MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 'ನನ್ನ ಮರ್ಯಾದೆ ಪ್ರಶ್ನೆ ಅಂದಿದ್ದೆ, ಆದ್ರೂ ಕೇಳಲಿಲ್ಲ..': ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿಬಿದ್ದ ನೋರಾ ಫತೇಹಿ!

'ನನ್ನ ಮರ್ಯಾದೆ ಪ್ರಶ್ನೆ ಅಂದಿದ್ದೆ, ಆದ್ರೂ ಕೇಳಲಿಲ್ಲ..': ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿಬಿದ್ದ ನೋರಾ ಫತೇಹಿ!

ಕನ್ನಡದ 'ಕೆಡಿ' ಚಿತ್ರದ ವಿವಾದಾತ್ಮಕ ಹಾಡಿನ ಕುರಿತು ನಟಿ ನೋರಾ ಫತೇಹಿ ಮೌನ ಮುರಿದಿದ್ದಾರೆ. ತಮಗೆ ಕನ್ನಡ ಬಾರದ ಕಾರಣ ನಿರ್ದೇಶಕರನ್ನು ನಂಬಿದ್ದೆ ಎಂದಿರುವ ಅವರು, ಹಾಡಿನ ಹಿಂದಿ ಅವತರಣಿಕೆಯ ಅಶ್ಲೀಲ ಸಾಹಿತ್ಯದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ.

2 Min read
Author : Santosh Naik
Published : Mar 18 2026, 05:25 PM IST
Share this Photo Gallery
  • FB
  • TW
  • Linkdin
  • Whatsapp
18
ರಾಷ್ಟ್ರದಲ್ಲಿ ಕೆಡಿ ವಿವಾದ
Image Credit : Youtube@AnandAudio

ರಾಷ್ಟ್ರದಲ್ಲಿ ಕೆಡಿ ವಿವಾದ

ಕನ್ನಡದ 'ಕೆಡಿ' ಚಿತ್ರದಲ್ಲಿ ಸಂಜಯ್ ದತ್ ಜೊತೆಗಿನ ನೋರಾ ಫತೇಹಿ ಅವರ ಹಾಡು ಅಶ್ಲೀಲ ಸಾಹಿತ್ಯ ಮತ್ತು ಕೀಳುಮಟ್ಟದ ನೃತ್ಯ ಸಂಯೋಜನೆಯಿಂದಾಗಿ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಪ್ರತಿಭಟನೆಗಳು ಮತ್ತು ದೂರುಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿಸಿದೆ.

28
ಲೋಕಸಭೆಯಲ್ಲಿ ಚರ್ಚೆಯಾದ ವಿವಾದ
Image Credit : Facebook

ಲೋಕಸಭೆಯಲ್ಲಿ ಚರ್ಚೆಯಾದ ವಿವಾದ

ಈ ವಿಷಯ ಲೋಕಸಭೆಯಲ್ಲೂ ಚರ್ಚೆಯಾಗಿದ್ದು, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವು ಅಬಾಧಿತವಲ್ಲ ಎಂದು ಎಚ್ಚರಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ನೋರಾ ಫತೇಹಿ ಈ ಹಾಡು ವಿವಾದವಾಗುವ ಬಗ್ಗೆ ನನಗೆ ತಿಳಿದಿತ್ತು. ಇದು ನನ್ನ ಮರ್ಯಾದೆ ಪ್ರಶ್ನೆ ಎಂದು ನಿರ್ದೇಶಕರಿಗೆ ಎಚ್ಚರಿಸಿದ್ದೆ ಎಂದು ತಿಳಿಸಿದ್ದಾರೆ.

Related Articles

Related image1
ಸರ್ಸೆ ನಿನ್ನ ಸೆರಗು ಹಾಡಿಗೆ ಭುಗಿಲೆದ್ದ ಆಕ್ರೋಶ, ನೋರಾ, ಪ್ರೇಮ್ ಸೇರಿ ಎಲ್ಲರಿಗೂ ಸಂಕಷ್ಟ
Related image2
ಕೆಡಿ ಹಾಡಿನ ವಿವಾದ; ನಿರ್ದೇಶಕ ಪ್ರೇಮ್‌ ಹಾಗೂ ಸಿನಿಮಾ ಟೀಮ್‌ ವಿರುದ್ಧ ಕೆಂಡಕಾರಿದ ನೋರಾ ಫತೇಹಿ!
38
'ನನಗೆ ಕನ್ನಡ ಗೊತ್ತಿಲ್ಲ, ನಿರ್ದೇಶಕರನ್ನು ನಂಬಿದ್ದೆ'
Image Credit : Youtube@AnandAudio

