಿ ತುಂಬ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.


