ಕನ್ನಡ ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಾಗದ ಅಪೂರ್ವ ದಾಖಲೆ ಮಾಡಿದ್ದಾರೆ ಡಾ ವಿಷ್ಣುವರ್ಧನ್!

ಶಾಕಿಂಗ್ ಸಂಗತಿ ಏನೆಂದರೆ 47 ವರ್ಷದ ಹಿಂದಿನ ಚಿತ್ರವನ್ನು ಮತ್ತೆ 45 ವರ್ಷಗಳ ಬಳಿಕ ಬಿಡುಗಡೆ ಮಾಡಿದಾಗ ಅದೇ ಚಿತ್ರದ ಜತೆ ಇನ್ನೂ ಮೂರು ಹೊಸ ಚಿತ್ರಗಳು ಅಂದು ಬಿಡುಗಡೆಯಾಗಿದ್ದವು. ಆದರೆ, ಹೊಸ 3 ಚಿತ್ರಗಳ ಒಂದು ವಾರದ ಕಲೆಕ್ಷನ್‌ಗಿಂತ ನಾಗರಹಾವು ಚಿತ್ರದ ಒಂದು ದಿನದ ಕಲೆಕ್ಷನ್ ಹೆಚ್ಚಾಗಿತ್ತು.

Actor Vishnuvardhan and Puttanna Kanagal directed Nagarahavu movie released again in 2018 and creates record

ಕನ್ನಡ ಚಿತ್ರರಂಗದಲ್ಲಿ ಹಲವಾರು ಹೊಸ ದಾಖಲೆಗಳು ಸೃಷ್ಟಿಯಾಗಿವೆ. ಆದರೆ, ಅವುಗಳಲ್ಲಿ ಹೆಚ್ಚು ಸುದ್ದಿಯಾಗಿಲ್ಲ. ಉದ್ದೇಶಪೂರ್ವಗಿ ಆಗಿಲ್ಕಲ ಅಂತೇನಲ್ಲ, ಅಂದಿನ ಸ್ಥಿತಿಗತಿ ಆಧರಿಸಿ ಸುದ್ದಿ ಕೆಲವು ಸುದ್ದಿಗಳು ತೀರಾ ವೈರಲ್ ಆಗಿರುವುದಿಲ್ಲ. ಅಂಥ ಅಚ್ಚರಿಯ ಸುದ್ದಿಯೊಂದು ಇಲ್ಲಿದೆ. ಅದೇನೆಂದರೆ ಕನ್ನಡದ ಖ್ಯಾತ ನಟ ಡಾ ವಿಷ್ಣುವರ್ಧನ್ (Dr Vishnuvardhan) ಅಭಿನಯ ಹಾಗು ಮೇರು ನಿರ್ದೇಶಕ ಪಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರವು ಕನ್ನಡ ಇಂಡಸ್ಟ್ರಿಯಲ್ಲಿ ಈ ಮೊದಲು ಯಾವ ಚಿತ್ರವೂ ಮಾಡಿರದ ದಾಖಲೆ ಮೆರೆದಿದೆ. 

ಹೌದು, ಕನ್ನಡದ ಸ್ಟಾರ್ ನಟರಾಗಿದ್ದ ವಿಷ್ಣುವರ್ಧನ್ (Actor Vishnuvardhan) ನಾಯಕತ್ವದ ನಾಗರಹಾವು ಚಿತ್ರವು 50 ವರ್ಷಗಳ ಹಿಂದೆ (29 December 1972) ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿತ್ತು. ಕಪ್ಪ-ಬಿಳುಪು ಕಾಲವನ್ನು ದಾಟಿ ಬಣ್ಣದ ಕಾಲದಲ್ಲಿ ಬಂದಿದ್ದ ಆ ಚಿತ್ರವನ್ನು 45 ವರ್ಷಗಳ ಬಳಿಕ (20 July 2018) ಡಿಜಿಟಲ್ ರೂಪದಲ್ಲಿ ಮತ್ತೆ ಬಿಡುಗಡೆ ಮಾಡಲಾಗಿತ್ತು. ಅಚ್ಚರಿ ಎಂದರೆ ಮತ್ತೆ ಬಿಡುಡಗೆಯಾದ ನಾಗರಹಾವು ಇನ್ನೊಮ್ಮೆ ಸೂಪರ್ ಹಿಟ್ ದಾಖಲಿಸಿ ಹೊಸ ದಾಖಲೆ ಬರೆದಿತ್ತು. ನಟ ವಿಷ್ಣುವರ್ಧನ್ (Vishnuvardhan) ಈ ಮೂಲಕ ಹೊಸ ದಾಖಲೆಗೆ ಪಾತ್ರರಾದರು.

