Asianet Suvarna News Asianet Suvarna News

KGF Chapter 2: ರಾಕಿ ಡೋಂಟ್ ಲೈಕ್ ರೆಕಾರ್ಡ್: ರೆಕಾರ್ಡ್ ಲೈಕ್ಸ್ ರಾಕಿ!

ಬಾಲಿವುಡ್ ಬಲಾಢ್ಯರ ಸಿನಿಮಾ ಕೂಡ ಮಾಡಿರದಂತಹ ದೊಡ್ಡ ದಾಖಲೆಯೊಂದನ್ನ 'ಕೆಜಿಎಫ್ ಚಾಪ್ಟರ್ 2' ಮಾಡಿದೆ. ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಗಲ್ಲಾಪಟ್ಟಿಗೆ ಅಕ್ಷರಶಃ ಶೇಕ್ ಆಗಿದೆ.

impressed is the world film industry for the Prashant Neel KGF 2 experiment gvd
Author
Bangalore, First Published Apr 16, 2022, 4:59 PM IST

4 ವರ್ಷಗಳ ಹಿಂದೆ. ಅಂದರೆ 2018ರ ಡಿಸೆಂಬರ್ 21ರಂದು ರಿಲೀಸ್ ಆಗಿದ್ದ 'ಕೆಜಿಎಫ್ ಚಾಪ್ಟರ್ 1' (KGF) ಮೇಲೆ, ಜನ ಯಾವ ನಿರೀಕ್ಷೆಗಳನ್ನೂ ಇಟ್ಕೊಂಡಿರ್ಲಿಲ್ಲ. ಹಾಗಾಗಿನೇ ಅಂದಿನ ಆ ಆರ್ಭಟ, ಆ ಅಬ್ಬರ ಜನಕ್ಕೆ ಅಚ್ಚು ಮೆಚ್ಚಾಗಿತ್ತು. ಆದರೆ ಚಾಪ್ಟರ್ 2 ಹಾಗಲ್ಲ. ಈ ಸಿನಿಮಾ ಮೇಲೆ ಬರೀ ನಾವಷ್ಟೇ ಅಲ್ಲ, ನಮ್ಮ ಅಕ್ಕಪಕ್ಕದ ರಾಜ್ಯದವರೂ ಅದಕ್ಕಿಂತಾ ಮುಖ್ಯವಾಗಿ, ಬಾಲಿವುಡ್ (Bollywood) ಮಂದಿ ನಿರೀಕ್ಷೆ ಇಟ್ಕೊಂಡಿದ್ದಾರೆ. ಈ ಸಿನಿಮಾದ ಒಂದು ಸೀಕ್ರೆಟ್ ಏನು ಅಂದ್ರೆ, ಯಾವ ಸಿನಿಮಾ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸುತ್ತೋ, ಅಂಥಾ ಸಿನಿಮಾ ಸದ್ದೇ ಇಲ್ಲದೆ ಸೈಡಿಗೆ ಹೋಗ್ಬಿಡುತ್ತೆ. ಅಂತ ಎಷ್ಟೋ ಉದಾಹರಣೆಗಳು ಕಣ್ಮುಂದೆ ಇದಾವೆ. 