'ನನಗೆ ಕನ್ನಡ ಗೊತ್ತಿಲ್ಲ, ನಿರ್ದೇಶಕರನ್ನು ನಂಬಿದ್ದೆ'

ನೋರಾ ಫತೇಹಿ ತಮ್ಮ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ: "ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡ ಎಂಬ ಭಾಷೆಯಲ್ಲಿ ಚಿತ್ರೀಕರಿಸಿದ್ದೆ. ಅದು ಸ್ಯಾಂಡಲ್‌ವುಡ್ ಎಂಬ ಬೇರೆ ಇಂಡಸ್ಟ್ರಿಯ ಭಾಗವಾದ ಹಾಡು. ನಾನು ಈ ಹಾಡಿಗೆ ಒಪ್ಪಿಗೆ ನೀಡಿದ್ದು ಏಕೆಂದರೆ ಅದು ದೊಡ್ಡ ಸಿನಿಮಾದ ಭಾಗವಾಗಿತ್ತು ಮತ್ತು ಐಕಾನ್ ಸಂಜಯ್ ದತ್ ಅವರ ಜೊತೆಗಿನ ಹಾಡಾಗಿತ್ತು. ಅವರ ಜೊತೆ ಕೆಲಸ ಮಾಡಲು ಯಾರು ತಾನೇ 'ಬೇಡ' ಎನ್ನುತ್ತಾರೆ? ಜೊತೆಗೆ ಇದು 'ನಾಯಕ್ ನಹಿ' ಹಾಡಿನ ರಿಮೇಕ್ ಎಂದು ನಾನು ಭಾವಿಸಿದ್ದೆ' ಎಂದು ಹೇಳಿದ್ದಾರೆ.

48
ಅನುವಾದ ಮಾಡಿದಾಗ ಯಾವುದೇ ಅಶ್ಲೀಲತೆ ಇದ್ದಿರಲಿಲ್ಲ
Image Credit : Youtube@AnandAudio

ಅನುವಾದ ಮಾಡಿದಾಗ ಯಾವುದೇ ಅಶ್ಲೀಲತೆ ಇದ್ದಿರಲಿಲ್ಲ

"ಸೆಟ್‌ನಲ್ಲಿ ಚಿತ್ರೀಕರಣ ಮಾಡುವಾಗ ನಾನು ಹಾಡಿನ ಅನುವಾದಕ್ಕಾಗಿ ಚಿತ್ರತಂಡವನ್ನೇ ಅವಲಂಬಿಸಿದ್ದೆ. ಅವರು ನನಗೆ ಅನುವಾದ ಮಾಡಿ ಹೇಳಿದಾಗ ಅದರಲ್ಲಿ ಯಾವುದೇ ಅಶ್ಲೀಲತೆ ಅಥವಾ ಆಕ್ಷೇಪಾರ್ಹ ಅಂಶಗಳು ಕಂಡುಬಂದಿರಲಿಲ್ಲ. ನನಗೆ ಕನ್ನಡ ಅರ್ಥವಾಗುವುದಿಲ್ಲ, ಹಾಗಾಗಿ ಅವರು ಹೇಳಿದ್ದನ್ನೇ ನಂಬಿದೆ. ಆದರೆ ಈಗ ಅವರು ಹಿಂದಿ ಅವತರಣಿಕೆಯನ್ನು ಸೃಷ್ಟಿಸಿ, ಅದಕ್ಕೆ ಅತ್ಯಂತ ಕೆಟ್ಟ ಸಾಹಿತ್ಯವನ್ನು ಬಳಸಿ ಡಬ್ ಮಾಡಿದ್ದಾರೆ. ಇದರ ಬಗ್ಗೆ ನನಗೆ ಕಲ್ಪನೆಯೇ ಇರಲಿಲ್ಲ. ಅವರು ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ," ಎಂದು ಆರೋಪಿಸಿದ್ದಾರೆ.