ಇಷಾ ಕೊಪ್ಪೀಕರ್-ಟಿಮ್ಮಿ ನಾರಂಗ ಮಧ್ಯೆ ಪ್ರೀತಿ ಜಿಂಟಾ ಹೆಸರೇಕೆ ಬಂತು; ರಿಯಲ್ ಕಥೆ ಶುರುವಾಗಿದ್ದೇ ಅಲ್ಲಿ..!

ಶಾಕಿಂಗ್ ಸಂಗತಿ ಏನೆಂದರೆ 47 ವರ್ಷದ ಹಿಂದಿನ ಚಿತ್ರವನ್ನು ಮತ್ತೆ 45 ವರ್ಷಗಳ ಬಳಿಕ ಬಿಡುಗಡೆ ಮಾಡಿದಾಗ ಅದೇ ಚಿತ್ರದ ಜತೆ ಇನ್ನೂ ಮೂರು ಹೊಸ ಚಿತ್ರಗಳು ಅಂದು ಬಿಡುಗಡೆಯಾಗಿದ್ದವು. ಆದರೆ, ಹೊಸ 3 ಚಿತ್ರಗಳ ಒಂದು ವಾರದ ಕಲೆಕ್ಷನ್‌ಗಿಂತ ನಾಗರಹಾವು ಚಿತ್ರದ ಒಂದು ದಿನದ ಕಲೆಕ್ಷನ್ ಹೆಚ್ಚಾಗಿದ್ದು, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು ಎನ್ನಲಾಗಿದೆ. ಅಂದಹಾಗೆ, 2018ರಲ್ಲಿ ಬಿಡುಗಡೆಯಾಗಿದ್ದ ನಾಗರಹಾವು 169 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಎಲ್ಲಾ ಕಡೆ ಹೌಸ್‌ ಫುಲ್ ಪ್ರದರ್ಶನ ದಾಖಲಿಸಿತ್ತು. 

ಮಂಡ್ಯದ ಹೊಟೆಲ್ ಮ್ಯಾನೇಜರ್ ಮದುವೆಯಾದ್ರು ಪಂಡರಿಬಾಯಿ; ಸಾಯವವರೆಗೂ ಕಣ್ಣೀರಿನಲ್ಲೇ ಕೈ ತೊಳೆದ್ರು..!

ಅಂದು ನಾಗರಹಾವು ರೀ ರೀಲೀಸ್ ಆಗಿದ್ದಾಗ, ನರ್ತಕಿ ಥೀಯೇಟರ್‌ನಲ್ಲಿ ಚಿತ್ರವನ್ನು 6 ದಿನಗಳಿಗೆ ಮೊದಲೇ ಬುಕ್ ಮಾಡಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಏಕೆಂದರೆ, ಇಂದಿನ ಹಲವು ಸ್ಟಾರ್‌ಗಳ ಚಿತ್ರಗಳೇ ಒಂದು ವಾರಕ್ಕೆ ಬುಕ್ ಆಗುವುದು ಕಷ್ಟ. ಅಂಥದ್ದರಲ್ಲಿ 45 ವರ್ಷದ ಹಿಂದಿನ ಚಿತ್ರವನ್ನು ಬಿಡುಗಡೆ ಮಾಡಿದಾಗ ಅಂಥ ರೆಸ್ಪಾನ್ಸ್ ಬಂದಿತ್ತು. ಒಟ್ಟಿನಲ್ಲಿ, ನಟ ಡಾ ವಿಷ್ಣವರ್ಧನ್ ಹೆಸರಲ್ಲಿ ಯಾರೂ ಮಾಡಿರದ ದಾಖಲೆಯೊಂದು ನಿರ್ಮಾಣವಾಗಿದೆ.

ಅಪ್ಪನ ಮಾತು ಕೇಳ್ದೇ ಹದಿನೈದು ವರ್ಷ ನರಕ ಅನುಭವಿಸಿದೆ; ಸಿಂಧು ಮದ್ವೆಯಾಗಿದ್ದ ರಘುವೀರ್ ಸತ್ತೇ ಹೋಗ್ಬಿಟ್ರು!  

Latest Videos
Follow Us:
Download App:
  • android
  • ios