ಆದರೆ ಜನ ಕೆಜಿಎಫ್ ಮೇಲೆ ಏನೇನು ನಿರೀಕ್ಷೆ ಇಟ್ಕೊಂಡಿದ್ರೋ, ಆ ನಿರೀಕ್ಷೆಗಳನ್ನೂ ಮೀರಿ ಸಿನಿಮಾ ಮೂಡಿಬಂದಿದೆ. ನೀವು ಎಷ್ಟೇ ಎಕ್ಸ್ಪೆಕ್ಟೇಷನ್ ಇಟ್ಕೊಂಡ್ರು, ಅದರ ಡಬಲ್ ರಿಟರ್ನ್ ನಿಮಗೆ ಸಿಗೋದಂತೂ ಪಕ್ಕಾ. ಇದು ಅಭಿಮಾನಿಗಳು ಹೇಳ್ತಾ ಇರೋ ಮಾತು. ದೇಶದ ಸಿನಿಮಾ ಹಿಸ್ಟರಿಯಲ್ಲೇ ಇಲ್ಲೀ ತನಕ ಯಾವ ಸಿನಿಮಾನೂ ಮಾಡಿರದ ಸಾಧನೆಯನ್ನ 'ಕೆಜಿಎಫ್ ಚಾಪ್ಟರ್ 2' (KGF Chapter 2) ಮಾಡಿದೆ. ಈ ಹಿಂದೆ 'ಬಾಹುಬಲಿ ದಿ ಕನ್ಕ್ಲೂಷನ್' ಮಾಡಿದ ಸಾಧನೆಯನ್ನೇ ನೋಡಿ, ಇದು ಯಾರೂ ಮುರಿಯಲಾಗದ ಸಾಧನೆ ಅಂತ ಮಾತಾಡಿದರು. ಅದಾದ್ಮೇಲೆ, ಅದೇ ಸಿನಿಮಾದ ನಿರ್ದೇಶದ, ಜಕಣ, ರಾಜಮೌಳಿ ಅವರ 'ಆರ್‌ಆರ್‌ಆರ್' ಬಾಹುಬಲಿ ದಾಖಲೆಯನ್ನ ಸೈಡಿಗೆ ತಳ್ಳಿತ್ತು. ಈಗ ಆ ದಾಖಲೆಗಳನ್ನೆಲ್ಲಾ ಬಲಿ ಹಾಕೋದಕ್ಕೆ ರಾಕಿ ಎಂಟ್ರಿ ಕೊಟ್ಟಿದ್ದಾರೆ.

ಬಾಲಿವುಡ್ ಬಲಾಢ್ಯರ ಸಿನಿಮಾ ಕೂಡ ಮಾಡಿರದಂತಹ ದೊಡ್ಡ ದಾಖಲೆಯೊಂದನ್ನ ಕೆಜಿಎಫ್ ಚಾಪ್ಟರ್ 2 ಮಾಡಿದೆ. ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಗಲ್ಲಾಪಟ್ಟಿಗೆ ಅಕ್ಷರಶಃ ಶೇಕ್ ಆಗಿದೆ. ಕೆಜಿಎಫ್-2 ಸಿನಿಮಾ ಬಿಡುಗಡೆ ಆಗುತ್ತೆ ಅಂದಾಗ ಬಾಲಿವುಡ್ ಬಿಗ್ ಸ್ಟಾರ್‌ಗಳ ಎದೆಯಲ್ಲಿ ನಡುಕ ಶುರುವಾಗಿತ್ತು. ಹಿಂದಿಯ ಕಲೆಕ್ಷನ್ ವಿಚಾರದಲ್ಲಿ ನಮ್ಮ ಸಿನಿಮಾಗಳನ್ನ ಮೀರಿಸೋಕೆ ಯಾರಿಂದ್ಲು ಸಾಧ್ಯವಿಲ್ಲ ಅಂತಿದ್ದವರು ಇವತ್ತು ಬಾಯ್ ಮೇಲೆ ಬೆರಳಿಟ್ಟುಕೊಳ್ಳೋ ಹಾಗೆ ಮಾಡಿದ್ದಾರೆ ರಾಕಿ ಭಾಯ್. ಯಾಕಂದ್ರೆ ಯಶ್ ಒಂದೇ ಹೊಡೆತಕ್ಕೆ ಒಂದೇ ದಿನದಲ್ಲಿ ಬರೀ ಹಿಂದಿಯಲ್ಲಿನೇ ಬರೋಬ್ಬರಿ 53.95 ಕೋಟಿ ಕಲೆಕ್ಷನ್ ಮಾಡಿದ್ದಾರೆ. ಈ ಹಿಂದೆ, ಹೃತಿಕ್ ರೋಷನ್ ಹಾಗು ಟೈಗರ್ ಶ್ರಾಫ್ ನಟಿಸಿದ್ದ ವಾರ್ ಸಿನಿಮಾ, ಹಿಂದಿಯಲ್ಲಿ 51.60 ಕೋಟಿ ಕಲೆಕ್ಷನ್ ಮಾಡೋ ಮೂಲಕ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಅನ್ನೋ ಕಿರೀಟ ತೊಟ್ಟಿತ್ತು. 

