KGF 2 ವೀಕ್ಷಿಸಿದ ರಜನಿಕಾಂತ್; ರಾಕಿ ಭಾಯ್ ನೋಡಿ ತಲೈವಾ ಹೇಳಿದ್ದೇನು?
ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಬರೆದಿರುವ ಕೆಜಿಎಫ್-2 ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್(Rajinikanth) ವೀಕ್ಷಿಸಿದ್ದಾರೆ. ಚೆನ್ನೈನಲ್ಲಿ ಕನ್ನಡದಲ್ಲೇ ರಜನಿಕಾಂತ್ ಸಿನಿಮಾ ವೀಕ್ಷಸಿದ ಬಗ್ಗೆ ಅನೇಕರು ಕಾಮೆಂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2(KGF 2) ಸಿನಿಮಾಗೆ ವಿಶ್ವದಾದ್ಯಂತ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಸಿನಿಮಾ ವೀಕ್ಷಿಸಿ ಹಾಡಿಹೊಗಳುತ್ತಿದ್ದಾರೆ. ಇದೀಗ ಎಲ್ಲಿನೋಡಿದ್ರು ಯಶ್ ಕೆಜಿಎಫ್-2 ಸಿನಿಮಾದ್ದೇ ಹವಾ. ಚಿತ್ರ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಬರೆದಿರುವ ಕೆಜಿಎಫ್-2 ಸಿನಿಮಾವನ್ನು ಸೂಪರ್ ಸ್ಟಾರ್ ರಜನಿಕಾಂತ್(Rajinikanth) ವೀಕ್ಷಿಸಿದ್ದಾರೆ. ಚೆನ್ನೈನಲ್ಲಿ ಸಿನಿಮಾ ವೀಕ್ಷಸಿದ ಬಗ್ಗೆ ಅನೇಕರು ಕಾಮೆಂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೆಜಿಎಫ್-2 ಸಿನಿಮಾಗೆ ರಜನಿಕಾಂತ್ ಮನಸೋತಿದ್ದಾರೆ. ಕನ್ನಡದಲ್ಲೇ ಕೆಜಿಎಫ್ ವೀಕ್ಷಿಸಿದ ರಜನಿಕಾಂತ್ ಸಿನಿಮಾ ನೋಡಿದ ಬಳಿಕ ನಿರ್ಮಾಪಕ ವಿಜಯ್ ಕಿರಗಂದೂರ್(Vijay Kiragandur) ಅವರಿಗೆ ಕರೆಮಾಡಿ ಮಾತನಾಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಕೆಜಿಎಫ್-2 ಚಿತ್ರವನ್ನು ತಲೈವಾ ರಜನಿಕಾಂತ್ ಕೂಡ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೆಜಿಎಫ್2 ಸಿನಿಮಾ ವೀಕ್ಷಿಸಿ ಬಳಿಕ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಬಾಕ್ಸಾಫೀಸ್ ಮೂನ್ ಸ್ಟಾರ್ ಯಶ್, ಮೊದಲ ದಿನದ KGF 2 ಗಳಿಕೆ ಎಷ್ಟು ಗೊತ್ತಾ.?
ರಜನಿಕಾಂತ್ ಕೆಜಿಎಫ್-2 ಸಿನಿಮಾಗೆ ಪ್ರಶಂಸೆ ವ್ಯಕ್ತಪಡಿಸಿರುವ ವಿಚಾರ ಅಭಿಮಾನಿಗಳಿಗೆ ಸಂತಸ ನೀಡಿದೆ. ಹೊಂಬಾಳೆ ಫಿಲ್ಮ್ಸ್ ಜೊತೆ ರಜನಿಕಾಂತ್ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಇನ್ನು ಅನೇಕರು ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ಬಾಲಿವುಡ್ ನಲ್ಲಿ ದಾಖಲೆ ಬರೆದ ಕೆಜಿಎಫ್ 2
ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಲಿವುಡ್ ನಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ.
ಅಂದು ಶಾರುಖ್ ಇಂದು ವಿಜಯ್; KGF 2 ಮುಂದೆ ಹೀನಾಯ ಸೋತ 'ಬೀಸ್ಟ್'
ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದೆ. ಈ ಬಗ್ಗೆ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಕೆಜಿಎಫ್-2 2ನೇ ದಿನ 46.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಹಿಂದಿಯಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಶುಕ್ರವಾರ 46.79 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟ್ಟು 100.47 ಕೋಟಿ ಕಲೆಕ್ಷನ್ ಮಾಡಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.