Asianet Suvarna News Asianet Suvarna News

ನಿಧನಕ್ಕೆ ಮೂರು ದಿನ ಮೊದ್ಲು ಮಾಲಾಶ್ರೀಗೆ ಸಿಕ್ಕಿದ್ರಂತೆ ಪುನೀತ್ ; ಎಂಥ ಮಾತು ಹೇಳಿದ್ರು ನೋಡಿ ಅಪ್ಪು!

ರಾಮು ನಿಧನದ ಶೋಕ ಹಾಗು ನಟ ಪುನೀತ್ ಮರಣಗಳ ಬಗ್ಗೆ ನಟಿ ಮಾಲಾಶ್ರೀ ಖಾಸಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಮು ಅನಿರೀಕ್ಷಿತ ನಿಧನದಿಂದ ಸಹಜವಾಗಿಯೇ ಮಾಲಾಶ್ರೀ ಇಡೀ ಕುಟುಂಬ ಕಂಗೆಟ್ಟಿತ್ತು...

Puneeth Rajkumar meets me before he expire three days only says actress Malashri
Author
First Published Jan 31, 2024, 4:18 PM IST

ನಟಿ ಮಾಲಾಶ್ರೀ ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡಿದ್ದು ಬಹುತೇಕ ಎಲ್ಲರಿಗೂ ಗೊತ್ತಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಹಾಗೂ ಕನ್ನಡದ ಸ್ಟಾರ್ ನಟಿ ಮಾಲಾಶ್ರೀ ಪತಿ ರಾಮು (Ramu) ಅವರು 6 ಏಪ್ರಿಲ್ 2021ರಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ಮಾಲಾಶ್ರೀ (Malashri) ಹಾಗೂ ಎರಡು ಮಕ್ಕಳು ರಾಮು ಅವರನ್ನು ಕಳೆದುಕೊಂಡು ಕಂಗಾಲಾಗಿ, ಈಗ ನಿಧಾನಕ್ಕೆ ಮತ್ತೆ ಸಹಜ ಜೀವನಕ್ಕೆ ಮರಳುತ್ತಿರುವುದು ಎಲ್ಲವೂ ಕನ್ನಡಿಗರಿಗೆ ಗೊತ್ತಿದೆ. 

ಅದೇ ವರ್ಷ 2021ರಲ್ಲಿ ಕನ್ನಡದ ಪವರ್ ಸ್ಟಾರ್ ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಸಹ ಅಕಾಲಿಕ ನಿಧನ ಹೊಂದಿದರು. ನಟ ಅಪ್ಪು (29 October 2021) ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದು, ಇಂದಿಗೂ ಕರುನಾಡು ಜನರು ಅವರನ್ನು ಮರೆಯದೇ ದಿನನಿತ್ಯವೂ ನೆನಪಿಸಿಕೊಳ್ಳುತ್ತಿರುವುದು ನಡೆದೇ ಇದೆ. ಈ ಮಧ್ಯೆ ನಟಿ ಮಾಲಾಶ್ರೀ ಅವರು ತಮ್ಮ ಗಂಡ ರಾಮು ಅವರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿರುವ ಕಾಲದಲ್ಲಿ,  6 ತಿಂಗಳು ಬಳಿಕ ಸ್ಯಾಂಡಲ್‌ವುಡ್ ಸ್ಟಾರ್ ನಟ, ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನದ ಸುದ್ದಿ ಸಿಡಿಲಿನಿಂತ ಎರಗಿತು. 

ರಾಮು ನಿಧನದ ಶೋಕ ಹಾಗು ನಟ ಪುನೀತ್ ಮರಣಗಳ ಬಗ್ಗೆ ನಟಿ ಮಾಲಾಶ್ರೀ ಖಾಸಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಮು ಅನಿರೀಕ್ಷಿತ ನಿಧನದಿಂದ ಸಹಜವಾಗಿಯೇ ಮಾಲಾಶ್ರೀ ಇಡೀ ಕುಟುಂಬ ಕಂಗೆಟ್ಟಿತ್ತು. ಅಂಥ ದುಃಖದ ಸಮಯದಲ್ಲಿ ನಟಿ ಮಾಲಾಶ್ರೀ ಎಲ್ಲೂ ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲವಂತೆ. ಸಿನಿಮಾ ಹಾಗಿರಲಿ, ಆಪ್ತರ ಕುಟುಂಬಗಳ ಫಂಕ್ಷನ್‌ಗಳನ್ನೂ ಮಾಲಾಶ್ರೀ ಅಟಂಡ್‌ ಆಗುವ ಆಸಕ್ತಿ ಹೊಂದಿರಲಿಲ್ಲವಂತೆ. 

ಮಂಡ್ಯದ ಹೊಟೆಲ್ ಮ್ಯಾನೇಜರ್ ಮದುವೆಯಾದ್ರು ಪಂಡರಿಬಾಯಿ; ಸಾಯವವರೆಗೂ ಕಣ್ಣೀರಿನಲ್ಲೇ ಕೈ ತೊಳೆದ್ರು..!