KGF 2 Collection: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ರಾಕಿಭಾಯ್ ಆರ್ಭಟ

ನಂತರದ ಸ್ಥಾನ ಅಮಿತಾಭ್ ಬಚ್ಚನ್, ಆಮಿರ್ ಖಾನ್ ನಟನೆಯ ಥಗ್ಸ್ ಆಫ್ ಹಿಂದೂಸ್ಥಾನ್ ಸಿನಿಮಾ ಇತ್ತು. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 50.75 ಕೋಟಿ ರೂ. ಇವೆರಡೂ ಹಿಂದಿ ಸಿನಿಮಾಗಳು ಮತ್ತು ಬಿಟೌನ್‌ನ ಬಿಗ್ ಸ್ಟಾರ್ ನಟರಿದ್ದ ಬಿಗ್ ಬಜೆಟ್‌ ಸಿನಿಮಾಗಳು. ಹಾಗಾಗಿ ಹಿಂದಿ ಮಾರುಕಟ್ಟೆಯಲ್ಲಿ ಆ ಪ್ರಮಾಣದ ಗಳಿಕೆ ಮೊದಲ ದಿನವೇ ಮಾಡಿದ್ದರಲ್ಲಿ ಅಂಥ ಅಚ್ಚರಿ ಏನಿಲ್ಲ. ಆದರೆ ಈಗ ಯಾವ ಬ್ಯಾಕ್ ಗ್ರೌಂಡೂ ಇಲ್ಲದ, ಗಾಡ್ ಫಾದರೂ ಇಲ್ಲದ ಅಪ್ಪಟ ಕನ್ನಡ ಸಿನಿಮಾ, ಕನ್ನಡದವರ ಹೆಮ್ಮೆಯ ಸಿನಿಮಾ, 53.95 ಕೋಟಿ ಗಳಿಸೋ ಮೂಲಕ ಹಿಂದಿಯಲ್ಲಿ ಫಸ್ಟ್ ಡೇ ಅತಿ ಹೆಚ್ಚು ಗಳಿಸಿರೋ ಮೊದಲ ಸಿನಿಮಾ ಅನ್ನೋ ಬಂಗಾರದ ಕಿರೀಟವನ್ನ ಕೆಜಿಎಫ್-2 ತನ್ನ ನೆತ್ತಿ ಮೇಲೆ ಹೊತ್ತುಕೊಂಡಿದೆ. 

ಅವತ್ತು ಅಣ್ಣಾವ್ರ ಈ ಚಿಕ್ಕಪ್ಪ ಡೈಲಾಗ್ ಹೇಗೆ ಫೇಮಸ್ಸೋ, ಇವತ್ತು ರಾಕಿಂಗ್ ಸ್ಟಾರ್ ಯಶ್ ಅವರ ದೊಡ್ಡಪ್ಪ ಡೈಲಾಗ್ ಕೆಜಿಎಫ್ ಚಾಪ್ಟರ್ 2ಯಿಂದ  ಫೇಮಸ್ ಆಗ್ತಾ ಇದೆ. ಈ ದೊಡ್ಡಪ್ಪನ ಮರ್ಮ ಸಿನಿಮಾ ನೋಡಿದೋರಿಗೆ ಗೊತ್ತಾಗಿದೆ. ನೀವಿನ್ನೂ ನೋಡಿಲ್ಲ ಅಂದ್ರೆ ಆದಷ್ಟು ಬೇಗ ನೋಡಿ. ಅಂದ ಹಾಗೆ, ಈ ದೊಡ್ಡಪ್ಪನ ದರ್ಬಾರ್ ಕನ್ನಡದ ಕೀರ್ತಿ ಪತಾಕೆ ಹಾರಿಸಿದೆ ಅಂತ ಹೇಳಿದ್ವಲ್ಲ. ಅದು ಯಾಕೆ ಅಂತ ಗೊತ್ತಾಗ್ಬೇಕು ಅಂದ್ರೆ, ಕೆಜಿಎಫ್ ಸಿನಿಮಾದ ಪ್ರಮೋಷನ್ ಟೈಮಲ್ಲಿ ನಡೆದ ಒಂದು ಘಟನೆ ನೀವು ನೋಡ್ಬೇಕು. ಕೆಜಿಎಫ್ ಬಗ್ಗೆ ಮಾತಾಡುವ ಮುನ್ನ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತಾಡ್ಬೇಕು. 

