ಅಂದು ಶಾರುಖ್ ಇಂದು ವಿಜಯ್; KGF 2 ಮುಂದೆ ಹೀನಾಯ ಸೋತ 'ಬೀಸ್ಟ್'

ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್ 2 ಮುಂದೆ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಹೀನಾಯ ಸೋಲು ಕಂಡಿದೆ. ಬೀಸ್ಟ್ ಬಿಡುಗಡೆಯಾಗಿ 4ನೇ ದಿನ ಚಿತ್ರಮಂದಿಗಳು ಖಾಲಿಯಾಗಿದ್ದು ಕೆಜಿಎಫ್-2 ನೋಡಲು ಸಿನಿ ಪ್ರಿಯರು ಮುಗಿಬಿದ್ದಿದ್ದಾರೆ. 

Thalapathy Vijay starrer beast film declines further gets affected by KGF Chapter 2

ಬಾಲಿವುಡ್ ನಲ್ಲಿ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಸುನಾಮಿ ಎಬ್ಬಸಿದೆ. ಕೆಜಿಎಫ್-2 ಸಿನಿಮಾ ಬಾಕ್ಸ್ ಆಫೀಸ್ ಗಳಿಕೆ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಲಿವುಡ್ ನಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ. ಅಲ್ಲದೆ ಯಶ್ ಸಿನಿಮಾ ಮುಂದೆ ತಮಿಳಿನ ಸ್ಟಾರ್ ನಟ ಇಳಯದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಮಕಾಡೆ ಮಲಗಿಸಿದೆ.

ಕೆಜಿಎಫ್-2 ದೇಶ-ವಿದೇಶದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿದ ಸಿನಿಮಾ. ರಾಕಿ ಭಾಯ್ ಗಾಗಿ ಸಿನಿ ಪ್ರಿಯರು ಭಾರಿ ಕುತೂಹಲ ಮತ್ತು ನಿರೀಕ್ಷೆಯಿಂದ ಕಾದಿದ್ದರು. ಕೆಜಿಎಫ್-2 ಸಿನಿಮಾ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎಂದು ಅನೌನ್ಸ್ ಮಾಡುತ್ತಿದ್ದಂತೆ ಸಿನಿಮಾ ನೋಡಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕುಳಿತಿದ್ದರು. ಎಲ್ಲೆಲ್ಲೂ ಕೆಜಿಎಫ್-2 ಸಿನಿಮಾದೇ ಹವಾ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಸಿನಿಮಾದ ನಡುವೆ ತಮಿಳು ನಟ ವಿಜಯ್ ಅಭಿನಯ ಬೀಸ್ಟ್ ಸಿನಿಮಾವನ್ನು ಎಪ್ರಿಲ್ 13ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು. ಕೆಜಿಎಫ್-2 ಕ್ರೇಜ್ ಬಗ್ಗೆ ಗೊತ್ತಿದ್ದರೂ ವಿಜಯ್ ಬೀಸ್ಟ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿರುವುದು ಕನ್ನಡ ಸಿನಿಮಾಗೆ ಸವಾಲ್ ಹಾಕಿದ ರೀತಿ ಇತ್ತು.

ಚಿತ್ರರಂಗದಲ್ಲಿ ಅನೇಕ ವರ್ಷ ಪಳಗಿರುವ ನಟ ವಿಜಯ್. ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಕೂಡ ಒಬ್ಬರು. ದೊಡ್ಡ ಮಟ್ಟದ ಫ್ಯಾನ್ ಫಾಲೋವರ್ಸ್ ಹೊಂದಿರುವ ನಟ ವಿಜಯ್ ಕೆಜಿಎಫ್-2 ಸಿನಿಮಾ ಮುಂದೆ ಬಂದಿರುವುದು ದೊಡ್ಡ ತಪ್ಪಿನ ನಿರ್ಧಾರ ಎನ್ನುವುದು ಇದೀಗ ಅರಿವಾದಂತೆ ಇದೆ. ಯಾಕೆಂದರೆ ಬಾಕ್ಸ್ ಆಫೀಸ್ ನಲ್ಲಿ ಬೀಸ್ಟ್ ಹೇಳಹೆಸರಿಲ್ಲದೆ ಧೂಳಿಪಟವಾಗಿದೆ. ಮೊದಲರೆಡು ದಿನಗಳಲ್ಲಿ ಬೀಸ್ಟ್ ಸಿನಿಮಾ ವಿಶ್ವದಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 3 ದಿನಗಳಲ್ಲಿ ಬೀಸ್ಟ್ ಸಿನಿಮಾ 127 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲೇ ಬೀಸ್ಟ್ ಸಿನಿಮಾ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಎಲ್ಲರೂ ಮುಗಿಬಿದ್ದು ಕೆಜಿಎಫ್ 2 ವೀಕ್ಷಿಸುತ್ತಿದ್ದಾರೆ. ಮುಂಗಡ ಬುಕ್ಕಿಂಗ್ ನಲ್ಲಿ ಕೆಜಿಎಫ್-2 ಹೌಸ್ ಫುಲ್ ಆಗಿದೆ.