58
'AI ಫೋಟೋ ಕಂಡು ಕಿರಿಕಿರಿ ಉಂಟಾಗಿತ್ತು'
Image Credit : Youtube@AnandAudio

'AI ಫೋಟೋ ಕಂಡು ಕಿರಿಕಿರಿ ಉಂಟಾಗಿತ್ತು'

ಹಾಡಿನ ಬಿಡುಗಡೆ ಸಮಾರಂಭದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡ ನೋರಾ, "ಲಾಂಚ್ ಇವೆಂಟ್‌ನಲ್ಲಿ ಕುಳಿತಾಗ ನಾನು ಕನ್ನಡ ಹಾಡನ್ನು ನೋಡಿದೆ. ಅಲ್ಲಿ ನನ್ನ ಅನುಮತಿ ಇಲ್ಲದೆ ನನ್ನ ಅತ್ಯಂತ ಅಸಹ್ಯಕರ ಫೋಟೋಗಳನ್ನು ಬಳಸಲಾಗಿತ್ತು. ಯಾರಿಗಾದರೂ ನನ್ನ ಬಗ್ಗೆ ಗೊತ್ತಿದ್ದರೆ, ನಾನು ನನ್ನ ಪ್ರತಿಯೊಂದು ಫೋಟೋವನ್ನು ಅಪ್ರೂವ್ ಮಾಡಿಯೇ ಹೊರಬಿಡುತ್ತೇನೆ ಎಂಬುದು ಅವರಿಗೆ ತಿಳಿದಿರುತ್ತದೆ. ಅಷ್ಟೇ ಅಲ್ಲ, ನನ್ನ ಮತ್ತು ಸಂಜಯ್ ದತ್ ಅವರ 'AI ಜನರೇಟೆಡ್' (AI-generated) ಚಿತ್ರಗಳನ್ನು ಬಳಸಿದ್ದರು. ನಾನು ಮೊದಲೇ AI ವಿರುದ್ಧ ಇದ್ದೇನೆ. ಹಾಗಾಗಿ ಆ ಕಾರ್ಯಕ್ರಮದಲ್ಲೇ ನನಗೆ ತುಂಬಾ ಕಿರಿಕಿರಿ ಉಂಟಾಗಿತ್ತು," ಎಂದಿದ್ದಾರೆ.

68
'ನಿರ್ದೇಶಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದೆ'
Image Credit : Youtube@AnandAudio

'ನಿರ್ದೇಶಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದೆ'

"ನಂತರ ಅವರು ಹಿಂದಿ ಹಾಡನ್ನು ಪ್ಲೇ ಮಾಡಿದರು. ನನಗೆ ಹಿಂದಿ ಅರ್ಥವಾಗುವುದರಿಂದ ಅದು ಕೇಳಿದ ತಕ್ಷಣ ನಮಗೆ ಸಮಸ್ಯೆ ಎದುರಾಗುತ್ತದೆ ಎಂದು ಖಾತ್ರಿಯಾಯಿತು. ನಾನು ಕೂಡಲೇ ನಿರ್ದೇಶಕರಿಗೆ ಹೇಳಿದೆ. 'ಇದು ಸರಿಯಲ್ಲ, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತದೆ' ಎಂದು ಹೇಳಿದ್ದೆ. ಆ ಕ್ಷಣದಿಂದಲೇ ನಾನು ಈ ಪ್ರಾಜೆಕ್ಟ್‌ನಿಂದ ದೂರ ಸರಿದೆ. ನೀವು ಗಮನಿಸಿರಬಹುದು, ನಾನು ಇದನ್ನು ಎಲ್ಲೂ ಪ್ರಚಾರ ಮಾಡಿಲ್ಲ. ನನ್ನ ಇಮೇಜ್ ಮತ್ತು ಗೌರವದ ಪ್ರಶ್ನೆ ಇಲ್ಲಿದೆ ಎಂದು ನಾನು ನಿರ್ದೇಶಕರಿಗೆ ಎಚ್ಚರಿಸಿದ್ದೆ" ಎಂದು ಅವರು ವಿವರಿಸಿದ್ದಾರೆ.

78
ನಾನು ನೆಪೋ ಕಿಡ್‌ ಅಲ್ಲ, ಗಾಡ್‌ಫಾದರ್‌ ಇಲ್ಲ
Image Credit : Youtube@AnandAudio

ನಾನು ನೆಪೋ ಕಿಡ್‌ ಅಲ್ಲ, ಗಾಡ್‌ಫಾದರ್‌ ಇಲ್ಲ

"ನಾನೇನು 'ನೆಪೋ ಕಿಡ್' (Nepo kid) ಅಲ್ಲ. ನನ್ನ ಹಿಂದೆ ಯಾವುದೇ ದೊಡ್ಡ ಶಕ್ತಿ ಅಥವಾ ಅಧಿಕಾರ ಇಲ್ಲ. ನಮಗೆ ಇಂತಹ ಸಂದರ್ಭಗಳಲ್ಲಿ ನಿಯಂತ್ರಣ ಕಡಿಮೆ ಇರುತ್ತದೆ. ಕೆಲವು ಉದ್ಯಮಗಳಲ್ಲಿ ನಮ್ಮ ಅಭಿಪ್ರಾಯಕ್ಕೆ ಬೆಲೆ ಕೊಡುವುದಿಲ್ಲ," ಎಂದು ಸ್ಯಾಂಡಲ್‌ವುಡ್‌ ಬಗ್ಗೆ ನೋರಾ ಬೇಸರ ವ್ಯಕ್ತಪಡಿಸಿದ್ದಾರೆ.