ಇಲ್ಲಿ ಬಾಲಿವುಡ್ 100, 200, 300 ಕೋಟಿ ಗಳಿಗೆ ಅಂತ  ಮಾತಾಡಿದರೆ ಕೇಳುತ್ತಿದ್ದೆವು. ಅದಾದ ಮೇಲೆ ನಮ್ಮ ದಕ್ಷಿಣ ಭಾರತಕ್ಕೆ ಬಂದರೆ, ತೆಲುಗಿನಲ್ಲಿ ಚಿರಂಜೀವಿ ಅವರದ್ದು ಇಷ್ಟು ಕಲೆಕ್ಷನ್ ಆಯ್ತು, ನಮ್ಮ ಸ್ಟಾರ್ ಹೀರೋಗಳದ್ದು ಅಷ್ಟು ಕಲೆಕ್ಷನ್ ಆಯ್ತು ಅಂತಿದ್ದರು. ಹಾಗೇ ತಮಿಳುನಾಡು ನೋಡಿದರೆ ರಜಿನಿ ಕಾಂತ್ ಅವರದ್ದು ಇಷ್ಟು ಕಲೆಕ್ಷನ್ ಆಯ್ತು, ಸ್ಟಾರ್ ಹೀರೋಗಳದ್ದೇ ಇಷ್ಟಿಷ್ಟು ಕಲೆಕ್ಟ್ ಮಾಡ್ತು ಅಂತಿದ್ದರು. ಮಲಯಾಳಂ ಕಡೆ ನೋಡಿದರೆ, ಹೊಸ ಥರ ಸಿನಿಮಾ ಮಾಡುತ್ತಾರೆ, ಕಂಟೆಂಟ್ ಬೇಸ್ಡ್ ಸಿನಿಮಾ ಮಾಡ್ತಾರೆ ಅಂತ ಆ ಸಿನಿಮಾಗಳಿಗೂ ಒಂದು ಹೆಗ್ಗಳಿಗೆ ಇತ್ತು. ಆದರೆ, ಕನ್ನಡದಲ್ಲೇನಿರುತ್ತೆ? ಬಹಳ ಸಣ್ಣ ಸಿನಿಮಾ ಮಾಡ್ತಾರೆ. 

ಅವರ ಮ್ಯಾಕ್ಸಿಮಮ್ ಬಜೆಟ್ಟೇ 5 ಕೋಟಿ, 6 ಕೋಟಿ ಅಂತ ನಮ್ಮ ಪಕ್ಕದ ಇಂಡಸ್ಟ್ರಿ ಬಗ್ಗೆ ಕೇಳುತ್ತಿದ್ದೆವು. ಆಗಲೇ ಒಬ್ಬನ ಐಡಿಯಾ, ಪ್ರಶಾಂತ್ ನೀಲ್ 'ಉಗ್ರಂ' ಎಂಬ ಸಿನಿಮಾದ ಮೂಲಕ ನನಗೆ ಪರಿಚಯನಾದ. ಆ ಸಿನಿಮಾ ನೋಡಿದಾಗಲೇ, ತುಂಬಾ ಚೆನ್ನಾಗಿದೆ ಸಿನಿಮಾ, ನಂತರ ಕನ್ನಡದಲ್ಲೊಂದು ಸಿನಿಮಾ ಮಾಡ್ತಿದ್ದಾನೆ ಎಂದು ತಿಳಿಯಿತು. ಯಾರ್ಯಾರು ಅಂದ್ರೆ, ಒಂದೊಳ್ಳೆ ಟೀಮ್ ಕಟ್ಟಿಕೊಂಡು, ಯಶ್ ನಂಥಾ ಸ್ಟಾರ್, ಆ ಹೊತ್ತಿಗೇ ಏಳೆಂಟು ಸಿನಿಮಾ ಮಾಡಿ, ಸ್ಥಾನಮಾನ ಗಳಿಸಿದ್ದ ಹೀರೋ ಜೊತೆ, ಸಿನಿಮಾ ಮೇಲೆ ಆಸಕ್ತಿಯುಳ್ಳ ಪ್ರೊಡಕ್ಷನ್ ಹೌಸ್ ಸೇರಿ ಸಿನಿಮಾ ಮಾಡ್ತಿದ್ದಾರೆ. 