KGF 2; ಬಿಡುಗಡೆಯಾಗಿ ಎರಡೇ ದಿನಕ್ಕೆ ಹಿಂದಿಯಲ್ಲಿ 100 ಕೋಟಿ ಕ್ಲಬ್ ಸೇರಿದ ಯಶ್ ಸಿನಿಮಾ

ಬೀಸ್ಟ್ ಸಿನಿಮಾ ಕಲೆಕ್ಷನ್ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನೇ ದಿನ ಬೀಸ್ಟ್ 30 ಕೋಟಿ ರೂಪಾಯಿ ಗಳಿಕ ಮಾಡಿದೆ. ಇದುವರೆಗೂ ಬೀಸ್ಟ್ ವಿಶ್ವದಾದ್ಯಂತ 127 ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳುನಾಡಿನಲ್ಲಿ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿಲ್ಲ. ಆದರೆ ಕೆಜಿಎಫ್-2 ಟಿಕೆಟ್ ಹೆಚ್ಚಾಗಿ ಮಾರಾಟವಾಗುತ್ತಿವೆ ಎಂದು ಹೇಳಿದ್ದಾರೆ.

ಅಂದು ಶಾರುಖ್ ಖಾನ್ ಸಿನಿಮಾಗೂ ಇದೇ ಸ್ಥಿತಿ

ಕೆಜಿಎಫ್ 1 ಬಿಡುಗಡೆಯ ವೇಳೆಯೂ ಉಳಿದ ಸಿನಿಮಾಗಳ ಸ್ಥಿತಿ ಹೀಗೆ ಆಗಿತ್ತು. ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಕನ್ನಡ ಸಿನಿಮಾ ಮುಂದೆ ಮಂಡಿಯೂರಿದ್ದರು. ಕೆಜಿಎಫ್-2 ಬಿಡುಗಡೆ ದಿನವೇ ತೆರೆಗೆ ಬಂದ ಝೀರೋ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಕನ್ನಡ ಸಿನಿಮಾ ನಟನ ಮುಂದೆ ಸೋಲು ಕಂಡ ಶಾರುಖ್ ಬಳಿಕ ಬಣ್ಣ ಹಚ್ಚುವುದನ್ನೇ ಬಿಟ್ಟಿದ್ದರು. ಈ ಸಿನಿಮಾ ಬಳಿಕ ಶಾರುಖ್ ಅವರ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಅನೇಕ ವರ್ಷಗಳ ಬಳಿಕ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಅಂದು ಶಾರುಖ್ ಸೋತ ಹಾಗೆ ಈಗ ವಿಜಯ್ ಸಿನಿಮಾ ಕೂಡ ಸೋಲು ಅನುಭವಿಸಿದೆ.

ಬಾಲಿವುಡ್ ಮೇಲೆ ಸ್ಯಾಂಡಲ್ ವುಡ್ ಎಸೆದ ಅಣುಬಾಂಬ್; KGF 2 ಬಗ್ಗೆ RGV ಪ್ರತಿಕ್ರಿಯೆ

ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ನೆಲ್ಸನ್ ದಿಲೀಪ್ ಕುಮಾರ್ ಸಾರಥ್ಯದಲ್ಲಿ ಬಂದ ಸಿನಿಮಾ. ಚಿತ್ರದಲ್ಲಿ ವಿಜಯ್ ಅBರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಮೊದಲ ಬಾರಿಗೆ ಪೂಜಾ, ವಿಜಯ್ ಜೊತೆ ತೆರೆಹಂಚಿಕೊಂಡಿದ್ದರು. ಸನ್ ಪಿಕ್ಚರ್ ನಿರ್ಮಾಣ ಮಾಡಿತ್ತು.

Latest Videos
Follow Us:
Download App:
  • android
  • ios