ಆದರೆ, ಬರೋಬ್ಬರಿ ಆರು ಬಳಿಕ ಮಾಲಾಶ್ರೀ ಮದುವೆಯೊಂದನ್ನು ಅಟೆಂಡ್ ಮಾಡಿದ್ದರಂತೆ. ಅಂದು ನಟ ಪುನೀತ್ ಸಹ ಬಂದಿದ್ದು, ಮಾಲಾಶ್ರೀ ಅವರನ್ನು ಹಗ್‌ ಮಾಡಿ ನಟ ಪುನೀತ್ ರಾಜ್‌ಕುಮಾರ್ ಅವರು 'ಅದ್ರಿಂದ ಹೊರಗೆ ಬರಲೇಬೇಕು ನೀವು.. ನೀವು ಮದುವೆಗೆ ಬಂದಿದ್ದು ತುಂಬಾ ಸಂತೋಷ ತಂದಿದೆ ನಂಗೆ. ಮತ್ತೆ ಮೊದ್ಲಿನ ಥರ ಆಗ್ಬೇಕು ನೀವು, ದುರ್ಗಿ, ಚಾಮುಂಡಿ ತರ ಇರ್ಬೇಕು ಎಂದು ಹೇಳಿದ್ದರು' ಎಂದು ನಟ ಪುನೀತ್ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ ಮಾಲಾಶ್ರೀ. 

ವೀಡಿಯೋ ಸಾಂಗ್ 'ಸಾರಾಂಶ'ದ ನಕಾಶೆ ನಶೆ; ಡಾನ್ಸ್ ಮೂಲಕ ಚಮಕ್‌ ಕೊಟ್ಟ ಶ್ರುತಿ ಹರಿಹರನ್!

ಅಷ್ಟೇ ಅಲ್ಲ, 'ರಾಮು ಅವ್ರು ಎಲ್ಲೂ ದೂರ ಹೋಗಿಲ್ಲ, ನಮ್ಮ ಜತೆಯಲ್ಲೇ ಇದ್ದಾರೆ. ನೀವು ಅವ್ರ ನೆನಪಲ್ಲೇ ಮನೆಯಲ್ಲೆ ಕೂತ್ಕೋಬೇಡಿ, ಮನೆಯಿಂದ ಹೊರಗಡೆ ಬನ್ನಿ. ಅವ್ರು ನಮ್ಮ ಜತೆನಲ್ಲೇ ಇದ್ದಾರೆ, ನಾವು ಮಾಡೋ ಕೆಲಸ ಅವರೂ ನೋಡಿ ಖುಷಿ ಪಡಲಿ' ಎಂದಿದ್ದರಂತೆ ನಟ ಪುನೀತ್ ರಾಜ್‌ಕುಮಾರ್. ಆದರೆ ಮುಂದಿನ ಆರು ತಿಂಗಳು ಬಿಟ್ಟು ನಟ ಪುನೀತ್ ಸಾವಿನ ಸುದ್ದಿ ಮಾಲಾಸ್ರೀ ಕಿವಿಗೆ ಬೇಡವೆಂದರೂ ಅಪ್ಪಳಿಸಿಬಿಟ್ಟಿತು. 

ಕನ್ನಡ ಚಿತ್ರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದಾರೆ ಡಾ ವಿಷ್ಣುವರ್ಧನ್!

ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಟಿ ಮಾಲಾಶ್ರೀ ತೀವ್ರ ಶಾಕ್‌ಗೆ ಒಳಗಾಗಿದ್ದರಂತೆ. 'ಆವತ್ತು ಬೆಳಿಗ್ಗೆಯಿಂದ ರಾತ್ರಿ ತನಕ ನಾನು ಫುಲ್ ಬ್ಲಾಂಕ್' ಆಗಿಬಿಟ್ಟಿದ್ದೆ. ನನಗೆ ಏನೂ ಮಾಡಲು ಆಗುತ್ತಿರಲಿಲ್. ಹಲವು ಮಾಧ್ಯಮಗಳು ನನಗೆ ಕಾಲ್ ಮಾಡಿದರೂ ನಾನು ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಅದೇ ವರ್ಷ ಅಂದರೆ, 2021ರ ಕನ್ನಡ ಸಿನಿಮಾ ಉದ್ಯಮದ ಪಾಲಿಗೆ ನಿಜವಾಗಿಯೂ ಕೆಟ್ಟದ್ದು ತಂದ ವರ್ಷ. ಆ ವರ್ಷದಲ್ಲಿ ಮಹಾನ್ ನಟ ಪುನೀತ್, ನಿರ್ಮಾಪಕರಾಗಿದ್ದ ನನ್ನ ಪತಿ ರಾಮು ನಿಧನರಾಗಿದ್ದಾರೆ' ಎಂದಿದ್ದಾರೆ ಮಾಲಾಶ್ರೀ. 

Puneeth Rajkumar meets me before he expire three days only says actress Malashri
 

Follow Us:
Download App:
  • android
  • ios