KGF 2 ವೀಕ್ಷಿಸಿದ ರಜನಿಕಾಂತ್; ರಾಕಿ ಭಾಯ್ ನೋಡಿ ತಲೈವಾ ಹೇಳಿದ್ದೇನು?

ಈವರೆಗೂ ಕನ್ನಡ ಸಿನಿಮಾಗಳು ಕಲೆಕ್ಟ್ ಮಾಡಿದ್ದಕ್ಕಿಂತಾ ಡಬಲ್ ಬಜೆಟ್ ಅಂತೆ ಅಂತೊಂದು ಆಶ್ವರ್ಯ. ಆಶ್ಚರ್ಯ ಕೆಲವರಿಗೆ, ಇನ್ನೂ ಕೆಲವರಿಗೆ, `ಇವನಿಗೇನು ಹುಚ್ಚಾ?' ಅನ್ನೋ ಅನುಮಾನ. ಆದಾಯ ಇಷ್ಟೇ ಇರುವಾಗ, ಇಷ್ಟು ದೊಡ್ಡ ಮೊತ್ತ ಹಾಕಿ ಸಿನಿಮಾ ಮಾಡೋದೇನು ಅಂತ. ಅದೇ ಕೆಜಿಎಫ್ ಚಾಪ್ಟರ್-1. ಆ ಸಿನಿಮಾ ಬಿಡುಗಡೆಯಾದಾಗ, ನನ್ನನ್ನೂ ಸೇರಿ, ಈ ಸಿನಿಮಾ ಏನೋ ಬರುತ್ತೆ ಹೋಗುತ್ತೆ ಅಂದುಕೊಂಡಿದ್ದೆವು. ಆದರೆ, ಆ ಸಿನಿಮಾ ಬರ್ತಿದ್ದ ಹಾಗೇ ಎಲ್ಲರೂ ಒಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತಾಯ್ತು. ಮೊದಲನೆಯದಾಗಿ ಹ್ಯಾಟ್ಸ್ ಆಫ್ ನಿಮಗೆ.

ಇಲ್ಲಿ ಹೀಗೆ ಯಶ್ ಮುಂದೆ, ಪ್ರಶಾಂತ್ ನೀಲ್ ಮುಂದೆ ನಿಂತು, ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೀಗೆ ಮಾತಾಡಿದ್ಯಾರು ಗೊತ್ತಾ? ವೆಲಮಕುಚ ವೆಂಕಟ ರಮಣ ರೆಡ್ಡಿ. ಈ ಹೆಸರನ್ನ ನೀವಲ್ಲ. ತೆಲುಗಿನ ಜನಕ್ಕೆ ಹೇಳಿದ್ರೂ ಅದ್ಯಾರು ಅಂತ ಗೊತ್ತಾಗಲ್ಲ. ಇವರು ತೆಲುಗಿನ ಫೇಮಸ್ ಪ್ರೊಡ್ಯುಸ್, ದಿಲ್ ರಾಜು ಅಂತ. ಬಹುಶಃ ನೀವು ತೆಲುಗಿನ ಆರ್ಯ, ಬೊಮ್ಮರಿಲ್ಲು, ಫಿದಾ, ಈ ಸಿನಿಮಾಗಳ ಬಗ್ಗೆ ಕೇಳಿದೀರಿ ಅನ್ಸುತ್ತೆ.. ಅಂಥಾ ಹತ್ತಾರು ಸಿನಿಮಾಗಳಿಗೆ ಇವರೇ ಪ್ರೊಡ್ಯೂಸರ್. ಇಂಥಾ ಪ್ರೊಡ್ಯುಸರ್ ಮೈಕ್ ಕೈಗೆ ಸಿಕ್ಕಾಗ, ಕನ್ನಡ ಸಿನಿಮಾ ಇಂಡಸ್ಟ್ರಿ ಏನೇನೂ ಅಲ್ಲವೇ ಅಲ್ಲ ಅನ್ನೋ ಹಾಗೆ ಮಾತಾಡಿಬಿಟ್ಟರು.