88
 ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ನೋರಾ
Image Credit : Instagram

ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ನೋರಾ

ಹಾಡಿನ ವಿರುದ್ಧ ಧ್ವನಿ ಎತ್ತಿದ ಜನರಿಗೆ ಧನ್ಯವಾದ ತಿಳಿಸಿರುವ ಅವರು, "ನಿಮ್ಮ ಆಕ್ರೋಶದ ಕಾರಣದಿಂದಲೇ ಈ ಹಾಡನ್ನು ತೆಗೆದುಹಾಕಲು ಸಾಧ್ಯವಾಯಿತು. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ ಮಾಧ್ಯಮಗಳಿಗೆ ನನ್ನದೊಂದು ವಿನಂತಿ, ಇಂತಹ ವಿವಾದಗಳು ಬಂದಾಗ ಕೇವಲ ಕಲಾವಿದರ ಹೆಸರನ್ನು ಬಳಸಬೇಡಿ. ಇಂತಹ ಕಂಟೆಂಟ್ ಸೃಷ್ಟಿಸುವ ನಿರ್ದೇಶಕರು ಮತ್ತು ನಿರ್ಮಾಪಕರನ್ನು ಹೊಣೆಗಾರರನ್ನಾಗಿ ಮಾಡಿ. ಆಗ ಮಾತ್ರ ಅವರಿಗೆ ಭಯ ಮತ್ತು ಜವಾಬ್ದಾರಿ ಬರುತ್ತದೆ. ಇನ್ನು ಮುಂದೆ ನಾನು ಇಂತಹ ವಿಷಯಗಳಲ್ಲಿ ಹೆಚ್ಚು ಕಟ್ಟುನಿಟ್ಟಾಗಿ ಇರುತ್ತೇನೆ," ಎಂದು ಮಾತು ಮುಗಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಸಿನಿಮಾ
ವಿವಾದ
ಸುದ್ದಿ
Latest Videos
Recommended Stories
Recommended image1
ಕೆಡಿ ಹಾಡಿನ ವಿವಾದ; ನಿರ್ದೇಶಕ ಪ್ರೇಮ್‌ ಹಾಗೂ ಸಿನಿಮಾ ಟೀಮ್‌ ವಿರುದ್ಧ ಕೆಂಡಕಾರಿದ ನೋರಾ ಫತೇಹಿ!
Recommended image2
ಹನಿಮೂನ್ ಹೋಗೋ ಹೊತ್ತಲ್ಲಿ ಸಿನಿಮಾ ಸೆಟ್‌ಗೆ ಬಂದ ರಶ್ಮಿಕಾ ಮಂದಣ್ಣ; ನಟಿಯ 'ಪ್ರೊಫೆಶನಲಿಸಂ' ಕಂಡು ಹೌಹಾರಿದ ಬಾಲಿವುಡ್!
Recommended image3
ಕೆಡಿ ಸಿನಿಮಾ ಸರ್ಸೆ ಹಾಡಿನ ವಿವಾದಕ್ಕೆ ಇಡೀ ಸಿನಿಮಾ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮತ್ತೊಂದು ದೂರು ದಾಖಲು!
Related Stories
Recommended image1
ಸರ್ಸೆ ನಿನ್ನ ಸೆರಗು ಹಾಡಿಗೆ ಭುಗಿಲೆದ್ದ ಆಕ್ರೋಶ, ನೋರಾ, ಪ್ರೇಮ್ ಸೇರಿ ಎಲ್ಲರಿಗೂ ಸಂಕಷ್ಟ
Recommended image2
ಕೆಡಿ ಹಾಡಿನ ವಿವಾದ; ನಿರ್ದೇಶಕ ಪ್ರೇಮ್‌ ಹಾಗೂ ಸಿನಿಮಾ ಟೀಮ್‌ ವಿರುದ್ಧ ಕೆಂಡಕಾರಿದ ನೋರಾ ಫತೇಹಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved