Asianet Suvarna News Asianet Suvarna News

KGF 2 Collection: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ರಾಕಿಭಾಯ್ ಆರ್ಭಟ

ಯಶ್‌ ನಟನೆಯ ‘ಕೆಜಿಎಫ್‌ 2’ ಚಿತ್ರ ಮೊದಲ ದಿನ ದೇಶದಲ್ಲಿ 134.5 ಕೋಟಿ ರು. ಗಳಿಕೆ ದಾಖಲಿಸಿದೆ ಮಾಡಿದೆ. ಚಿತ್ರ ನಿರ್ಮಿಸಿರುವ ಹೊಂಬಾಳೆ ಸಂಸ್ಥೆ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿದೇಶಗಳ ಗಳಿಕೆಯ ಲೆಕ್ಕಾಚಾರ ಇನ್ನೂ ಬಿಡುಗಡೆ ಆಗಿಲ್ಲ.

Yash Srinidhi Shetty Starrer Kgf chapter 2 film Collection Report gvd
Author
Bangalore, First Published Apr 16, 2022, 9:14 AM IST

ಯಶ್‌ (Yash) ನಟನೆಯ ‘ಕೆಜಿಎಫ್‌ 2’ (KGF 2) ಚಿತ್ರ ಮೊದಲ ದಿನ ದೇಶದಲ್ಲಿ 134.5 ಕೋಟಿ ರು. ಗಳಿಕೆ ದಾಖಲಿಸಿದೆ ಮಾಡಿದೆ. ಚಿತ್ರ ನಿರ್ಮಿಸಿರುವ ಹೊಂಬಾಳೆ ಸಂಸ್ಥೆ (Hombale Films) ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿದೇಶಗಳ ಗಳಿಕೆಯ ಲೆಕ್ಕಾಚಾರ ಇನ್ನೂ ಬಿಡುಗಡೆ ಆಗಿಲ್ಲ. ಉತ್ತರ ಭಾರತದಲ್ಲೂ ಈ ಚಿತ್ರ ಉತ್ತಮ ಗಳಿಕೆ ಮಾಡಿದೆ. ಒಂದೇ ದಿನದಲ್ಲಿ 63.66 ಕೋಟಿ ರು. ಹಿಂದಿ ವರ್ಶನ್‌ನಿಂದ ಸಂಗ್ರಹವಾಗಿದೆ. ಮಾಧ್ಯಮ ಸಮೀಕ್ಷೆಗಳ ಪ್ರಕಾರ ಈ ವೀಕೆಂಡ್‌ನಲ್ಲಿ ಹಿಂದಿ ವರ್ಶನ್‌ನಲ್ಲೇ 160 ರಿಂದ 170 ಕೋಟಿ ರು. ಕಲೆಕ್ಷನ್‌ ಸಾಧ್ಯತೆ ಇದೆ. 

ದಕ್ಷಿಣ ಭಾರತೀಯ ಚಿತ್ರಗಳ ಪೈಕಿ ಹಿಂದಿ ವರ್ಶನ್‌ನ ಪ್ರದರ್ಶನದಲ್ಲಿ ಅತ್ಯಧಿಕ ಗಳಿಕೆ ಮಾಡಿದ ದಾಖಲೆ ಈ ಹಿಂದೆ ‘ಬಾಹುಬಲಿ 2’ ಹೆಸರಿನಲ್ಲಿತ್ತು. ಆದರೆ ‘ಬಾಹುಬಲಿ 2’ ಎರಡು ದಿನಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಗಳಿಕೆಯನ್ನು ‘ಕೆಜಿಎಫ್‌ 2’ ಒಂದೇ ದಿನದಲ್ಲಿ ಮಾಡಿದೆ. ಅಲ್ಲದೇ ‘ಕೆಜಿಎಫ್‌ 1’ ಹಿಂದಿಯಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಗಳಿಕೆಗಿಂತ ಹೆಚ್ಚಿನ ಗಳಿಕೆಯನ್ನು ‘ಕೆಜಿಎಫ್‌ 2’ ಒಂದೇ ದಿನದಲ್ಲಿ ಸಂಪಾದಿಸಿದೆ. 

ಪ್ರಶಾಂತ್‌ ನೀಲ್‌ ನಿರ್ದೇಶನದ, ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರದ ಪ್ರದರ್ಶನ ಸಂಖ್ಯೆ ತಮಿಳುನಾಡಿನಲ್ಲಿ ಎರಡನೇ ದಿನ ಜಾಸ್ತಿಯಾಗಿದೆ. ವಾರಾಂತ್ಯದಲ್ಲಿ ಕೆಜಿಎಫ್‌ 2 ಮತ್ತಷ್ಟು ದಾಖಲೆಗಳನ್ನು ಬರೆಯಲಿದೆ. ‘ಕೆಜಿಎಫ್‌ 2’ ಹಾಡುಗಳು ಲಹರಿ ಹಾಗೂ ಟಿ ಸೀರೀಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, 100 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ಅಲ್ಲಿಯೂ ದಾಖಲೆ ಸೃಷ್ಟಿ ಮಾಡಿದೆ.

KGF 2 Film Review: ನೆತ್ತರಲ್ಲಿ ಬರೆದ ಸುವರ್ಣ ಯುಗದ ಚರಿತ್ರೆ

ಅಂದಹಾಗೆ ಕೆಜಿಎಫ್-1 ಹಿಂದಿಯಲ್ಲಿ 44.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಮೊದಲ ಭಾಗದ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ಹಿಂದಿ ಭಾಗದಲ್ಲಿ ಕೆಜಿಎಫ್-2 ಚಿತ್ರಕ್ಕೆ ಭಾರಿ ಬೇಡಿಕೆ ಇತ್ತು. ಅಭಿಮಾನಿಗಳ ಕ್ರೇಜ್ ಕೂಡ ಹಾಗೆ ಇತ್ತು. ಅದರಂತೆ ಕಲೆಕ್ಷನ್ ವಿಚಾರದಲ್ಲೂ ಭರ್ಜರಿಯಾಗಿದೆ. ಹೃತಿಕ್ ರೋಷನ್ ನಟನೆಯ ವಾರ್ ಸಿನಿಮಾ 51.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ 50.57 ಕೋಟಿ ರೂ ಬಾಚಿಕೊಂಡಿತ್ತು. ಇದೀಗ ಕೆಜಿಎಫ್-2ಈ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ 2500 ಶೋ: ಕರ್ನಾಟಕದಲ್ಲಿಯೇ ಸುಮಾರು 2500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ಅದರಿಂದಲೇ ಸುಮಾರು ರು.25 ಕೋಟಿ ಕಲೆಕ್ಷನ್‌ ಆಗಿದೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ಮೊದಲ ದಿನ ಈ ಮಟ್ಟದ ಗಳಿಕೆ ಕಂಡ ದಾಖಲೆ ಬರೆದಿದೆ. ಕೆಲವು ಕಡೆ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಅಭಿಮಾನಿಗಳು ನಿಂತುಕೊಂಡೇ ಸಿನಿಮಾ ನೋಡಿದ್ದಾರೆ. ‘ಕೆಜಿಎಫ್‌ 2’ ಜೊತೆಗೆ ತಮಿಳಿನ ವಿಜಯ್‌ ಅವರ ‘ಬೀಸ್ಟ್‌’ ಸಿನಿಮಾ ತೆರೆ ಕಂಡಿದ್ದು, ಮೊದಲ ದಿನವೇ ಅಭಿಮಾನಿಗಳ ನೀರಸ ಪ್ರತಿಕ್ರಿಯೆಯಿಂದಾಗಿ ‘ಕೆಜಿಎಫ್‌ 2’ ಸಿನಿಮಾ ಇನ್ನಷ್ಟುಹೆಚ್ಚು ಜನ ನೋಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಕನ್ನಡದ ಸಿನಿಮಾ ‘ಕೆಜಿಎಫ್‌ 2‘ ಸಿನಿಮಾ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸತೊಂದು ಅಧ್ಯಾಯ ತೆರೆದಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 2ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

ಕೆಜಿಎಫ್‌ 2 ಇತಿಹಾಸ: ಮೊದಲ ದಿನವೇ 250 ಕೋಟಿ ಗಳಿಕೆ: ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಪ್ರದರ್ಶನ!

ತೆಲುಗು ಅಭಿಮಾನಿಯ ಕಣ್ಣೀರು: ಕೆಜಿಎಫ್‌ 2 ವೀಕ್ಷಿಸಿದ ತೆಲುಗು ಅಭಿಮಾನಿಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಾ, ಯಶ್‌ ಮತ್ತು ಪ್ರಶಾಂತ್‌ ನೀಲ್‌ರನ್ನು ಕೊಂಡಾಡುವ ವಿಡಿಯೋ ವೈರಲ್‌ ಆಗಿತ್ತು. ತಮಿಳು ಪ್ರೇಕ್ಷಕರು ಕೂಡ ಚಿತ್ರಮಂದಿರದಿಂದ ಹೊರಬರುವ ಹೊತ್ತಿಗೆ ಚಿತ್ರದ ಮೋಡಿಗೆ ಒಳಗಾಗಿ ಆರ್ಭಟಿಸುತ್ತಿದ್ದರು. ಚಿತ್ರದ ಕುರಿತು ಎಲ್ಲಾ ಭಾಷೆಗಳನ್ನೂ ಅತ್ಯುತ್ತಮ ಅಭಿಪ್ರಾಯ ದಾಖಲಾಗಿದೆ.

Follow Us:
Download App:
  • android
  • ios