ಕನ್ನಡದಲ್ಲೇನಿರುತ್ತೆ? ಬಹಳ ಸಣ್ಣ ಸಿನಿಮಾ ಮಾಡ್ತಾರೆ. ಅವರ ಮ್ಯಾಕ್ಸಿಮಮ್ ಬಜೆಟ್ಟೇ 5 ಕೋಟಿ, 6 ಕೋಟಿ ಅಂತ ನಮ್ಮ ಪಕ್ಕದ ಇಂಡಸ್ಟ್ರಿ ಬಗ್ಗೆ ಕೇಳುತ್ತಿದ್ದೆವು. ಬಾಲಿವುಡ್ 100ರಿಂದ 300 ಕೋಟಿ ಕಲೆಕ್ಟ್ ಮಾಡುತ್ತೆ. ತೆಲುಗಿನಲ್ಲಿ ಚಿರಂಜೀವಿ ಸಿನಿಮಾ, ತಮಿಳಿನಲ್ಲಿ ರಜನೀಕಾಂತ್ ಚಿತ್ರಗಳು ಕೂಡ ಕೋಟಿ ಕೋಟಿ ಕಲೆಕ್ಟ್ ಮಾಡ್ತಾವೆ. ಆದರೆ ಕನ್ನಡದಲ್ಲಿ ಏನಿದೆ? ಸಣ್ಣ ಸಿನಿಮಾ ಮಾಡ್ತಾರೆ. ಅವರ ಬಜೆಟ್‌ ಬರೀ ಐದಾರು ಕೋಟಿ ಅಷ್ಟೆ. ಆದರೆ ಕೆಜಿಎಫ್ ಬಂದ್ಮೇಲೆನೇ ಕನ್ನಡ ಇಂಡಸ್ಟ್ರಿ ಬಗ್ಗೆ ಎಲ್ಲರೂ ತಿರುಗಿ ನೋಡೋ ಹಾಗೆ ಆಗಿದ್ದು ಅಂತ ಓಪನ್ ಸ್ಟೇಜ್ ಅಲ್ಲಿ ಹೇಳಿದ್ರು ದಿಲ್ ರಾಜು.

ದಿಲ್ ರಾಜು ಅವರು ನಮ್ಮ ಇಂಡಸ್ಟ್ರಿ ಬಗ್ಗೆ ಮಾತಾಡಿದರು. ನಮ್ಮ ಉದ್ದೇಶವೂ ಅದೇ ಆಗಿತ್ತು. ನಮ್ಮ ತಂತ್ರಜ್ಞರೆಲ್ಲರೂ ಶ್ರಮವಹಿಸಿ, ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ. ನಮ್ಮ ಇಂಡಸ್ಟ್ರಿ ಕೂಡ ಹಲವು ಬಾರಿ 50 ಕೋಟಿಗೂ ಮೀರಿ ಗಳಿಕೆ ಕಂಡಿದೆ. ಆದರೆ ಅದು ಸಾಕಷ್ಟು ಜನಕ್ಕೆ ಗೊತ್ತಿಲ್ಲ. ಅವರೊಗದು ಏಕೆ ಗೊತ್ತಿಲ್ಲವೋ ಎಂಬ ಕಾರಣ ನನಗೆ ಗೊತ್ತಿಲ್ಲ. ತೆಲುಗಿನ ವೇದಿಕೆ ಮೇಲೆಯೇ ನಿಂತು, ತೆಲುಗು ನಿರ್ಮಾಪಕರೊಬ್ಬರಿಗೆ, ಕನ್ನಡ ಇಂಡಸ್ಟ್ರಿ ಬಗ್ಗೆ ಆಡಿದ ಕೇವಲ ಮಾತಿಗೆ ಖಡಕ್ ಉತ್ತರ ಕೊಟ್ಟಿದ್ರು ಯಶ್. ಕನ್ನಡ ಸಿನಿಮಾ ಅಂದ್ರೇನು ತಮಾಷೇನಾ? ದಿಲ್ ರಾಜು ಹೇಳಿದ ಹಾಗೆ, ಚಿರಂಜೀವಿ ಅವರ ಸಿನಿಮಾಗಳು ಕೋಟಿ ಕೋಟಿ ಕಲೆಕ್ಷನ್ ಮಾಡ್ತಾವೆ ನಿಜ. ಆದರೆ ಅಂಥಾ ಮೆಗಾಸ್ಟಾರಿಗೂ ಬ್ರೇಕ್ ಕೊಟ್ಟ ಘರಾನಾ ಮೊಗುಡು ಅನ್ನೋ ಸಿನಿಮಾ ಕೂಡ, ನಮ್ಮ ಕನ್ನಡ ಅಣ್ಣಾವ್ರ ಸಿನಿಮಾದ ರಿಮೇಕು ಅನ್ನೋದನ್ನೇ ಮರೆತರೆ ಹೇಗೆ? 

ಅಂದು ಶಾರುಖ್ ಇಂದು ವಿಜಯ್; KGF 2 ಮುಂದೆ ಹೀನಾಯ ಸೋತ 'ಬೀಸ್ಟ್'

ರಜನಿಕಾಂತ್ ಅವರು ಇವತ್ತಿಗೂ ನಿಮ್ಮ ಫೆವರೆಟ್ ಹೀರೋ ಯಾರು ಅಂದ್ರೆ ಹೇಳೋದೇ ರಾಜ್ ಕುಮಾರ್ ಅಂತ. ಅಷ್ಟೆಲ್ಲಾ ಯಾಕೆ, 2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ, 1 ಕೋಟಿ ಒಳಗೇ ತಯಾರಾದ ಸಿನಿಮಾ. ಆದರೆ ಗಳಿಸಿದ್ದು, ಬರೋಬ್ಬರಿ 75 ಕೋಟಿಗೂ ಅಧಿಕ. ಅದಾದ್ಮೇಲೆ, ಇವತ್ತಿನಿನ ತನಕ ಜೇಮ್ಸ್, ರಾಜಕುಮಾರ, ವಿಲನ್, ಅವನೇ ಶ್ರೀಮನ್ನಾರಾಯಣ, ಪೈಲ್ವಾನ್, ಕಿರಿಕ್ ಪಾರ್ಟಿ, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ಹೀಗೆ ಅದೆಷ್ಟೋ ಸಿನಿಮಾಗಳು 50 ಕೋಟಿಗೂ ಅಧಿಕ ಗಳಿಕೆ ಮಾಡಿದ್ದಾವೆ. ಇದ್ಯಾವುದರ ಬಗ್ಗೆನೂ ಗೊತ್ತೇ ಇಲ್ಲದೆ, ಮಾತಾಡಿದ ದಿಲ್ ರಾಜು ಅವರಿಗೆ ಕರೆಕ್ಟಾಗೇ ಖಡಕ್ ಉತ್ತರ ಕೊಟ್ಟಿದ್ದಾರೆ ಯಶ್. ಕನ್ನಡ ಇಂಡಸ್ಟ್ರಿ ಬಗ್ಗೆ ಒಂದು ಮಾತು ಕೇವಲವಾಗಿ ಆಡಿದ್ದಕ್ಕೇ ರಾಕಿ ಭಾಯ್ ಇಂಥಾ ಉತ್ತರ ಕೊಟ್ಟಿದ್ದಾರೆ.

ಸಿನಿಮಾ ಡೆಸ್ಕ್, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios